Blog

ಆಲೂರುನಲ್ಲಿ ಕೆಂಪೇಗೌಡ ಜಯಂತಿ

ಆಲೂರು: ಸರ್ವ ಜನಾಂಗ, ಸರ್ವ ಧರ್ಮವನ್ನು ಗುರುತಿಸಿ ಪ್ರತಿಯೊಬ್ಬರ ಶ್ರೇಯೋಭಿವೃದ್ಧಿಗೆ, ಐದು ಶತಮಾನದ ಹಿಂದೆfc ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರನ್ನು ನಿರ್ಮಾಣ ಮಾಡಿದವರು ನಾಡಪ್ರಭು ಕೆಂಪೇಗೌಡರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ ತಿಳಿಸಿದರು.


ಪಟ್ಟಣದ ಮಿನಿ ವಿದಾನಸೌಧ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಲಾಗಿದ್ದ 517ನೆ ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭೂಗರ್ಭ ಮತ್ತು ಆರ್ಥಿಕ ತಜ್ಞರಾಗಿದ್ದ ಕೆಂಪೇಗೌಡರು ದೂರದೃಷ್ಟಿಯುಳ್ಳವರಾಗಿದ್ದರು. ಪ್ರತಿಯೊಂದು ವೃತ್ತಿಯವರನ್ನು ಗೌರವಿಸಿ ಅವರ ಜೀವನದ ವೃದ್ಧಿಗಾಗಿ ವಿವಿಧ ಪೇಟೆಗಳನ್ನು ತೆರೆಯುವ ಮೂಲಕ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಿದರು ಎಂದರು.


ತಾಲ್ಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ. ಎಸ್. ಮಂಜೇಗೌಡ ರವರು ಮಾತನಾಡಿ, ರಾಜಕಾರಿಣಿಗಳು ಸ್ವಇಚ್ಚೆ ರಾಜಕಾರಣ ಕೈಬಿಟ್ಟು ಎಲ್ಲ ವರ್ಗದವರನ್ನೂ ಒಗ್ಗೂಡಿಸುವ ಮಾರ್ಗ ತೋರಿಸಿದವರು ಕೆಂಪೇಗೌಡರು. ರಾಷ್ಟಿçÃಯ ಹಬ್ಬಗಳ ಸಂದರ್ಭಗಳಲ್ಲಿ, ತಾಲ್ಲೂಕಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಮಾಜದ ಗಣ್ಯರನ್ನು ತಾಲ್ಲೂಕು ಆಡಳಿತ ಗಮನಿಸಬೇಕು ಎಂದರು.
ಮುಖ್ಯ ಭಾಷಣಕಾರ ಸಾಹಿತಿ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ರವರು ಮಾತನಾಡಿ, ಕೆಂಪೇಗೌಡರು ಜಾತ್ಯಾತೀತ, ಧರ್ಮಾತೀತ ವ್ಯಕ್ತಿಯಾಗಿದ್ದರಿಂದ ರಾಜರ ಗುಣಗಳು ಅವರಲ್ಲಿದ್ದವು. ಯಲಹಂಕ ರಾಜಮನೆತನದಲ್ಲಿ ಜನಿಸಿದ ಕೆಂಪೇಗೌಡರು, ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಮೊಲವೊಂದನ್ನು ನಾಯಿ ಓಡಿಸಿಕೊಂಡು ಹೋಗುತ್ತಿದ್ದಾಗ, ಆ ಮೊಲವು ಹೆದರದೆ ನಾಯಿಗೆ ಎದುರಾಗಿ ನಿಂತುದನ್ನು ಗಮನಿಸಿ, ಈ ಮಣ್ಣಿನಲ್ಲಿ ಧೈರ್ಯದ ವಿಶೇಷತೆ ಇದೆ ಎಂಬುದನ್ನು ಗಮನಿಸಿ, ರಾಜತಾಂತ್ರಿಕ, ಆಡಳಿತ ಮತ್ತು ಆರ್ಥಿಕ ವ್ಯವಸ್ಥೆಯನ್ನು ರೂಪಿಸಿದರು. ಅಂದು ನಿರ್ಮಾಣ ಮಾಡಿದ ಸಾವಿರಾರು ಕೆರೆಗಳನ್ನು ಮುಚ್ಚಿ ನಗರೀಕರಣವಾಗಿ ಪರಿವರ್ತಿಸಿರುವುದರಿಂದ ಪ್ರಕೃತಿ ಕೋಪಕ್ಕೆ ಗುರಿಯಾಗಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  


ಉಪ ತಹಸೀಲ್ದಾರ್ ರಮೇಶ್, ಪ. ಪಂ. ಮುಖ್ಯಾಧಿಕಾರಿ ಮಂಜುನಾಥ್, ತಾ. ವಕ್ಕಲಿಗರ ಸಂಘದ ಖಜಾಂಚಿ ಶಾಂತಕೃಷ್ಣ, ತಾ. ನೌಕರರ ಸಂಘದ ಅಧ್ಯಕ್ಷ ವರದರಾಜು ಉಪಸ್ಥಿತರಿದ್ದರು.
ಕೆಂಪೇಗೌಡರು ದೂರದೃಷ್ಟಿ ಹರಿಕಾರರು: ಎ. ಜೆ. ಕೃಷ್ಣೇಗೌಡ.
ಆಲೂರು ಮಿನಿ ವಿದಾನಸೌಧ ಸಭಾಂಗಣದಲ್ಲಿ ನಡೆದ ಕೆಂಪೇಗೌಡರ ಜಯಂತಿ ಆಚರಣೆ ಕುರಿತು ಮಾತನಾಡಿದ ಕೊಟ್ರೇಶ್ ಎಸ್. ಉಪ್ಪಾರ್ ರವರನ್ನು ತಾಲ್ಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.

Related posts

ಹೆತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಮಕ್ಕಳಿಗೆ ನೋಟ್ ಬುಕ್ ವಿತರಣೆ

Bimba Prakashana

ಲೈಟ್ ಕಂಬಕ್ಕೆ ಡಿಕ್ಕಿ ಆದ ಗೋ ಕಳ್ಳತನ ವಾಹನ

Bimba Prakashana

ನೀರಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More