Blog

ಅನುಮತಿ ಇಲ್ಲದೆ ಆಫ್ ರೋಡ್ ಗೆ ಯತ್ನ – ಅರಣ್ಯ ಇಲಾಖೆ ಎಚ್ಚರಿಕೆ


ಸಕಲೇಶಪುರ:  ಅಗತ್ಯ ಅನುಮತಿ ಪಡೆಯದೇ ಅರಣ್ಯ ಪ್ರದೇಶದಲ್ಲಿ ಆಫ್‌ರೋಡ್ ಚಟುವಟಿಕೆ ನಡೆಸಲು ಮುಂದಾಗಿದ್ದ ಬೆಂಗಳೂರಿನ ಯುವಕರ ತಂಡಕ್ಕೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.


ಆರ್‌ಎಫ್‌ಒ ಹೇಮಂತ್ ಕುಮಾರ್ ಅವರ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳಾದ ಮಹದೇವಪ್ಪ, ದೇವೇಂದ್ರ ಹಾಗೂ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚಿರುವುದರಿಂದ ಆಫ್‌ರೋಡ್ ವಾಹನಗಳ ಸಂಚಾರವು ಅವುಗಳ ಸಹಜ ವಾಸಸ್ಥಾನಕ್ಕೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.


ಜತೆಗೆ ಪರಿಸರ ಹಾನಿ, ಸಾರ್ವಜನಿಕರ ಸುರಕ್ಷತೆ ಹಾಗೂ ಅರಣ್ಯ ಸಂರಕ್ಷಣೆಯ ದೃಷ್ಟಿಯಿಂದ ಯಾವುದೇ ಆಫ್‌ರೋಡ್ ಚಟುವಟಿಕೆ ನಡೆಸುವ ಮುನ್ನ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಸೇರಿದಂತೆ ಸಂಬಂಧಿತ ಇಲಾಖೆಗಳ ಅನುಮತಿ (ಎನ್‌ಒಸಿ) ಮತ್ತು ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.


ಅರಣ್ಯ ಸಿಬ್ಬಂದಿಗಳು ಯುವಕರಿಗೆ ಪರಿಸರ ಸಂರಕ್ಷಣೆ ಹಾಗೂ ವನ್ಯಜೀವಿಗಳ ಮಹತ್ವದ ಕುರಿತು ಅರಿವು ಮೂಡಿಸಿ, ಅಗತ್ಯ ಅನುಮತಿ ಮತ್ತು ದಾಖಲೆಗಳನ್ನು ಪಡೆದ ನಂತರವೇ ಯಾವುದೇ ಚಟುವಟಿಕೆ ಕೈಗೊಳ್ಳುವಂತೆ ತಿಳಿಸಿದರು.


ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಾರ್ವಜನಿಕರು ಇಲಾಖೆಯ ನಿಯಮಗಳನ್ನು ಪಾಲಿಸಿ ಸಹಕರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

Related posts

ಜಾತಿ ನಿಂದನೆ – ಕೊಲೆ ಬೆದರಿಕೆ

Bimba Prakashana

ಹಾನು ಬಾಳು ಚಿಕ್ಕಿ ಸ್ಪರ್ಧೆಯ ಫಲಿತಾಂಶ

Bimba Prakashana

ಅಪಾಯಕಾರಿ ವಿದ್ಯುತ್ ಕಂಬ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More