Blog

ಬೇಲೂರುನಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ



ಬೇಲೂರು
ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಶ್ರೀ ಕೃಷ್ಣ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
  ಕಾರ್ಯಕ್ರಮವನ್ನು ತಾಲ್ಲೂಕು ದಂಢಾಧಿಕಾರಿ ಶ್ರೀ ಧರ್ ಕಂಕನವಾಡಿಯವರು ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು,
ಶ್ರೀ ಕೃಷ್ಣನು ಎಲ್ಲಾ ಜೀವಿಗಳ ಕಲ್ಯಾಣಕ್ಕಾಗಿ ಜ್ಞಾನವನ್ನು ನೀಡಿದ್ದಾರೆ.ಮಹಾಭಾರತ ದಲ್ಲಿ ಅರ್ಜುನನ ಸಾರಥ್ಯವನ್ನು ವಹಿಸಲು ಸಿದ್ದನಾದ ಭಗವಾನ್ ಶ್ರೀ ಕೃಷ್ಣನು ತನ್ನ ಸಖ ಮತ್ತು ಭಕ್ತನಾದ ಅರ್ಜುನನಲ್ಲಿಯ ಗೊಂದಲ ಮತ್ತು ಭ್ರಮೆಯನ್ನು ಅರಿಯುತ್ತಾನೆ.ಶ್ರೀಕೃಷ್ಣನು ಯೋಧನಾದ ಅರ್ಜುನನಿಗೆ ಆತನ ಕರ್ತವ್ಯಗಳ ಬಗೆಗೆ ಹಾಗೂ ಅದಕ್ಕಿಂತಲೂ ಮಹತ್ವವಾದ ಆತ್ಮದ ರೂಪದಲ್ಲಿ ಆತನ ಶಾಶ್ವತ ಕರ್ತವ್ಯಗಳ ಬಗೆಗೆ ಉಪದೇಶ ನೀಡುತ್ತಾನೆ ಅದೇ ರೀತಿ ನಾವೆಲ್ಲರೂ ಭಗವದ್ಗೀತೆಯನ್ನು ಅರಿಯುವ ಪ್ರಯತ್ನವನ್ನು ಮಾಡಬೇಕು.ಎಂದರು.


ಕಾರ್ಯಕ್ರಮದಲ್ಲಿ ಯಾದವ ಸಮುದಾಯದ ಗೌರವಾದ್ಯಕ್ಷ ನಿವೃತ್ತ ತಹಸೀಲ್ದಾರ್ ಅಣ್ಣೇಗೌಡ,ಅದ್ಯಕ್ಷ ಕುಮಾರ್,ಅಧಿಕಾರಿಗಳಾದ ಬಿಇಓ ಭಾಗ್ಯಮ್ಮ,ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಜಿ. ಶಿವಮರಿಯಪ್ಪ,ಅರಣ್ಯ ಇಲಾಖೆ ಅಧಿಕಾರಿ ಶೈಲಾ,ಇಂಜಿನಿಯರ್ ದಯಾನಂದ್,ಆಹಾರ ಇಲಾಖೆ ಶಿರಸ್ಥೆದಾರ್ ವೀಣಾ,ಗೀತಾಂಜಲಿ,ಸೇರಿದಂತೆ ಯಾದವ ಸಮಾಜದ ಮುಖಂಡರು ಭಾಗಿಯಾಗಿದ್ದರು

Related posts

ಶಾಸಕರ ಜನಪರ ಕಾರ್ಯ ನೋಡಲಾಗದೆ ವಿಶ್ವನಾಥ್ ದ್ವೇಷ ಭಾವನೆಯಿಂದ ಮಾತನಾಡುತ್ತಿದ್ದಾರೆ

Bimba Prakashana

ಹಾಸನದಲ್ಲಿ ಮನೆ ಕನಸು

Bimba Prakashana

ಪ್ಲಾಂಟರ್ ಸಂಘದ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More