🔴ಪೌರ ಕಾರ್ಮಿಕರ ಹಣ ದುರುಪಯೋಗ: ಟೆಂಡರ್ ಮೇಲೆ ಎಫ್ ಐ ಆರ್ ದಾಖಲಿಸುವಂತೆ ಸದಸ್ಯರ ಒತ್ತಾಯ.
ಬೇಲೂರು.
2026-27 ನೇ ಸಾಲಿನ ಹೊರಗುತ್ತಿಗೆ ನಿರು ಸರಬರಾಜು ನೌಕರರನ್ನು ಸರಬರಾಜು ಮಾಡುವ ಟೆಂಡರ್ ಗೆ ಆರ್ಥಿಕ ಬಿಡ್ ಗೆ ಅನುಮೋದನೆ ನೀಡುವ ಬಗ್ಗೆ ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ತುರ್ತು ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಸದಸ್ಯ ಜಮಾಲ್ ಮಾತನಾಡಿ,ಪುರಸಭೆ ಪೌರಕಾರ್ಮಿಕರು ಮತ್ತು ನೀರು ಬಿಡುವ ನೌಕರರಿಗೆ ನೀಡಬೇಕಿದ್ದ 28ಲಕ್ಷ ಹಣವನ್ನು ಗುತ್ತಿಗೆದಾರ ಮೋಸ ಮಾಡಿದ್ದಾನೆ ಪಿಎಫ್ ಇಎಸ್ಐ ಹಣವನ್ನು ಇದುವರೆವಿಗೂ ನೌಕರರಿಗೆ ನೀಡದೆ ನಾಪತ್ತೆಯಾಗಿರುವ ಟೆಂಡರ್ ನ ಮೇಲೆ FIR ದಾಖಲಿಸಿ ಎಂದು ಒತ್ತಾಯಿಸಿದರು.
ಬಿ.ಸಿ ಜಗದೀಶ್ ಮಾತನಾಡಿ,ಪೌರ ಕಾರ್ಮಿಕರಿಗೆ ಮತ್ತು ವಾಟರ್ ಮನ್ ಗಳ ಬಾಕಿ ಇರುವ ಸಂಬಳದ ಹಣವನ್ನು ಕೂಡಲೆ ಸಂದಾಯಮಾಡಿ,ಟೆಂಡರ್ ದಾರನ ಮೇಲೆ ಕೇಸ್ ದಾಖಲಿಸಿ ಎಂದರು ಪಟ್ಟಣದಲ್ಲಿ ಗಣೇಶನ ಮೂರ್ತಿ ಕೊಳ್ಳುವವರಿಗೆ ಶುಲ್ಕ ವಿದಿಸಬಾರದು ಮತ್ತು ಕಳೆದ ಕೆಲ ದಿನಗಳ ಹಿಂದೆಯಷ್ಟೆ ಅದ್ಯಯನ ಪ್ರವಾಸಕ್ಕೆ ಗೋವಾ ಟ್ರಿಪ್ ಹೋಗುತ್ತಿರುವ ಬಗ್ಗೆ ಕೆಲವರು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಪತ್ರಿಕೆಯಲ್ಲಿ ಸುದ್ದಿ ಬಿತ್ತರ ಮಾಡಿಸಿದ್ದರು ಆದರೆ ನಾವು ಶೋಕಿ ಮಾಡುವುದಕ್ಕೆ ಹೋಗಲಿಲ್ಲ ಜೊತೆಗೆ ಸದಸ್ಯರ ಜೊತೆಗೆ ಪೌರಕಾರ್ಮಿಕರನ್ನು ಕರೆದುಕೊಂಡು ಹೋಗಿದ್ದೆವು.ಗೋವಾದಲ್ಲಿರುವ ಕಸವಿಲೆವಾರಿ ಘಟಕದ ಬಗ್ಗೆ ಅದ್ಯಯನ ಮಾಡಿ ಬಂದಿದ್ದೇವೆ.ನಮಗೆ ಶೋಕಿ ಮಾಡುವ ಹುಚ್ಚು ನಮಗಿಲ್ಲ ಶೋಕಿ ಮಾಡುವುದಾದರೆ ನಮ್ಮ ಸ್ವಂತ ಹಣದಲ್ಲಿ ಮಾಡುತ್ತೇವೆ ಜನರ ತೆರಿಗೆ ಹಣದಲ್ಲಿ ಮಾಡುವುದಿಲ್ಲ ಎಂದು ಕೆಲ ಸದಸ್ಯರಿಗೆ ಟಾಂಗ್ ಕೊಟ್ಟರು.
ತೀರ್ಥ ಕುಮಾರಿ ಮಾತನಾಡಿ,ರಸ್ತೆಗಳಲ್ಲಿ ತಳ್ಳೋಗಾಡಿಗಳನ್ನ ಅಡ್ಡದಿಡ್ಡಿಯಾಗಿ ನಿಲ್ಲಿಸಿ ವಾಹನಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಕೂಡಲೆ ತಳ್ಳೋ ಗಾಡಿಗಳನ್ನು ತೆರವುಗೊಳಿಸಿ ವಾಹನ ಪಾರ್ಕಿಂಗ್ ಗೆ ಅನುಕೂಲ ಮಾಡಿಕೊಡಬೇಕು ಎಂದರು.
ಪುರಸಭೆ ಅದ್ಯಕ್ಷ ಅಕ್ರಂ ಶರೀಪ್,ಮಾತನಾಡಿ,ಸರ್ಕಾರದ ನಿಯಮದಂತೆ 12 ಜಿಲ್ಲೆಗೆ ಒಂದೆ ಬಾರಿ ಟೆಂಡರ್ ಕರೆಯುವ ನಿಯಮವಿದೆ.ಈಗ ಕೇವಲ 4 ವರ್ಷ ಕಳೆದಿದೆ.ಹಾಲಿ ಇದ್ದ ಟೆಂಡರ್ ಯಾರು ಅಂತ ನಮಗೆ ಗೊತ್ತಿಲ್ಲ ಕಾರ್ಮಿಕರಿಗೆ ಹಣ ನೀಡದೆ ಮೋಸ ಮಾಡಿದ್ದಾನೆ ಅವನ ಮೇಲೆ ಕೇಸ್ ದಾಖಲಿಸುತ್ತೇವೆ ಮತ್ತು ಪೌರಕಾರ್ಮಿಕರಿಗೆ ನೀಡಬೇಕಿದ್ದ ಬಾಕಿ ಸಂಬಳದ ಜೊತೆಗೆ ರೈನ್ ಕೋಟ್ ಸೇರಿದಂತೆ ಇನ್ನಿತರೆ ಸಲಕರಣೆಗಳನ್ನು ಕೂಡಲೆ ನೀಡುತ್ತೇವೆ ಎಂದರು. ಸಭೆಯಲ್ಲಿ ಉಪಾದ್ಯಕ್ಷೆ ಉಷಾ ಸತೀಶ್.ಸದಸ್ಯರಾದ ಪುಟ್ಟಸ್ವಾಮಿ,ಸತೀಶ್ ಮೀನಾಕ್ಷಿ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ, ಮತ್ತಿತರರು ಇದ್ದರು
