Blog

ಶಾಸಕರ ಮೇಲೆ ದಬ್ಬಾಳಿಕೆ ನಿಲ್ಲಿಸದಿದ್ದರೆ ಹೋರಾಟ – ಎಸ್ ಸಿ ಮೋರ್ಚಾ ಎಚ್ಚರಿಕೆ

🔴ಶಾಸಕರ ಮೇಲೆ ದಬ್ಬಾಳಿಕೆ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟಿಸುವುದಾಗಿ ಎಚ್ಚರಿಕೆ.

🔴ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪತ್ರಿಕಾ ಗೋಷ್ಠಿ

ಆಲೂರು:ಆಲೂರು ಕಟ್ಟಾಯ ಸಕಲೇಶಪುರ ಕ್ಷೇತ್ರದ ಶಾಸಕರ ವಿರುದ್ದ ಕಮಿಷನ್ ಆರೋಪವನ್ನು ಮಾಜಿ ಶಾಸಕರಾದ ಹುರುಡಿ ವಿಶ್ವನಾಥ್ ಅವರು ಪ್ರಸ್ತಾಪ ಮಾಡಿದ್ದನ್ನು ಖಂಡಿಸಿ ಇಂದು ತಾಲ್ಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ನೋ) ಕಚೇರಿಯ ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ತಾಲ್ಲೂಕು ಅಧ್ಯಕ್ಷರಾದ ದೇವರಾಜ್ ಕಣತೂರು ಅವರು ಮಾಜಿ ಶಾಸಕ ಹುರುಡಿ ವಿಶ್ವನಾಥ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕರಾದ ವಿಶ್ವನಾಥ್ ಹಾಲಿ ಶಾಸಕರಾದ ಸಿಮೆಂಟ್ ಮಂಜು ಅವರ ಬಗ್ಗೆ ಮಂಜುರಾದ ಅನುಧಾನದಲ್ಲಿ ಕಮಿಷನ್ ತೆಗೆದುಕೊಂಡು ಭೂಮಿ ಪೂಜೆ ಮಾಡಬೇಕೆ,ಅಂತಹ ನೀಚ ಮನಸ್ಥಿತಿ ಶಾಸಕರಿಗೆ ಯಾಕೆ ಬೇಕು? ಅನುಧಾನ ಬಂದರೇ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿ ಕೆಲಸ ಮಾಡಲು ತಿಳಿಸಿದರೆ ಸಾಕು,ಇವರಿಗೇಕೆ ಕಮಿಷನ್ ಉಸಾಬರೀ. ಅದಲ್ಲದೇ ಭೂಮಿ ಪೂಜೆಗೆ ಮೋದಲೇ ಕಮಿಷನ್ ಕೊಡಬೇಕು ನಂತರ ಶಾಸಕರು ಹೇಳಿದ ದಿನವೇ ಭೂಮಿ ಪೂಜೆ ಮಾಡಬೇಕು,ಅಲ್ಲದೇ ಸ್ಥಳಿಯರಿಗೆ ಗುತ್ತಿಗೆ ನೀಡದೆ ಜಿಲ್ಲೆಯವರಿಗೆ ಗುತ್ತಿಗೆ ನೀಡುತ್ತಿರುವುದು ವಿಪರ್ಯಾಸ ಅಲ್ಲವೇ ಎಂದು ಗುತ್ತಿಗೆದಾರ ಲೊಕೇಶ್ ಪರವಾಗಿ ಪ್ರಶ್ನಿಸಿದ್ದರು.

ಇಂದು ಮಾಜಿ ಶಾಸಕರ ಪ್ರಶ್ನೆಗೆ ಪತ್ರಿಕಾಗೋಷ್ಠಿಯ ಮೂಲಕ ಪ್ರತ್ಯುತ್ತರ ನೀಡಿದ ದೇವರಾಜ್ ಕಣತೂರು ಅವರು ನಮ್ಮ ಕ್ಷೇತ್ರದಲ್ಲಿ ತಳ ದಲಿತ ಸಮುದಾಯದ ಒಬ್ಬ ವ್ಯಕ್ತಿ ಶಾಸಕರಾಗಿ ಅವರ ಕಾರ್ಯವೈಖರಿ ಮತ್ತು ಪ್ರತಿಯೋಂದು ಸಮಸ್ಯೆಗೂ ಸ್ಪಂದಿಸುವ ಮೂಲಕ ಜನಮನಗೆದ್ದ ನಾಯಕರೆಂದು ಗುರುತಿಸಿಕೊಂಡಿರುವುದನ್ನು ಸಹಿಸಲಾಗುತ್ತಿಲ್ಲ,ಮಾಜಿ ಶಾಸಕರು ಏನೇನು ಕೆಲಸ ಮಾಡಿದ್ದಾರೆ ಎಂದು ಕ್ಷೇತ್ರದ ಜನತೆಗೆ ಗೊತ್ತಿದೆ,ಯಾವುದೇ ವಿಚಾರವನ್ನು ಮಾತನಾಡುವಾಗ ಪೂರ್ವಪರ ಯೋಚಿಸಿ ದಾಖಲೆ ಸಹಿತ ಪ್ರಶ್ನಿಸಬೇಕು,ಸಾಬೀತಾದ ನಂತರ ಕ್ರಮ ತೆಗೆದುಕೊಳ್ಳಲಿ.ಸುಮ್ಮನೇ ನಾಲಿಗೆ ಹರಿಬಿಡುವುದು ಸರಿಯಲ್ಲ,ಎರಡು ಸಾವಿರದ ನೋಟು ಮತ್ತು ಐದುನೂರು ನೋಟಿಗಳಿಗೆ ಹೋಲಿಸಿ ತಿರುಗೇಟು ನೀಡಿದರು,ರಾಜಕೀಯದಲ್ಲಿ ಹಿರಿಯರಿದ್ದಾರೆ ಅವರದೇ ಆದ ಘನತೆಯಿದೆ ಅದನ್ನು ಉಳಿಸಿಕೊಳ್ಳಲಿ ಎಂದು ವಿಶಾದ ವ್ಯಕ್ತಪಡಿಸಿದರು.

ದಲಿತ ಮಿಸಲಾತಿ ಕ್ಷೇತ್ರದಲ್ಲಿ ದಲಿತ ಶಾಸಕರು ಕಾರ್ಯಪ್ರವೃತ್ತರಾಗಿ ಪ್ರಗತಿ ಕಾರ್ಯಗಳನ್ನು ಮಾಡುತ್ತಿರುವುದು ವಿಶ್ವನಾಥ್ ಅವರಿಗೆ ಸಹಿಸಲಾಗುತ್ತಿಲ್ಲ,ತಮ್ಮ ಅಧಿಕಾರಾವಧಿಯಲ್ಲಿ ಮಾಡಿದಂತಹ ಆರೋಪಗಳನ್ನು ಇಂದು ನಮ್ಮ ಶಾಸಕರ ಮೇಲೆ ಆರೋಪ ಮಾಡಲು ಬರಬೇಡಿ,ಇಂದು ಶಾಲಾ ವಿಧ್ಯಾರ್ಥಿಗಳ ಹತ್ತಿರ ಶಾಸಕರ ಮೊಬೈಲ್ ನಂಬರ್ ಇದೆ. ಅಂದರೆ ನೀವೇ ಅರ್ಥೈಸಿಕೊಳ್ಳಿ ಶಾಸಕರ ಒಳ್ಳೆಯ ಕೆಲಸವೇ ಅವರು ಮಾಡಿರುವ ಹೆಸರು,ಮುಂದೆ ತಮ್ಮ ನಾಲಿಗೆ ಹರಿಬಿಡುವುದನ್ನು ಕಡಿಮೆ ಮಾಡಿದರೆ ನಿಮಗೆ ಒಳಿತು ಎಂದು ಬಿಜೆಪಿ ಮಾಜಿ ಎಸ್ಸಿ ಮೊರ್ಚಾ ಅಧ್ಯಕ್ಷರು ಹಾಗೂ ಮಾಜಿ ಗ್ರಾ.ಪಂ ಸದಸ್ಯರಾದ ಬಾಲಲೋಚನ್ ಬ್ಯಾಬ ಜಾಗೃತೆ ತಿಳಿಸಿದರು.

ಇದೇ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಜೆಸಿಬಿ ಲೋಕೇಶ್ ಮಾತನಾಡಿ ಮಾಜಿ ಶಾಸಕರೇ ನೀಮಗೆ ಪಕ್ಷದಿಂದ ಎಂ.ಎಲ್.ಸಿ ಟಿಕೇಟ್ ನೀಡಿದ್ದಾಗ ದಲಿತರು ಕೂಡಾ ಮತ ಹಾಕಿದ್ದೇವೆ ನೆನಪಿರಲಿ,ನೀವು ಯಾವ ಪಕ್ಷದಲ್ಲಿ ಇದ್ದೀರಾ ಎಂಬುದನ್ನ ಮೊದಲು ಸಾಬೀತು ಪಡಿಸಿ,ಇದೇ ರೀತಿ ತಮ್ಮ ನಾಲಿಗೆ ಹರಿಬಿಟ್ಟು ಮುಂದುವರೆದರೆ ಮನೆಗೆ ಮುತ್ತಿಗೆ ಹಾಕುತ್ತೇವೆ ಅಲ್ಲದೇ ರಾಜ್ಯ ಮಟ್ಟದಲ್ಲೂ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.


ಪತ್ರಿಕೆಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗೇಶ್ ಆನೆಗೆಳಲೆ.ಕೇಶವಮೂರ್ತಿ ಮುದಿಗೆರೆ.ತಾಲ್ಲೂಕು ಉಪಾಧ್ಯಕ್ಷರಾದ ಪುಟ್ಟ ರಂಗನಾಥ್. ಮಾಜಿ ಅಧ್ಯಕ್ಷರಾದ ಬಾಲಲೋಚನ ಬ್ಯಾಬ.ತಾಲ್ಲೂಕು ಮಾಜಿ ಉಪಾಧ್ಯಕ್ಷರು ಬಸವರಾಜ್.ಮುಖಂಡರುಗಳಾದ ಮಂಜುನಾಥ್ ಆಕಾಶವಾಣಿ.ಕರಿಯಯ್ಯ ಅಂಬೇಡ್ಕರ್ ನಗರ ಮುಂತಾದವರು ಉಪಸ್ಥಿತರಿದ್ದರು.

Related posts

ಬೇಲೂರುನಲ್ಲಿ ರೌಡಿ ಶೀಟರ್ ಅನುಮಾನಸ್ಪದ ಸಾವು

Bimba Prakashana

ಹಳೆಯ ನೆನಪುಗಳು

Bimba Prakashana

ಆಲೂರು ಹರ್ಷಿತ ಯೋಜನೆಯಿಂದ ತರಬೇತಿ ಶಿಬಿರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More