Blog

ಆಂಧ್ರ ಪ್ರದೇಶದಿಂದ ಗೋ ಸಾಗಾಣಿಕೆ – ಮಾರನ ಹಳ್ಳಿ ಬಳಿ ಪೊಲೀಸ್ ವಶಕ್ಕೆ

🔴ಸಕಲೇಶಪುರದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಪತ್ತೆ
🔴ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆ

ಸಕಲೇಶಪುರದಲ್ಲಿ ಸೋಮವಾರ, 07.09.2026ರಂದು ರಾತ್ರಿ ಸುಮಾರು 11 ಗಂಟೆಯ ವೇಳೆಗೆ, ಆಂಧ್ರಪ್ರದೇಶದ ಕಡೆಯಿಂದ ಬರುತ್ತಿದ್ದ ಈಚರ್ ವಾಹನದಲ್ಲಿ ಅಕ್ರಮವಾಗಿ 19 ಗೋವುಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ವಾಹನವನ್ನು ಸಕಲೇಶಪುರದ ಮಾರನಹಳ್ಳಿ ಚೆಕ್‌ಪೋಸ್ಟ್ ಬಳಿ ಪೊಲೀಸರಿಗೆ ಮಾಹಿತಿ ನೀಡಿ ಹಿಡಿಯಲಾಗಿದೆ.

ವಾಹನದಲ್ಲಿ 19 ಗೋವುಗಳನ್ನು ಅತ್ಯಂತ ಕ್ರೂರವಾಗಿ ಹಾಗೂ ಅಮಾನವೀಯ ರೀತಿಯಲ್ಲಿ ತುಂಬಿಕೊಂಡು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಅಲ್ಲದೆ, ಗೋವುಗಳ ಕಣ್ಣುಗಳಿಗೆ ಮೆಣಸಿನಕಾಯಿ ಹಾಕಿರುವ ಆರೋಪವೂ ಕೇಳಿಬಂದಿದ್ದು, ಈ ಕೃತ್ಯವು ಅತ್ಯಂತ ಅಮಾನವೀಯ ಹಾಗೂ ಕ್ರೂರವಾಗಿದೆ.

ಈ ವಾಹನದ ಕುರಿತು ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ, ವಾಹನವನ್ನು ಹಿಡಿಯಲು ಸಹಕರಿಸಿದ್ದಾರೆ.

ಈ ಪ್ರಕರಣದ ಕುರಿತು ಪೊಲೀಸರು ಸಂಪೂರ್ಣ ತನಿಖೆ ನಡೆಸಬೇಕು. ಗೋವುಗಳನ್ನು ಎಲ್ಲಿಂದ ತರಲಾಗಿತ್ತು, ಅವುಗಳನ್ನು ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿತ್ತು ಹಾಗೂ ಅಂತಿಮವಾಗಿ ಕರ್ನಾಟಕದ ಯಾವ ಭಾಗಕ್ಕೆ ಅಥವಾ ಕೇರಳ/ಮಂಗಳೂರು ಭಾಗಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬುದನ್ನು ತನಿಖೆಯಿಂದ ಬಹಿರಂಗಪಡಿಸಬೇಕು ಎಂದು ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಅಕ್ರಮವಾಗಿ ಜಾನುವಾರು ಸಾಗಾಟದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣದ ಸಂಪೂರ್ಣ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

        KA 13 AA 6873 ವಾಹನವನ್ನು ಪಾಸ್ ಮಾಡಲು ಫಾರ್ಚುನರ್ ವಾಹನದಲ್ಲಿ ಕೆಲ ರೌಡಿಗಳು ಬಂದಿರೊವುದರ ಬಗ್ಗೆ ಅನುಮಾನವಿದ್ದು ಯಾವ ವಾಹನ ಅದರಲ್ಲಿ ಇದ್ದವರ ಬಗ್ಗೆ CCTV ಪರಿಶೀಲನೆ ಮಾಡಬೇಕು ಎಂದು ರಘು ಸಕಲೇಶಪುರ ಆಗ್ರಹಿಸಿದ್ದಾರೆ

Related posts

ಆಟೋ ನಿಲ್ದಾಣ ಮಾಡಿ ಕೊಡುವಂತೆ ಮನವಿ

Bimba Prakashana

ಆಲೂರು ಅಭಿವೃದ್ಧಿಗೆ ಮೀಸಲಿಟ್ಟ ಜಾಗ ಕಬಳಿಕೆ

Bimba Prakashana

ರಘುರಿಗೆ ಡಾಕ್ಟರೇಟ್ ಪದವಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More