Blog

ಆನೆ ದಾಳಿ ರೈತನ ಸ್ಥಿತಿ ಚಿಂತಾಜನಕ

ನಾಗೇಶ್ ಎಂ ಎಚ್ ಮಾಗೇರಿ****.

🔴ಶಾಂತಪುರದಲ್ಲಿ  ಆನೆ ದಾಳಿ ರೈತನ  ಸ್ಥಿತಿ ಚಿಂತಾಜನಕ.


🔴ಹಾಸನ ಜನಪ್ರಿಯ
ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ಭೇಟಿ.ಕುಟುಂಬದವರ ಜೊತೆ ಚರ್ಚೆ.
ಉತ್ತಮ ಚಿಕಿತ್ಸೆ ನೀಡಲು  ವೈದ್ಯರಿಗೆ ಸಲಹೆ.

ಸಕಲೇಶಪುರ :
ಶಾಂತಪುರ ಗ್ರಾಮದ ವಾಸಿ ಮಲ್ಲೇಶ್ ಎಂಬುವರನ್ನು ಕಾಡಾನೆ ತುಳಿದು ಕಾಲಿನ ಮೂಳೆ, ಪಕ್ಕೆಲುಬಿನ ಮೂಳೆ ಮುರಿದು, ಸೊಂಟಕ್ಕೆ ಪೆಟ್ಟಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಚಾರವಾಗಿ
ಶಾಂತಪುರ, ಸುಳ್ಳಕ್ಕಿ ಕುದುರಂಗಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು  ಸೇರಿ  ನಮ್ಮ ಗ್ರಾಮಗಳ ವಾಸಿಗಳೂ ಸಣ್ಣ ಮತ್ತು ಅತೀ ಸಣ್ಣ ಕೃಷಿಕರಾಗಿದ್ದು, ಪ್ರತಿನಿತ್ಯ ಕೃಷಿ ಭೂಮಿಗೆ ಹೋಗಿ ಬರಬೇಕಾಗಿರುತ್ತದೆ ಹಾಗೂ ಉಪಕಸುಬಾಗಿ ಹೈನುಗಾರಿಕೆಯನ್ನು ಮಾಡಿಕೊಂಡಿದ್ದು, ಜಾನುವಾರುಗಳನ್ನು ಬೆಳಿಗ್ಗೆ ಮೇಯ್ಯಲು ಬಿಟ್ಟು, ಸಂಜೆ ವಾಪಾಸ್ ಮನೆಗೆ ಹೊಡೆದುಕೊಂಡು ಬರಬೇಕಾಗಿರುತ್ತದೆ. ಅಲ್ಲದೆ, ನಮ್ಮ ಗ್ರಾಮಗಳ ಮಕ್ಕಳು ಪ್ರತಿದಿನ ಸಕಲೇಶಪುರಕ್ಕೆ ಶಾಲಾ ಕಾಲೇಜಿಗೆ ಬಂದು ಹೋಗಬೇಕಾಗಿರುತ್ತದೆ. ಇದರಿಂದಾಗಿ, ಬೆಳಗ್ಗೆ 6 ರಿಂದ ಸಂಜೆ 7 ಗಂಟೆಯವರೆಗೂ ಸಹ. ಗ್ರಾಮದ ರಸ್ತೆಗಳಲ್ಲಿ ಗ್ರಾಮಸ್ಥರು ಓಡಾಡಬೇಕಾಗಿರುತ್ತದೆ.

ಆದರೆ ಈಗ್ಗೆ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಹಲವು ಜೀವಗಳೂ ಸಹ ಕಾಡಾನೆ ದಾಳಿಗೆ ಬಲಿಯಾಗಿರುತ್ತವೆ. ಅಲ್ಲದೆ, ಕೃಷಿಕರು, ಗ್ರಾಮಸ್ಥರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಆಗಾಗ್ಗೆ ಕಾಡಾನೆಯ ದಾಳಿಯಿಂದ ಜೀವವನ್ನು ಉಳಿಸಿಕೊಳ್ಳುತ್ತಾ ಬರುತ್ತಿರುತ್ತೇವೆ. ಆದರೆ ಈ ಭಾಗದಲ್ಲಿ ಹೆಚ್ಚುತ್ತಿರುವ ಕಾಡಾನೆ ದಾಳಿಯನ್ನು ತಪ್ಪಿಸಲು ಅರಣ್ಯ ಇಲಾಖೆಯು ಈ ಭಾಗದ ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ.

ಅಲ್ಲದೆ ನಿನ್ನೆ ಅಂದರೆ ದಿನಾಂಕ 27-07-2026ರಂದು ಸಂಜೆ ಸುಮಾರು 4:00 ಗಂಟೆಯ ಸಮಯದಲ್ಲಿ ಶಾಂತಪುರ ಗ್ರಾಮದ ವಾಸಿಯಾದ ಮಲ್ಲೇಶ್ ಬಿನ್ ತಿಮ್ಮಯ್ಯರವರು ಮೇಯ್ಯಲು ಬಿಟ್ಟಿದ್ದ ಜಾನುವಾರುಗಳನ್ನು ಶಾಂತಪುರ ಗ್ರಾಮದ ಗದ್ದೆಗೆ ಹೋಗುವ ರಸ್ತೆಯಲ್ಲಿ ವಾಪಾಸ್ ಮನೆಗೆ ಹೊಡೆದುಕೊಂಡು ಬರುವ ಸಮಯದಲ್ಲಿ -ಪಾಂತಪುರ ಏಕಾಏಕಿ ಕಾಡಾನೆ ದಾಳಿ ಮಾಡಿರುತ್ತದೆ ಇದರಿಂದ ಮಲ್ಲೇಶ್‌ರವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಹ ಕಾಡಾನೆಯು ಮಲ್ಲೇಶ್‌ರವರನ್ನು ಓಡಿಸಿಕೊಂಡು ಬಂದು ಸೊಂಡಲಿನಿಂದ ಹೊಡೆದಿರುವುದರಿಂದ, ಮಲ್ಲೇಶ್‌ರವರ ಬಲಗಾಲಿನ ಮೂಳೆ, ಪಕ್ಕೆಲುಬಿನ ಮೂಳೆ ಮುರಿದು ಸೊಂಟಕ್ಕೆ ಮತ್ತು ದೇಹದ ಇತರೆ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿ, ರಸ್ತೆಯ ಪಕ್ಕದ ಪೊದೆಯೊಳಗೆ ಹೋಗಿ ಬಿದ್ದಿರುತ್ತಾರೆ. ನಂತರ ಮಲ್ಲೇಶ್‌ರವರು ರಕ್ಷಣೆಗಾಗಿ ಕೂಗಿಕೊಳ್ಳುತ್ತಿದ್ದರಿಂದ, ಗ್ರಾಮಸ್ಥರು ಮೂಳೆಮುರಿತಕ್ಕೆ ಒಳಗಾಗಿ, ಗಾಯಗಳಿಂದ ಮತ್ತು ನೋವಿನಿಂದ ಬಳಲುತ್ತಿದ್ದ ಮಲ್ಲೇಶ್‌ರವರನ್ನು ಸಕಲೇಶಪುರದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿರುತ್ತೇವೆ.

ಆದುದರಿಂದ ತಾವುಗಳು ಕಾಡಾನೆ ದಾಳಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಮಲ್ಲೇಶ್‌ರವರ ಚಿಕಿತ್ಸೆಗೆ ಸೂಕ್ತ ಕ್ರಮ ಕೈಗೊಂಡು, ಸೂಕ್ತ ಪರಿಹಾರವನ್ನು ಕೊಡಿಸುವುದರ ಜೊತೆಗೆ, ಈ ಭಾಗದಲ್ಲಿ ಶಾಲಾ ಕಾಲೇಜು ಮಕ್ಕಳು ಹಾಗೂ ಕೃಷಿಕರು, ಬೆಳಿಗ್ಗೆ 6:00 ಗಂಟೆಯಿಂದ ಸಂಜೆ 7:00 ಗಂಟೆಯವರೆಗೂ ಸಹ ಗ್ರಾಮದ ರಸ್ತೆಯಲ್ಲಿ ಓಡಾಡಬೇಕಾಗಿರುವುದರಿಂದ, ಕಾಡಾನೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳು ಸ್ಥಳೀಯ. ಇ.ಟಿ.ಎಫ್.ಸಿಬ್ಬಂದಿಯವರನ್ನು ನೇಮಿಸಿಕೊಟ್ಟು. ಕಾಡಾನೆಗಳ ಬಗ್ಗೆ ಮಾಹಿತಿಯು ನೀಡುವುದರ ಮೂಲಕ ಗ್ರಾಮಸ್ಥರು ಭಯಮುಕ್ತವಾಗಿ ಗ್ರಾಮದ ರಸ್ತೆಯಲ್ಲಿ ಸಂಚರಿಸುವ ವ್ಯವಸ್ಥೆ ಮಾಡಿಸಿಕೊಡುವಂತೆಯೂ ಹಾಗೂ ಈ ಭಾಗದಲ್ಲಿ ಸಂಚರಿಸುತ್ತಿರುವ ಕಾಡಾನೆಗಳನ್ನು ಸೆರೆಹಿಡಿದು, ಬೇರೆಡೆಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಿಸಿಕೊಡುವಂತೆ
ಅರಣ್ಯ ಇಲಾಖೆಗೆ
ತಿಳಿಸಿದ್ದಾರೆ.
***———————–***


ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಕೆಗೆ ಅಧಿಕಾರಿಗಳಿಗೆ ಸೂಚನೆ
ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಪುರ ಗ್ರಾಮದ ನಿವಾಸಿ ಮಲ್ಲೇಶ್ ಅವರು ದನ ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಕಾಡಾನೆಯ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಶಾಸಕ ಸಿಮೆಂಟ್ ಮಂಜು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು.

ಚಿಕಿತ್ಸೆ ಪಡೆಯುತ್ತಿರುವ ಮಲ್ಲೇಶ್ ಅವರ ಆರೋಗ್ಯ ಸ್ಥಿತಿಯ ಕುರಿತು ವೈದ್ಯರಿಂದ ಸಂಪೂರ್ಣ ಮಾಹಿತಿ ಪಡೆದ ಶಾಸಕ, ಅಗತ್ಯವಿರುವ ಎಲ್ಲಾ ಚಿಕಿತ್ಸೆಯನ್ನು ತ್ವರಿತವಾಗಿ ಹಾಗೂ ಸಮರ್ಪಕವಾಗಿ ಒದಗಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಅವರು, ಸರ್ಕಾರದಿಂದ ದೊರೆಯುವ ಪರಿಹಾರ ಹಾಗೂ ಅಗತ್ಯ ನೆರವನ್ನು ಶೀಘ್ರದಲ್ಲೇ ಕಲ್ಪಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಸಕಲೇಶಪುರ ಭಾಗದಲ್ಲಿ ಮಾನವ-ಆನೆ ಸಂಘರ್ಷ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ರೈತರು ಹಾಗೂ ಗ್ರಾಮೀಣ ಪ್ರದೇಶದ ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಅಮೂಲ್ಯವಾದ ಮಾನವ ಜೀವಗಳನ್ನು ಕಾಪಾಡುವ ಜೊತೆಗೆ ರೈತರ ಬದುಕು ಸುರಕ್ಷಿತವಾಗಿರಲು ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ಕ್ರಮಗಳನ್ನು ಸರ್ಕಾರ ಆದ್ಯತೆಯಾಗಿ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಆನೆಗಳ ಚಲನವಲನವನ್ನು ನಿಖರವಾಗಿ ಪತ್ತೆಹಚ್ಚಿ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡುವ ಉದ್ದೇಶದಿಂದ ಕಾಡಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸುವ ಕಾರ್ಯವನ್ನು ತ್ವರಿತವಾಗಿ ಆರಂಭಿಸುವಂತೆ ಜಿಲ್ಲಾ ಅರಣ್ಯಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಅವರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡಲು ಅರಣ್ಯ ಇಲಾಖೆ ಸಮಗ್ರ ಕಾರ್ಯಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಜನರ ಸುರಕ್ಷತೆಯ ಜೊತೆಗೆ ವನ್ಯಜೀವಿಗಳ ಸಂರಕ್ಷಣೆಯೂ ಅಷ್ಟೇ ಮುಖ್ಯವಾಗಿದ್ದು, ಎರಡನ್ನೂ ಸಮತೋಲನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.
*ಶಾಸಕ :ಸಿಮೆಂಟ್ ಮಂಜು*

***———–***

ಸಂಜೆ 4.00 ಗಂಟೆಗೆ ಮೇಯಲು ಬಿಟ್ಟಿದ್ದ ದನ ಹೊಡೆದುಕೊಂಡು ಬರಲು ತಂದೆ ಮಲ್ಲೇಶ್ ಹೋಗಿದ್ದರು. ನಾನು ಕಾಫಿ ಹಣ್ಣು ಕೊಯ್ಲ ಮಾಡಬಹುದಾ ಎಂದು ಪಕ್ಕದ ರಸ್ತೆಕಡೆ ಹೋಗಿದ್ದೆ ಆಗ ಆನೆಯ ಗೀಳಿಡುವುದು ಕೇಳಿಸಿತು. ಕೂಗು ಹಾಕಿದರೂ ತಂದೆಯ ಸೌಂಡ್ ಕೇಳಲಿಲ್ಲವಾದ್ದರಿಂದ ಬೇರೆ ದಾರಿಯಿಂದ ಹೋಗಿ ನೋಡಿ ಹಾಗ ಆನೆ ತಂದೆ ಬಟ್ಟೆ ಕಾಲಿನಿಂದ ಹೊಸಕಿ ಹೋಗುವುದು ಕಾಣಿಸಿತು ಬೇಗ ಹೋಗಿ ತಂದೆ ನೋಡಿದಾಗ ರಸ್ತೆ ಬದಿಯ ಪೊದೆಯಲ್ಲಿ ಅಸ್ವಸ್ಥವಾಗಿ ಬಿದ್ದಿದ್ದರು. ಅವರನ್ನು ಎತ್ತಿಕೊಂಡರೆ ಕಾಲು ನಿಲ್ಲಲಾಗಲಿಲ್ಲ. ಕಾಲು ಮುರಿದಿರುವುದು ರಾತ್ರಿಯಾಗಿ ಕಾಲಿಗೆ ಬಟ್ಟೆ ಕಟ್ಟಿ ಹೆಗಲ ಮೇಲೆ ಹೊತ್ತೊಯ್ದೆ. ಸ್ವಲ್ಪ ದೂರ ಬಂದ ಮೇಲೆ ಎಲ್ಲಾ ಜನರೂ ಬಂದರು ನಮ್ಮ ಅಪ್ಪಾಜಿ ಶರ್ಟ್ ಬಿಚ್ಚಿ ಹೋಗಲಿಲ್ಲ ಎಂದರೆ ಅವರು ಉಳಿಯುತ್ತಿರಲಿಲ್ಲ ಜೀವ ಉಳಿಯಿತು ಎ೦ದು ಗಾಬರಿಯಿಂದಹೇಳಿದರು. ಸಕಲೇಶಪುರದಲ್ಲಿ ಚಿಕಿತ್ಸೆ ಮಾಡಿಸಿ ಈಗ ಹಾಸನದ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿದ್ದೇವೆ. ಒಂದು ಕಾಲ ಆಪರೇಷನ್ ಆಗಿದೆ. ಕಾಲಿನ ಎರೆಡೂ ಮೂಳೆಗಳು ಮುರಿದಿವೆ. ಶ್ವಾಸಕೋಶಕ್ಕೆ ತೀವ್ರಪೆಟ್ಟು ಬಿದ್ದಿದೆ. ವೈದ್ಯರು ಐಸಿಯುನಲ್ಲಿ ಇಟ್ಟಿದ್ದಾರೆ. ಮೂರು ದಿನದ ನಂತರ ಏನಾಗಬೇಕು ಎ೦ದು ಹೇಳುತ್ತೇವೆ ಎಂದು ವೈದ್ಯರು ಹೇಳಿದ್ದಾರೆ.
ಶಾಸಕ ಸಿಮೆಂಟ್ ಮಂಜು ಹಾಗೂ ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಬೇಟಿ ನೀಡಿ ಪರಿಹಾರ ಕೊಡಿಸುವುದಾಗಿ ಬರವಸೆ ನೀಡಿದ್ದಾರೆ. ಎಸಿಎಫ್. ರೇಂಜರ್ ಮತ್ತು ಅಧಿಕಾರಿಗಳು ಬೇಟಿ ನೀಡಿ ದೈರ್ಯ ಹೇಳಿದ್ದಾರೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

*ಲೋಕೇಶ್ S.M*.
*ಮಲ್ಲೇಶ್ ರವರ ಮಗ*.

Related posts

ನಾಗರತ್ನಮ್ಮ ನಿಧನ

Bimba Prakashana

ಸಕಲೇಶಪುರದ ಸತ್ತಿಗಾಲ್ ನಲ್ಲಿ ನಾಳೆ ಪ್ರತಿಭಾ ಕಾರಂಜಿ

Bimba Prakashana

ಯಸಳೂರು ಪೊಲೀಸ್ ಠಾಣೆ ಪಿ ಎಸ್ ಐ ಆಗಿ ಸಲ್ಮಾನ್ ಖಾನ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More