*🔴ಬಿ.ಶಿವರಾಂ ಪರಿಶ್ರಮದಿಂದ ಅಡಗೂರು ಕೆರೆಗೆ ನೀರು: ಪುಕ್ಕಟೆ ಪ್ರಚಾರ ಮಾಡಿಕೊಳ್ಳುವ ಶಾಸಕರ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರ ವಾಗ್ದಾಳಿ.
ಬೇಲೂರು: ಎತ್ತಿನಹೊಳೆ ಯೋಜನೆಯಿಂದ ಅಡಗೂರು ಕೆರೆಗೆ ನೀರು ಹರಿಸಿರುವುದು ಮಾಜಿ ಸಚಿವ ಬಿ.ಶಿವರಾಂ ರವರ ಕೊಡುಗೆಯೆ ಹೊರತು ಶಾಸಕರ ಸಾದನೆ ಅಲ್ಲ ಎಂದು ಬೇಲೂರು ಯುವ ಕಾಂಗ್ರೆಸ್ ಅದ್ಯಕ್ಷ ಶರತ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಎತ್ತಿನ ಹೊಳೆ ಯೋಜನೆ ಬಿಜೆಪಿ ಸರ್ಕಾರದ ಯೋಜನೆಯೂ ಅಲ್ಲ ಅಡಗೂರು ಕೆರೆಗೆ ನೀರು ಹರಿಸಿದ್ದು ಶಾಸಕರ ಸಾದನೆಯೂ ಅಲ್ಲ.ಶಾಸಕರು ಸಚಿವ ಶಿವರಾಂ ರವರ ಮೇಲೆ ಸುಮ್ಮನೆ ಇಲ್ಲದ ಸಲ್ಲದ ಆರೋಪ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳು ವ ಯತ್ನ ಮಾಡುತ್ತಿದ್ದಾರೆ. 2017 ರಲ್ಲಿ ಸಿದ್ದರಾಮಯ್ಯರವರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಶಿವರಾಂ ರವರು ಶ್ರಮವಹಿಸಿ ಹ ಳೇಬೀಡು ಕೆರೆಗೆ ನೀರು ತುಂಬಿಸುವಂತಹ ಕೆಲಸ ನಡೆದಿತ್ತು.ಆನಂತರದಲ್ಲಿ ಅಡಗೂರು ಕೆರೆ ಈಗ ಅವರ ಶ್ರಮದಿಂದಲೆ ಭರ್ತಿಯಾಗಿದೆ.ಆ ಸೌಜನ್ಯಕ್ಕೋಸ್ಕರವಾದರೂ ಭಾಗಿನ ಬಿಡುವಾಗ ಕಾಂಗ್ರೆಸ್ ಸರ್ಕಾರದ ಕೊಡುಗೆ ಇದು ಎಂದು ಹೇಳಲು ಶಾಸಕರಿಗೆ ಕನಿಷ್ಟ ಪ್ರಜ್ಞೆಯಾದರೂ ಇರಬೇಕಿತ್ತು.ಶಿವರಾಂ ಮಾಜಿ ಸಚಿವರಿದ್ದಾರೆ ಅವರ ಬಗ್ಗೆ ಮಾತನಾಡುವಾಗ ಸೌಜನ್ಯದಿಂದ ಮಾತನಾಡಬೇಕು ನಿರ್ಗತಿಕ ಎಂಬ ಪದ ಬಳಕೆ ಮಾಡುವುದು ಸರಿ ಅಲ್ಲ.ನಿಮ್ಮ ದುರಹಂಕಾರದ ವ್ಯಕ್ತತ್ವವನ್ನು ಬಿಡಿ.ನಿಮ್ಮ ಬಳಿ ಸಾವಿರಾರು ಕೋಟಿ ಹಣ ಇರುವುದಾದರೆ ರಾಜಕಾರಣಕ್ಕೆ ಏಕೆ ಬರಬೇಕಿತ್ತು,ಚುನಾವಣೆ ಪ್ರಚಾರದಲ್ಲಿ ನನಗೆ ಹಣದ ಅವಶ್ಯಕತೆ ಇಲ್ಲ ಅಂದಿದ್ದವರು ಬಂದಮೇಲೆ ಕಾಮಾಗಾರಿ ಮಾಡಿಸಿ ಹಣ ಮಾಡುತ್ತಿಲ್ಲವ..ಎಂದು ಪ್ರಶ್ನೆ ಮಾಡಿದ್ದಲ್ಲದೆ, ಸುಮ್ಮನೆ ಇಲ್ಲ ಸಲ್ಲದ ಆರೋಪ ಮಾಡಿ ನಾನೆ ಕೆರೆಗೆ ನೀರು ಹರಿಸಿದ್ದು ಎಂದು ಪ್ರಚಾರ ಗಿಟ್ಟಿಸಿಕೊಳ್ಳುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಶರತ್ ಶಾಸಕರ ವಿರುದ್ದ ಕಿಡಿಕಾರಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅದ್ಯಕ್ಷ ವಿಜಯ ಕುಮಾರ್ ಮಾತನಾಡಿ,ಅಡಗೂರು ಕೆರೆಗೆ ನೀರು ಹರಿಸಿದ್ದು ಬಿ.ಶಿವರಾಂ.ಶಾಸಕರ ಕೊಡುಗೆ ಅಲ್ಲ. ಸುಮಾರು 9 ವರ್ಷದಿಂದ ಸುತ್ತ ಮುತ್ತಲ ರೈತರ ಪರಿಶ್ರಮದಿಂದ ನೀರು ಹರಿಯುವಂತಾಗಿದೆ.ರೈತ ಸಿದ್ದರಾಜು ಜಮೀನು ಬಿಡುವುದಿಲ್ಲ ಎಂದು ತಕರಾರು ಮಾಡಿದಾಗ ಶಾಸಕರು ಯಾಕೆ ಬಿಡಿಸಲು ಬರಲಿಲ್ಲ ಶಿವರಾಂ ಸಿದ್ದರಾಜು ರವರನ್ನ ಮನವೊಲಿಸಿ ಪರಿಹಾರವನ್ನು ಕೊಡಿಸುತ್ತೇನೆ. ನೀನು ಜಮೀನು ನೀಡುವುದರಿಂದ ಸಾವಿರಾರು ರೈತ ಕುಟುಂಬಗಳಿಗೆ ಅನುಕೂಲವಾಗುತ್ತದೆ ಎಂದು ಮನವೊಲಿಸಿದ್ದಕ್ಕೆ ಅಡಗೂರು ಕೆರೆಗೆ ನೀರು ಬಂದಿದೆ.ಅದನ್ನ ಶಾಸಕರು ತಾವು ಒಂದಿಷ್ಟು ಬೆಂಬಲಿಗರ ಜೊತೆ ರೈತರನ್ನ ಸೇರಿಸಿ ನಾನು ಕೆರೆಗೆ ನೀರು ಹರಿಸಿದ್ದು ಎಂದು ಇಲ್ಲ ಸಲ್ಲದ ಆರೋಪಗಳನ್ನು ಶಿವರಾಂ ವಿರುದ್ದ ಹೇಳಿ ಪುಕ್ಕಟೆ ಪ್ರಚಾರ ಮಾಡಿಕೊಳ್ಳು ತ್ತಿದ್ದಾರೆ ಎಂದು ಆರೋಪ ಮಾಡಿದ್ದಲ್ಲದೆ,ತಮ್ಮ ಎದುರು ಇಂಜಿನಿಯರ್ ನಿಲ್ಲಿಸಿಕೊಂಡು ರೈತ ಸಿದ್ದರಾಜು ವನ್ನು ಮನವೊಲಿಸಿದ್ದು ಶಾಸಕರು ಎಂದು ಹೇಳಿಸುವುದು ಎಷ್ಟರ ಮಟ್ಟಿಗೆ ಸರಿ.ಶಾಸಕರು ಎಷ್ಟು ಹಣ ನೀಡಿದ್ದಾರೆ ಎಷ್ಟು ಪರಿಹಾರ ಕೊಡಿಸಿದ್ದಾರೆ ದಾಖಲೆ ನೀಡಲಿ, ಸುತ್ತ ಮುತ್ತಲ ರೈತರೆಲ್ಲ ಹಣ ಸಂಗ್ರಹಿಸಿ ಸಿದ್ದರಾಜುರವರಿಗೆ ನೀಡಿ ಜಾಗ ಬಿಡಿಸಿದ್ದೇವೆ.ನಿಮ್ಮ ಬಿಜೆಪಿ ಕಾರ್ಯಕರ್ತರೆ ಹೇಳಿದ್ರು..ಅಡಗೂರು ಕೆರೆಗೆ ನಿಮ್ಮ ಶಕ್ತಿಯಿಂದ ನೀರು ತುಂಬಿಸಿದರೆ ನಾವು ತಲೆಬೋಳಿಸಿಕೊಳ್ಳುತ್ತೇವೆ ಎಂದು ಸವಾಲು ಹಾಕಿದ್ದರು. ಈಗ ಶಿವರಾಂ ಶ್ರಮದಿಂದ ಅಡಗೂರು ಕೆರೆಗೆ ನೀರು ಬಂದಿದೆ ನಿಮ್ಮ ಬೆಂಬಲಿಗರು ತಲೆಬೋಳಿಸಿಕೊಳ್ತಾರಾ..ಎಂದು ಶಾಸಕರಿಗೆ ಸವಾಲು ಹಾಕಿದರು
ರೈತ ಸಿದ್ದರಾಜು ಮಾತನಾಡಿ,ನಾನು ಸುಮಾರು 9 ವರ್ಷದಿಂದ ಪರಿಹಾರಕ್ಕಾಗಿ ಅಲೆದಾಡಿದ್ದೇನೆ ಇತ್ತ ಭೂಮಿಯೂ ಇಲ್ಲ ಪರಿಹಾರವೂ ಇಲ್ಲದಾಗಿರುವಾಗ ನನಗೆ ನನ್ನ ಜಮೀನು ಉಳಿಸಿಕೊಡಿ ನನಗೆ ಹಣಬೇಡ ಎಂದು ಇಂಜಿನಿಯರ್ ವಿವೇಕ್ ಹತ್ತಿರ ಕೇಳಿಕೊಂಡಿದ್ದೆ.ಆದರೆ ನನ್ನ ವಿರುದ್ದ ಷಡ್ಯಂತ್ರ ಮಾಡಿ ನನ್ನ ಜಾಗ ಬಿಡಿಸುವ ಸಲುವಾಗಿ ಪೋಲೀಸರನ್ನ ಕರೆಸಿ ಗಲಾಟೆ ಮಾಡಿಸಿದ್ರು ಆಗಲೂ ಶಾಸಕರು ನನ್ನ ಪರವಾಗಿ ಬರಲಿಲ್ಲ. ಈಗ ಸಿದ್ದರಾಜುಗೆ 3ಲಕ್ಷ ಹಣವನ್ನು ಮನೆಗೆ ಹೋಗಿ ಕೊಟ್ಟಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ನನಗೆ ಯಾರು ಹಣಕೊಟ್ಟಿಲ್ಲ.ನನಗೆ ಸುತ್ತ ಮುತ್ತಲ ಗ್ರಾಮಸ್ಥರ ಬಳಿ ಹಣ ಸಂಗ್ರಹಿಸಿ ಮಾಜಿ ಅದ್ಯಕ್ಷರು ವಿಜಯಕುಮಾರ್ ಒಂದು ಲಕ್ಷ ಕೊಡಿಸಿದ್ದರು.ನನಗೆ ಶಿವರಾಮಣ್ಣ ಪರಿಹಾರ ಕೊಡಿಸುವುದಾಗಿ ಹೇಳಿ,ನಿನ್ನಿಂದ ಸಾವಿರಾರು ರೈತ ಕುಟುಂಬಗಳಿಗೆ ತೊಂದರೆಯಾಗಬಾರದು ನಿನ್ನ ಭೂಮಿ ಬಿಟ್ಟುಕೊಡು ಎಂದು ನನಗೆ ಮನವೊಲಿಸಿದ್ದಕ್ಕೆ ನಾನು ಒಪ್ಪಿಕೊಂಡೆ ಹೊರತು ಶಾಸಕರ ಮಾತಿಗೆ ನಾನು ಒಪ್ಪಿಕೊಂಡಿಲ್ಲ ನನಗೆ 3 ಲಕ್ಷ ಮನೆಗೆ ಹೋಗಿ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ ನಮ್ಮ ಮನೆಯವರಿಗೆ ಎಲ್ಲಿಂದ 3 ಲಕ್ಷ ಕೊಡಲಿ, ಶಾಸಕರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಬಾರದು ಎಂದು ಸಿದ್ದರಾಜು ಶಾಸಕರ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಮಾದಿಹಳ್ಳಿ ಹೋಬಳಿ ಅದ್ಯಕ್ಷ ನಟೇಶ್ ಮಾತನಾಡಿ,ಶಾಸಕರು ಎತ್ತಿನ ಹೊಳೆ ನೀರುನಿಲ್ಲಿಸಿ ಜನರ ರಕ್ತ ಹೀರುತ್ತಿದ್ದೀರಿ, ಒಬ್ಬರಿಗೊಬ್ಬರು ದ್ವೇಷ ಮಾಡಿಕೊಂಡು ಏನು ಸಾದಿಸುತ್ತೀರಿ.ಶಿವರಾಮ ಮಾಡಿದ್ದನ್ನ ನಾನೆ ಮಾಡಿದೆ ಎಂದು ಹೇಳಿಕೊಳ್ಳುವ ಬದಲು ನೀವು ಮಾಡೋ ಕೆಲಸ ಬೇಕಾದಷ್ಟಿವೆ.ಅವುಗಳನ್ನು ಮಾಡಿ ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ.ನೀರು ಬಿಜೆಪಿ,ಜೆಡಿ ಎಸ್, ಕಾಂಗ್ರೆಸ್ ಅಂತ ಯಾರಿಗೂ ಸೇರಿಲ್ಲ.15ದಿನ ಸಿದ್ದರಾಜು ಜಮೀನಿನ ಬಳಿ 35-40 ಜನ ಕುಳಿತು ಕೆಲಸ ಮಾಡಿ ರಾತ್ರಿ 3 ಗಂಟೆಗೆ ಮನೆಗೆ ಹೋಗಿದ್ದೇವೆ ಸಿದ್ದರಾಜುಗೆ ನಾವು ಎಲ್ಲರ ಬಳಿ ದೇಣಿಗೆ ಸಂಗ್ರಹಿಸಿ ಹಣ ನೀಡಿದ್ದೇವೆ.ಸಾದ್ಯವಾದರೆ ಒಳ್ಳೆ ಕೆಲಸ ಮಾಡಿ ಶಿವರಾಮಣ್ಣನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಪುಕ್ಕಟೆ ಪ್ರಚಾರ ತೆಗೆದುಕೊಳ್ಳುವುದನ್ನು ನಿಲ್ಲಿಸಿ.ಅಡಗೂರು ಕೆರೆಗೆ ನೀರು ತುಂಬಿಸಿರುವುದರ ಹಿಂದೆ ಯಾರ ಪರಿಶ್ರಮವಿದೆ ಎಂದು ಗ್ರಾಮಕ್ಕೆ ಬಂದು ಕೇಳಲಿ ಗ್ರಾಮಸ್ಥರೆ ಉತ್ತರ ಕೊಡುತ್ತಾರೆ ಸುಮ್ಮನೆ ಶಿವರಾಮಣ್ಣ ಮಾಡಿದ ಕೆಲಸಗಳನ್ನೆಲ್ಲ ನಾನು ಮಾಡಿದ್ದು ಎಂದು ಜನರ ಕಣ್ಣಿಗೆ ಮಣ್ಣರೆಚುವ ಕೆಲಸ ಮಾಡಬೇಡಿ ನಿಮ್ಮ ಕಾರ್ಯಕರ್ತರು ಸವಾಲಾಕಿದ ಹಾಗೆ, ಈಗ ತಲೆ ಬೋಳಿಸಿಕೊಳ್ಳಲಿ ಎಂದು ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಪ್ರಸಾದ್ ಮತ್ತಿತರರು ಇದ್ದರು
next post
