Blog

ಉಪ ವಿಭಾಗ ಮಟ್ಟದ ಸಮಿತಿ ಸಭೆ

ನಾಗೇಶ್ ಎಂ ಎಚ್ ಮಾಗೇರಿ.

🔴ರೈತರ ಆತ್ಮಹತ್ಯೆ  ಆಕಸ್ಮಿಕ ಮರಣ ಹಾಗೂ  ಬಣವೆ ನಷ್ಟ ಯೋಜನೆ ಅಡಿ  ಸಂತ್ರಸ್ತರಿಗೆ ಮನೆ ಬಾಗಿಲಿಗೆ ಸಮಾಲೋಚನೆಗಾಗಿ

🔴ಉಪ ವಿಭಾಗ ಮಟ್ಟದ ಸಮಿತಿಯ ಸಭೆ

ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ಚಂಗಡಿಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿ ಯ ಶಾಂತಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತ ಸಕಲೇಶಪುರ  ವತಿಯಿಂದ ರೈತರ ಆತ್ಮಹತ್ಯೆ  ಆಕಸ್ಮಿಕ ಮರಣ ಹಾಗೂ  ಬಣವೆ ನಷ್ಟ ಯೋಜನೆ ಅಡಿ  ಸಂತ್ರಸ್ತರಿಗೆ ಮನೆ ಬಾಗಿಲಿಗೆ ಸಮಾಲೋಚನೆಗಾಗಿ ಉಪ ವಿಭಾಗ ಮಟ್ಟದ ಸಮಿತಿಯ   ಸಭೆ ಆಯೋಜಿಸಲಾಯಿತು.

ಈ ಸಭೆಯಲ್ಲಿ  ಉಪವಿಭಾಗಾಧಿಕಾರಿಗಳಾದ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ ಆತ್ಮಹತ್ಯೆ ಮಾಡಿ ಕೊಂಡ 2 ರೈತ ಕುಟುಂಬಕ್ಕೆ ರೂ 5ಲಕ್ಷ ಹಾಗೂ ಆಕಸ್ಮಿಕ ಮರಣ ಹೊಂದಿದ ರೂ 2 ಲಕ್ಷ ಸಮಿತಿಗೆ ಶಿಫಾರಸ್ಸು ಮಾಡಿರುವುದಾಗಿ ಅಲ್ಲದೆ ಆತ್ಮಹತ್ಯೆ,ಆಕಸ್ಮಿಕ ಮರಣ ಅಥವಾ ಬೆಂಕಿಗಾಹುತಿ ಹೊಂದಿದ ರೈತ ಕುಟುಂಬ ಹೊಲದ ಆವರಣದ ಹಾಗೂ ಅವರ ಮನೆಯ ಬಾಗಿಲಲ್ಲೆ ಸಭೆಯನ್ನು ಆಯೋಜನೆ  ಮಾಡಿ  ಅವರ ಕುಟುಂಬಕ್ಕೆ   ಸಾಂತ್ವಾನ ಹೇಳಿ ಆತ್ಮ ವಿಶ್ವಾಸ  ಬೆಳೆಸಿಕೊಂಡು ಉತ್ತಮ  ಜೀವನ ರೂಪಿಸಿ ಕೊಂಡು  ಬದುಕುವ  ಬಗ್ಗೆಆತ್ಮಸ್ಥರ್ಯ ತುಂಬಿದರು.

  ಸಂತ್ರಸ್ತ ರೈತ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ  ಅನುಕೂಲವಾಗುವ, ಸರ್ಕಾರಿ  ಸೌಲಭ್ಯಗಳು ತಹಸಿಲ್ದಾರ್, ಹಾಗೂ ಕೃಷಿ ಸಲಕರಣೆ ಪಡೆಯಲು ಕೃಷಿ ಅಧಿಕಾರಿಗಳು,  ಸಹಯೋಗದಲ್ಲಿ ಪಡೆದು ಕೊಳ್ಳುಲು ತಿಳಿಸಿದರು.


ಈ ಸಂದರ್ಭದಲ್ಲಿ  ತಹಸಿಲ್ದಾರ್  ಸುಪ್ರಿತ ಕೆಎಸ್, ಸಹಾಯಕ ಕೃಷಿ ನಿರ್ದೇಶಕರಾದ ಪ್ರಕಾಶ್ ಕುಮಾರ್. ಯು ಎಂ, ಸಹಾಯಕ ನಿಬಂಧಕರ ಮಾರಾಟ ಕಚೇರಿ  ಅಧಿಕಾರಿಗಳು, ಯಸಳೂರು ಪೊಲೀಸ್ ಅಧಿಕಾರಿಗಳು, ಯಸಳೂರು ಗ್ರಾಮಸ್ವನಿರೀಕ್ಷಕರು,  ಲೆಕ್ಕಾಧಿಕಾರಿಗಳು ರೈತ ಕುಟುಂಬಗಳು ಗ್ರಾಮಸ್ಥರು,  ಇತರರು ಹಾಜರಿದ್ದರು.

Related posts

ಈ ವ್ಯಕ್ತಿ ನಿಮಗೆ ಗೊತ್ತಾ

Bimba Prakashana

ಸಕಲೇಶಪುರದಲ್ಲಿ ಮಹಿಳೆ ನಾಪತ್ತೆ

Bimba Prakashana

ಆಲೂರು ಕೊಪ್ಪಲು ಕಿರು ಹಳ್ಳ ಸೇತುವೆಗೆ ಭೂಮಿ ಪೂಜೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More