Blog

ಅಪೂರ್ಣ ಕಾಮಗಾರಿ ಉದ್ಘಾಟನೆ



ಅಪೂರ್ಣ ಕಾಮಗಾರಿಗೆ ಉದ್ಘಾಟನೆ ನಡೆಸಿರುವುದು ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ – ಚೇತನ್ ಸಿ. ಗೌಡ

ಬೇಲೂರು: ಇನ್ನೂ ಮೇಲ್ಚಾವಣಿ ಸೇರಿದಂತೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ನಾಮಫಲಕ ಅಳವಡಿಸಿ ಮಾನ್ಯ ಶಾಸಕರಿಂದ ಉದ್ಘಾಟನೆ ನಡೆಸಿರುವುದು ಖಂಡನೀಯ. ಅಭಿವೃದ್ಧಿ ಕಾಮಗಾರಿಗಳನ್ನು ಜನಸೇವೆಯ ದೃಷ್ಟಿಯಿಂದ ಪೂರ್ಣಗೊಳಿಸುವ ಬದಲು, ಅಪೂರ್ಣ ಕಾಮಗಾರಿಯನ್ನು ರಾಜಕೀಯ ಪ್ರಚಾರದ ವೇದಿಕೆಯಾಗಿ ಬಳಸಿರುವುದು ಜನರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಚೇತನ್ ಗೌಡ ತಿಳಿಸಿದ್ದಾರೆ .

ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾಗುವ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದ ನಂತರವೇ ಉದ್ಘಾಟನೆ ಮಾಡುವುದು ಆಡಳಿತದ ಜವಾಬ್ದಾರಿಯಾಗಿದೆ. ಆದರೆ ಇಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಉದ್ಘಾಟನೆ ನಡೆಸಿರುವುದು ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನವಾಗಿದೆ.

ಈ ಕಾಮಗಾರಿಯ ಗುಣಮಟ್ಟ, ಕಾಮಗಾರಿ ಪೂರ್ಣಗೊಂಡಿರುವ ಪ್ರಮಾಣ ಹಾಗೂ ಉದ್ಘಾಟನೆಗೆ ಅನುಮತಿ ನೀಡಿದ ಅಧಿಕಾರಿಗಳ ಪಾತ್ರದ ಬಗ್ಗೆ ಸಂಬಂಧಪಟ್ಟ ಇಲಾಖೆಯು ಸ್ಪಷ್ಟನೆ ನೀಡಬೇಕು. ಉಳಿದ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಸುರಕ್ಷಿತವಾಗಿ ಒದಗಿಸಬೇಕು.

“ಫೋಟೋ ಮತ್ತು ನಾಮಫಲಕಕ್ಕಿಂತ ಜನರ ಹಿತ ಮುಖ್ಯ. ಅಭಿವೃದ್ಧಿ ಎಂದರೆ ಪ್ರಚಾರವಲ್ಲ, ಗುಣಮಟ್ಟದ ಕೆಲಸ ಎಂದು ಅವರು ಹೇಳಿದ್ದಾರೆ

Related posts

ಕೋಣದ ಹಾರಾಟ – ರೈತ ಕೆರೆಯಲ್ಲಿ ಮುಳುಗಿ ಮೃತ್ಯು

Bimba Prakashana

ಸಕಲೇಶಪುರದಲ್ಲಿ ಆರೋಗ್ಯ ಶಿಬಿರ

Bimba Prakashana

ಬರ ಪಟ್ಟಿಯಿಂದ ಆಲೂರು ಹೊರಕ್ಕೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More