ವರದಿ:ನಾಗೇಶ್ ಎಂ ಎಚ್, ಮಾಗೇರಿ
🔴ಯಸಳೂರು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಾಸಿಕ ಸಭೆ*.
🔴ಪ್ರತಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ದ ವಿರುದ್ಧ ಸಾರ್ವಜನಿಕರ ದ್ವನಿ*.
🔴ಪೋಲಿಸ್ ಠಾಣೆಯಲ್ಲಿ ದಲ್ಲಾಳಿಗಳ ವಿರುದ್ಧ ಆಕ್ರೋಶ*
ಸಕಲೇಶಪುರ :
ಸಕಲೇಶಪುರ ತಾಲ್ಲೂಕು ಯಸಳೂರು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಾಸಿಕ ಸಭೆಯನ್ನು ಆರಕ್ಷಕ ಉಪ ಅಧೀಕ್ಷಕರಾದ ಸಲ್ಮಾನ್ ರವರ ನೇತೃತ್ವದಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ಈ ಹಿಂದೆ ಮರಡಿಕೆರೆ ಗ್ರಾಮದಲ್ಲಿ ನಡೆದ ಪ್ರಿಯಾ ಶೋಭರಾಜು ರವರ ಮನೆಯನ್ನೂ ಅರಣ್ಯ ಇಲಾಖೆ ಯವರು ಜೆಸಿಬಿ ಇಂದ ಕೆಡುವಿ,
ಶೋಭರಾಜು ರವರ ಮೇಲೆ ಹಲ್ಲೆ ನಡೆಸಿ ವಿಕೃತ್ತಿ ಮೆರೆದಿದ್ದ ಘಟನೆಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಇದರ ವಿರುದ್ಧವಾಗಿ ಅರಣ್ಯ ಇಲಾಖೆಯವರು ಕೂಡ ಶೋಭರಾಜು ಸೇರಿ 5ಜನರ ಮೇಲೆ ಎಫ್ ಐ ಆರ್ ದಾಖಲು ಮಾಡಿದ್ದಾರೆ..
ಆದರೆ ಅರಣ್ಯ ಇಲಾಖೆ ವಿರುದ್ಧವಾಗಿ ಕೇಸ್ ಆಗಿದ್ದ ಅಟ್ರಾಸಿಟಿ ಕೇಸನ್ನು ಡಿ ಸಿ ಆರ್ ಈ ಡಿ ವೈ ಎಸ್ ಪಿ ರವರು ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆ ಯವರು ನೀಡಿದ್ದ ಕೇಸ್ ಚಾರ್ಜ್ ಸಿಟ್ ಅನ್ನು ಹಾಕಿದ್ದಾರೆ.
ಆದರೆ ನೊಂದ ಪ್ರಿಯಾ ಶೋಭ್ ರಾಜು ಕುಟುಂಬ ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇದರ ವಿರುದ್ಧ ಸೂಕ್ತ ತನಿಖೆ ಆಗಬೇಕು. ಇದರ ಜೊತೆಗೆ ವನಗೂರು ಗ್ರಾಮ ಪಂಚಾಯತಿ ವತಿಯಿಂದ ನಡೆದ ಹರಾಜು ಪ್ರಕ್ರಿಯೆ ಯಲ್ಲಿ ವಸಂತ್ ಕುಮಾರ್ ರವರ ಕೇಸ್ ಮತ್ತು ಮನೆಗೆ ಬೆಂಕಿ ಹಾಕಿ ಅಟ್ಟಹಾಸ ಮೆರೆದ ಹಾರಳ್ಳಿ ದೇವರಾಜು ರವರ ಕೇಸ್ ಒಳಗೊಂಡಂತೆ
ನೊಂದವರಿಗೆ ನ್ಯಾಯ ಸಿಗಬೇಕು ಎಂದು ಹಿರಿಯರು ಹಾಗೂ ನಿವೃತ್ತ ಪಿ.ಡಿ.ಓ ಗಳಾದ ಹೆತ್ತೂರು ಕೊಮಾರಯ್ಯ ರವರು ತಿಳಿಸಿದರು.
ಪುಟ್ಟಸ್ವಾಮಿ ಯಸಳೂರು ಮಾತನಾಡಿ ಕಂಪ್ಲೇಂಟ್ ಕೊಡಲು ಹಳ್ಳಿಯ ಮುಗ್ಧ ಜನರು ಪೊಲೀಸ್ ಠಾಣೆಗೆ ಬಂದಾಗ ನೊಂದವರ ಜೊತೆ ದಲ್ಲಾಳಿಗಳ ಪ್ರವೇಶ ನಡೆಯುತ್ತಿದೆ ಪೊಲೀಸ್ ಠಾಣೆಯಲ್ಲಿ ದಲ್ಲಾಳಿಗಳು ಬಂದು ಪೋಲಿಸ್ ನವರ ಹೆಸರು ಹೇಳಿ ನೊಂದವರ ಜೊತೆ ಹಣ ಪೀಕು ತಿದ್ದಾರೆಂಬುದು ನಮ್ಮ ಗಮನಕ್ಕೆ ಬಂದಿದೆ.
ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ನೊಂದವರಿಗೆ ನ್ಯಾಯ ಸಿಗುವಂತೆ ವರ್ತಿಸಬೇಕೆಂದು ತಿಳಿಸಿದರು.
ಠಾಣಾ ವ್ಯಾಪ್ತಿಯಲ್ಲಿ ಪ್ರತಿ ಅಂಗಡಿಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ನಡೆಯುತ್ತಿದೆ. ದಯವಿಟ್ಟು ಇದಕ್ಕೆ ಸೂಕ್ತ ಕಡಿವಾಣ ಹಾಕಬೇಕು ಎಂದು ಹಿರಿಯ ಮುಖಂಡರುಗಳು ಯುವ ಮುಖಂಡರುಗಳು ಅಭಿಪ್ರಾಯಪಟ್ಟರು.
ಆಸ್ಪತ್ರೆಯ ವೈದ್ಯಕೀಯ ಸಮಸ್ಯೆಗಳ ಬಗ್ಗೆ ಹಾಗೂ ಅರಣ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು.
ಉಪ ಆರಕ್ಷಕ ನಿರೀಕ್ಷಕರಾದ ಸಲ್ಮಾನ್ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸೈಬರ್ ಕ್ರೈಂ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ.ಮಕ್ಕಳ ಪೋಷಕರು ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು ಜೊತೆಗೆ
ನಮ್ಮ ಇಲಾಖೆಯಿಂದ ಯಾವುದೇ ನೊಂದ ಜನರು ಬಂದರೂ ಸಹ ಅವರಿಗೆ ಸರಿಯಾದ ಮಾಹಿತಿಯನ್ನು ನೀಡಿ ನೊಂದವರಿಗೆ ನ್ಯಾಯ ಸಿಗುವಂತೆ ಕೆಲಸ ಮಾಡುತ್ತೇವೆ.
ಮುಂದಿನ ಸಭೆಯಲ್ಲಿ ಇದಕ್ಕೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಸಭೆಯಲ್ಲಿ ಭಾಗವಹಿಸುವಂತೆ ತಿಳಿಸುತ್ತೇವೆ.
ಈ ಸಭೆಯಲ್ಲಿ ಚರ್ಚೆಯಾದ ಅಧಿಕಾರಿಗಳಿಗೆ ನಮ್ಮ ಇಲಾಖೆಯ ಪರವಾಗಿ ನಾನು ನೋಟೀಸ್ ನೀಡುತ್ತೇನೆ.
ಇಲ್ಲಿ ಯಾವುದೇ ದಲ್ಲಾಳಿಗಳಿಗೆ ಅವಕಾಶ ಇರುವುದಿಲ್ಲ.ಯಾವುದೇ ನೊಂದ ಜನರು ನೇರವಾಗಿ ನನ್ನನ್ನು ಸಂಪರ್ಕಿಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರುಗಳಾದ ನಿವೃತ್ತ ಬಿ.ಇ.ಓ ಕೊಮಾರಯ್ಯ, ದೊಡ್ಡನಹಳ್ಳಿ ಈರಯ್ಯ,ಗೊದ್ದು ಸೋಮಶೇಖರ್, ಹೆನ್ನಲಿ ಜಯಣ್ಣ, ನಿಂಗಪ್ಪ ಗೊನಹಳ್ಳಿ, ಶಂಭು ಹುಲುಗಳಲೆ, ಯೋಗೇಶ್ ಉಚ್ಚಂಗಿ, ಮಂಜಯ್ಯ್ ಯಸಳೂರು,
ಕೋಮರಯ್ಯ ಬಾಳೆಕೆರೆ, ಯತೀಶ್ ಬಾಳೆಕೆರೆ. ಯೋಗೇಶ್ ದೊಡ್ಡಕಲ್ಲೂರು ಸೇರಿದಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಹಲವಾರು ಹಿರಿಯ ಮತ್ತು ಯುವ ಮುಖಂಡರುಗಳು ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
