Blog

ಹೆತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಮಕ್ಕಳಿಗೆ ನೋಟ್ ಬುಕ್ ವಿತರಣೆ

***
ನಾಗೇಶ್ ಎಂ ಎಚ್ ಮಾಗೇರಿ

🔴ಸ್ವಂತ ದುಡಿಮೆಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ.

🔴ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ನಮ್ಮ ಬದ್ಧತೆ


ಸಕಲೇಶಪುರ: ತಾಲೂಕು ಹೆತ್ತೂರು ಹೋಬಳಿಯ  ಹೆತ್ತೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷಕ್ಕೆ ದಾಖಲಾದ ಎಲ್ಲಾ  ಮಕ್ಕಳಿಗೆ  ಉಚಿತವಾಗಿ ನೋಟ್ ಬುಕ್ ಗಳನ್ನು ವಿತರಣೆ  ಮಾಡಲಾಯಿತು.


ಸಚಿನ್ ರವರು ಹೆತ್ತೂರಿನ ಮಹಾಲಕ್ಷ್ಮಿ ಎಂಟರ್ಪ್ರೈಸಸ್ ಮಾಲೀಕರು ಮತ್ತು  ಕರ್ನಾಟಕ ಪಬ್ಲಿಕ್ ಶಾಲೆಯ ಮಾಜಿ ಅಧ್ಯಕ್ಷರು ಆಗಿರುವ  ಸಚಿನ್ ರವರು ಮಾಡಿರುವ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ.

ಸಚಿನ್ ರವರು ಶಾಲೆಯ ಅಭಿವೃದ್ಧಿಯ ಅಧ್ಯಕ್ಷರಾಗಿ ಅಭಿವೃದ್ಧಿಯ ಕಡೆ ಇಲ್ಲದಿದ್ದಾಗಲೂ ಸಹ ಸಮಾಜಕ್ಕೆ ಕೊಡುಗೆ ನೀಡುತ್ತಿರುವುದು ಇವರ ವ್ಯಕ್ತಿತ್ವವನ್ನು ಮೆಚ್ಚುವಂಥದ್ದು.

ಇಂದು ಗ್ರಾಮೀಣ ಭಾಗದ ಪೋಷಕರಿಗೆ ಒಂದು ಮಗುವಿನ ನೋಟ್ಬುಕ್ ಖರ್ಚು ಸುಮಾರು 2000 ರೂ  ಆಗುವ ಸಾಧ್ಯತೆ ಇದೆ.
ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿರುವವರಿಗೆ ಇದು ದೊಡ್ಡ ಹೊರೆ ಇಂತಹ ಸಮಯದಲ್ಲಿ ಇದು ಪುಸ್ತಕದ ಚಿಂತೆ ಬಿಟ್ಟು ಪಾಠದ ಕಡೆ ಗಮನ ಕೊಡಿ ಎಂದು ಸುಮಾರು ವಿದ್ಯಾರ್ಥಿಗಳ ಪೋಷಕರ ಹೊರೆ ಇಳಿಸಿರುವ ಸಚಿನ್ ಹೆತ್ತೂರು  ಇವರ ಕಾರ್ಯ ನಿಜಕ್ಕೂ ಮಾದರಿ.

ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ನಮ್ಮ ಬದ್ಧತೆ* ಎಂಬ ಅವರ ಘೋಷಣೆ ಕೇವಲ ಬ್ಯಾನರ್ ಗೆ ಸೀಮಿತವಾಗಿಲ್ಲ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಇವರ ಈ ದಾನದಿಂದ ಒಬ್ಬ ಡಾಕ್ಟರ್ ಒಬ್ಬ ಇಂಜಿನಿಯರ್ ಒಬ್ಬ ಶಿಕ್ಷಕ ಹುಟ್ಟುವುದು ಒಂದು ನೋಟ್ ಬುಕ್ ಒಂದು ಜೀವನ ಬದಲಾಯಿಸಬಹುದು


ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಸಮಾಜದ ಅಭಿವೃದ್ಧಿಯ ಮೂಲಾಧಾರ ಎಂಬ ಮಹತ್ವದ ಚಿಂತನೆಯೊಂದಿಗೆ ಗ್ರಾಮೀಣ ಹಾಗೂ ಮಲೆನಾಡು ಭಾಗದ  ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಅವರ ಕನಸುಗಳಿಗೆ ಭದ್ರ ಬುನಾದಿಯನ್ನು ನಿರ್ಮಿಸುತ್ತದೆ ಎಂಬುದು ಇವರ ಉದ್ದೇಶವಾಗಿದೆ

ಸಮಾಜಮುಖಿ ಕೆಲಸಗಳಿಗೆ  ಸಾರ್ವಜನಿಕರು  ಸಚಿನ್ ಹೆತ್ತೂರು ರವರಿಗೆ   ಅಭಿನಂದನೆಗಳನ್ನು ತಿಳಿಸಿದ್ದಾರೆ.

Related posts

ಶಾಸಕರ ಜನಪರ ಕಾರ್ಯ ನೋಡಲಾಗದೆ ವಿಶ್ವನಾಥ್ ದ್ವೇಷ ಭಾವನೆಯಿಂದ ಮಾತನಾಡುತ್ತಿದ್ದಾರೆ

Bimba Prakashana

ಬೇಲೂರು ಜಾತ್ರೆ ಯಶಸ್ಸು – ಸ್ವಚ್ಛತೆ ಬಗ್ಗೆ ಪುರಸಭೆ ಆದ್ಯತೆ – ಭದ್ರತೆ ನೀಡಿದ ಪೊಲೀಸ್ ಇಲಾಖೆ

Bimba Prakashana

ರಸ್ತೆ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಯ ಆರೋಗ್ಯ ವಿಚಾರಿಸಿದ ಶಾಸಕ ಸಿಮೆಂಟ್ ಮಂಜುನಾಥ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More