ಆಲೂರು:ತಾಲ್ಲೂಕಿನ ಪಾಳ್ಯ ಹೋಬಳಿ ವ್ಯಾಪ್ತಿಯ ಅರೆಹಳ್ಳದ ಕೊಪ್ಪಲು ಗ್ರಾಮದಲ್ಲಿ ಕಿರು ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು ಇಂದು ಶಾಸಕ ಸಿಮೆಂಟ್ ಮಂಜು ಅವರು ಭೂಮಿ ಪೂಜೆ ಮಾಡಿದರು.
ನಂತರ ಮಾತನಾಡಿದ ಶಾಸಕರು ಈ ಗ್ರಾಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲೆಂದು ಇಪ್ಪತ್ತು ಲಕ್ಷ ಮೊತ್ತದಲ್ಲಿ ಈ ಸೇತುವೆ ಕಾಮಗಾರಿಯನ್ನು ಮಾಡುತ್ತಿದ್ದೇವೆ,ಮಳೆಗಾಲದಲ್ಲಿ ರೈತರು ಹೊಲಗದ್ದೆಗಳಿಗೆ ಸಂಚರಿಸಲು ಪರೆದಾಡುವಂತಹ ಸಂಧರ್ಭವನ್ನು ಇದೀಗ ಪರಿಹರಿಸಲು ಮುಂದಾಗಿದ್ದೇವೆ ಇದರ ಸದಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಮುಖಂಡರಾದ ಹನುಮಂತೇಗೌಡ ಅವರು ಮಾತನಾಡಿ ಹೊನ್ನವಳ್ಳಿ ಕೂಡಿಗೆಯಿಂದ ಚಿಗಳೂರು ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ಮರು ಡಾಂಬರೀಕರಣ ಮಾಡುವಂತೆ ಮನವಿ ಮಾಡಿದಾಗ ಶಾಸಕರು ಮುಂದಿನ ದಿನಗಳಲ್ಲಿ ತ್ವರಿತವಾಗಿ ಮಾಡಿಕೊಡುವುದಾಗಿ ತಿಳಿಸೊದರು,ಗ್ರಾಮದ ಹಲವಾರು ಸಮಸ್ಯೆಗಳನ್ನು ಆಲಿಸಿ ಆಹವಾಲು ಸ್ವಿಕರಿಸಿದರು.
ಈ ಸಂಧರ್ಭದಲ್ಲಿ ಇ.ಓ ಸುಬ್ರಹ್ಮಣ್ಯ ಶರ್ಮ.ನೀರು ಸರಬರಾಜು ಎ.ಇ.ಇ.ಕಿರಣ್.ಜೆ.ಇ ಶರತ್.ಪಿಡಬ್ಲ್ಯೂಡಿ ಎಇಇ ರಮೇಶ್.ಜೆಇ ಮಧು.ಬಿಈಓ ಕೃಷ್ಣೇಗೌಡ.ಪಾಳ್ಯ ಉಪತಹಸಿಲ್ದಾಹರ್ ಪ್ರಭಾಕರ್.ಪಾಳ್ಯ ಪಿಡಿಓ ದರ್ಶನ್.ಪಾಳ್ಯ ನಾಡಕಚೇರಿ ಶೀರಸ್ಥೇದಾರಗ್ರಾಮ ಲೆಕ್ಕಾಧಿಕಾರಿಗಳು.ಕಂಟ್ರಾಕ್ಟರ್ ಮಹೇಶ್.ಬಿಜೆಪಿ ಮುಖಂಡರಾದ ಹನುಮಂತೇಗೌಡ.ಭರಣ್.ರಂಗೇಗೌಡ.ಅರೇಹಳ್ಳದ ಕೊಪ್ಪಲಿನ ಗ್ರಾಮಸ್ಥರುಗಳಾದ ಕೃಷ್ಣೇಗೌಡ.ನಿಂಗರಾಜು .ಸ್ವಾಮಿಗೌಡ.ದೇವರಾಜ್.ಮೀನಾ ಮುಂತಾದವರು ಉಪಸ್ಥಿತರಿದ್ದರು.
previous post
next post
