Blog

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಹಲ್ಲೆ ಪ್ರಕರಣ – ಜೈಲಿನಲ್ಲಿರುವ ಕಾರ್ಯಕರ್ತರ ಭೇಟಿ ಮಾಡಿದ ಉಪ ಸಭಾಪತಿ ಹಾಗೂ ಶಾಸಕರು

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ  ನಡೆದ ಹಲ್ಲೆ ಸಂಬಂಧ ಜೈಲಿನಲ್ಲಿರುವ ಕಾರ್ಯಕರ್ತರನ್ನು  ಉಪಸಭಾಪತಿ ಎಂ.ಕೆ ಪ್ರಾಣೇಶ್ ಹಾಗೂ ಸಕಲೇಶಪುರ ಆಲೂರು ಕಟ್ಟಯ ಶಾಸಕ ಸಿಮೆಂಟ್ ಮಂಜುನಾಥ್ ಭೇಟಿ ಮಾಡಿದರು .

ಸಕಲೇಶಪುರ – ದಿನಾಂಕ 27/03/2026 ರಂದು ಸಕಲೇಶಪುರ ತಾಲ್ಲೂಕಿನ ಪುರಾತನ ದೇವಾಲಯ ಬೆಟ್ಟದ ಭೈರವೇಶ್ವರದಲ್ಲಿ ಪ್ರೀ ವೆಡ್ಡಿಂಗ್ ಪೋಟೋಶೂಟ್ ಸಂಬಂಧ ಸ್ಥಳೀಯರು ಹಾಗೂ ಛಾಯಾಗ್ರಾಹಕರ ನಡುವೆ ನಡೆದ ವಾಗ್ವಾದ ಹಲ್ಲೆಗೆ ತಿರುಗಿದ್ದು ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪರಸ್ಪರ ದೂರ ದಾಖಲಾಗಿತ್ತು .
             ಈ ಸಂಬಂಧ ಸಕಲೇಶಪುರ ಉಪ ಕಾರಾಗೃಹದಲ್ಲಿರುವ ಹಲ್ಲೆ ಪ್ರಕರಣದ ಆರೋಪಿಗಳನ್ನು ಸ್ಥಳೀಯ ಶಾಸಕ ಸಿಮೆಂಟ್ ಮಂಜುನಾಥ್ ಹಾಗೂ ಎಂ.ಕೆ ಪ್ರಾಣೇಶ್ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಅವರು ಸೇರಿದಂತೆ ಸಕಲೇಶಪುರ ತಾಲ್ಲೂಕಿನ ಸ್ಥಳೀಯ ಬಿಜೆಪಿ ಸಂಘಟಕರು ಜೈಲಿನಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು ಮುಂದಿನ ಕಾನೂನಿನ ಹೋರಾಟದಲ್ಲಿ ನಿಮ್ಮ ಜೊತೆ ನಾವು ಇರುತ್ತೇವೆ ಎಂದು ಅಭಯ ನೀಡಿದ್ದಾರೆ.


               ಈ ಸಂದರ್ಭದಲ್ಲಿ ಸಕಲೇಶಪುರ ಬಿಜೆಪಿ ಅಧ್ಯಕ್ಷರಾದ ವಳಲಹಳ್ಳಿ ಅಶ್ವಥ್. ನಗರ ಅಧ್ಯಕ್ಷ ಲೊಕೇಶ್. ಅಗ್ನಿ ಸೋಮಶೇಖರ್. ಸೇರಿದಂತೆ ಇತರರಿದ್ದರು.

Related posts

ಅರೇ ಹಳ್ಳಿ ಬಳಿ ಇನ್ನೋವಾ ಕಾರು ಪಲ್ಟಿ

Bimba Prakashana

ಸಿಡಿಲು ಬಡಿದು ಹಸುಗಳು ಬಲಿ

Bimba Prakashana

ಆಲೂರುನಲ್ಲಿ ರೈಲ್ವೆ ನಿಲುಗಡೆ – ಶಾಸಕರ, ಜನಪ್ರತಿನಿಧಿಗಳ ಶೂನ್ಯ ಪ್ರಯತ್ನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More