🔴ಮಾಜಿ ಶಾಸಕರ ಪಾಪದ ಕೊಡ ತುಂಬಿದೆ-ಮಾಜಿ ಶಾಸಕ ಹುರುಡಿ ವಿಶ್ವನಾಥ್ ಗೆ ತಿರುಗೇಟು ನೀಡಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಣೇಶ್.
ಆಲೂರು:ಆಲೂರು ಕಟ್ಟಾಯ ಸಕಲೇಶಪುರ ಕ್ಷೇತ್ರದ ಶಾಸಕರ ವಿರುದ್ದ ಕಮಿಷನ್ ಆರೋಪವನ್ನು ಮಾಜಿ ಶಾಸಕರಾದ ಹುರುಡಿ ವಿಶ್ವನಾಥ್ ಅವರು ಪ್ರಸ್ತಾಪ ಮಾಡಿದ್ದನ್ನು ಖಂಡಿಸಿ ಇಂದು ತಾಲ್ಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ನೋ) ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಣೇಶ್ ಮಾಜಿ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಮಾಜಿ ಶಾಸಕರಾದ ವಿಶ್ವನಾಥ್ ರವರು ಹಾಲಿ ಶಾಸಕರಾದ ಸಿಮೆಂಟ್ ಮಂಜುರವರ ಬಗ್ಗೆ ಅಗೌರವವಾಗಿ ಮಾತನಾಡಿದ್ದಾರೆ.
ಮಂಜೂರಾದ ಅನುಧಾನದಲ್ಲಿ ಇಪ್ಪತ್ತು ಪರ್ಸೆಂಟ್ ಕಮಿಷನ್ ತೆಗೆದುಕೊಂಡು ಭೂಮಿ ಪೂಜೆ ಮಾಡಬೇಕ ಅಂತಹ ನೀಚ ಮನಸ್ಥಿತಿ ಶಾಸಕರಿಗೆ ಯಾಕೆ ಬೇಕು? ಅನುಧಾನ ಬಂದರೇ ಅಧಿಕಾರಿಗಳಿ ಗೆ ಸಲಹೆ ಸೂಚನೆ ನೀಡಿ ಕೆಲಸ ಮಾಡಲು ತಿಳಿಸಿದರೆ ಸಾಕು,ಇವರಿಗೇಕೆ ಕಮಿಷನ್ ಉಸಾಬರೀ ಅದಲ್ಲದೇ ಭೂಮಿ ಪೂಜೆಗೆ ಮೊದಲೇ ಕಮಿಷನ್ ಕೊಡಬೇಕು ನಂತರ ಶಾಸಕರು ಹೇಳಿದ ದಿನವೇ ಭೂಮಿ ಪೂಜೆ ಮಾಡಬೇಕು,ಅಲ್ಲದೇ ಸ್ಥಳಿಯರಿಗೆ ಗುತ್ತಿಗೆ ನೀಡದೆ ಜಿಲ್ಲೆಯವರಿಗೆ ಗುತ್ತಿಗೆ ನೀಡುತ್ತಿರುವುದು ವಿಪರ್ಯಾಸ ಅಲ್ಲವೇ ಎಂದು ಗುತ್ತಿಗೆದಾರ ಲೊಕೇಶ್ ಪರವಾಗಿ ಪ್ರಶ್ನಿಸಿದ್ದರು.
ಇಂದು ಮಾಜಿ ಶಾಸಕರ ಪ್ರಶ್ನೆಗೆ ಪತ್ರಿಕಾಗೋಷ್ಠಿಯ ಮೂಲಕ ಪ್ರತ್ಯುತ್ತರ ನೀಡಿದ ಗಣೇಶ್ ಅವರು ನಮ್ಮ ಕ್ಷೇತ್ರದಲ್ಲಿ ತಳ ದಲಿತ ಸಮುದಾಯದ ಒಬ್ಬ ವ್ಯಕ್ತಿ ಶಾಸಕರಾಗಿ ಅವರ ಕಾರ್ಯವೈಖರಿ ಮತ್ತು ಪ್ರತಿಯೋಂದು ಸಮಸ್ಯೆಗೂ ಸ್ಪಂದಿಸುವ ಮೂಲಕ ಜನಮನಗೆದ್ದ ನಾಯಕರೆಂದು ಗುರುತಿಸಿಕೊಂಡಿರುವುದನ್ನು ಸಹಿಸಲಾಗುತ್ತಿಲ್ಲ,ಮಾಜಿ ಶಾಸಕರು ಏನೇನು ಕೆಲಸ ಮಾಡಿದ್ದಾರೆ ಎಂದು ಕ್ಷೇತ್ರದ ಜನತೆಗೆ ಗೊತ್ತಿದೆ,ಯಾವುದೇ ವಿಚಾರವನ್ನು ಮಾತನಾಡುವಾಗ ಪೂರ್ವಪರ ಯೋಚಿಸಿ ದಾಖಲೆ ಸಹಿತ ಪ್ರಶ್ನಿಸಬೇಕು,ಸಾಬೀತಾದ ನಂತರ ಕ್ರಮ ತೆಗೆದುಕೊಳ್ಳಲಿ.ಸುಮ್ಮನೇ ನಾಲಿಗೆ ಹರಿಬಿಡುವುದು ಸರಿಯಲ್ಲ,ರಾಜಕೀಯದಲ್ಲಿ ಹಿರಿಯರಿದ್ದಾರೆ ಅವರದೇ ಆದ ಘನತೆಯಿದೆ ಅದನ್ನು ಉಳಿಸಿಕೊಳ್ಳಲಿ ಎಂದು ವಿಶಾದ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡರುಗಳಾದ ಶರಣ್ ಕಟ್ಟೆಗದ್ದೆ.ನಿತೀನ್ ಗೌಡ ಹೆಚ್.ಆರ್ ಉಪಸ್ಥಿತರಿದ್ದರು.
