ನಾಗೇಶ್ ಎಂ ಎಚ್ ಮಾಗೇರಿ.
🔴20 ವರ್ಷ ಸಕಲೇಶಪುರ ವಿಭಾಗದ ವಿದ್ಯುತ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಯಾಗುತ್ತಿರುವ ಶ್ರೀ ಚನ್ನಬಸಪ್ಪ ಎಂ.ರಾಮಣ್ಣನವರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಸಕಲೇಶಪುರ ತಾಲ್ಲೂಕಿನಲ್ಲಿ ಕಳೆದ 20 ವರ್ಷಗಳಿಂದ “ಚನ್ನಬಸಪ್ಪ ಎಂ.ರಾಮಣ್ಣನವರ್- (ಮೆಕ್ಯಾನಿಕ್ ಗ್ರೇಡ್ -1)”
ಕ.ವಿ.ಪ್ರ.ನಿ.ನೌ ಸಂಘ 659 ಸಕಲೇಶಪುರ ವಿಭಾಗದ ಸಹ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ,ಅಧ್ಯಕ್ಷರಾಗಿ ಮತ್ತು ಕಲ್ಯಾಣ ಸಂಸ್ಥೆ 466ನ ವಿಭಾಗ ಸಮಿತಿಯಲ್ಲಿ ಖಜಾಂಚಿಯಾಗಿ, ಅಧ್ಯಕ್ಷರಾಗಿ,ಕೇಂದ್ರ ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ಸಂಘವೇ ಉಸಿರು ಸಂಘವೇ ಶಕ್ತಿ ಎಂದು ತಿಳಿದು ನೌಕರರ ಪರವಾಗಿ ಅನೇಕ ಕೆಲಸಗಳನ್ನು ಮಾಡಿ ತಮ್ಮದೇ ಸಕರಾತ್ಮಕ ಚಿಂತನೆಗಳ ಮೂಲಕ ನೆಚ್ಚಿನ ನಾಯಕರಾಗಿ ವಿದ್ಯುತ್ ನೌಕರರ ಸಂಘವನ್ನು ಮುನ್ನೆಡೆಸುತ್ತಿದ್ದರು.
ಈಗ ಅವರ ಸ್ವಗ್ರಾಮವಾದ ಹಾವೇರಿ ಜಿಲ್ಲೆಗೆ ವರ್ಗಾವಣೆಗೊಂಡಿರುವುದರಿಂದ
ದಿನಾಂಕ: 09.09.2026 ರಂದು ಪಟ್ಟಣದ ಲಯನ್ಸ್ ಹಾಲ್ ನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘ 659 ಮತ್ತು ಕ.ವಿ.ಪ್ರ.ನಿ.ನಿಯಮಿತ ಪ.ಜಾತಿ/ಪ.ವರ್ಗಳಗಳ ಕಲ್ಯಾಣ ಸಂಸ್ಥೆ – 466 ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಕಲೇಶಪುರ ವಿಭಾಗದ ವಿದ್ಯುತ್ ಇಲಾಖೆಯ ಮುಖ್ಯಾಧಿಕಾರಿಗಳು, ನೌಕರರ ಸಂಘದ ಪದಾಧಿಕಾರಿಗಳು,ವಿದ್ಯುತ್ ಗುತ್ತಿಗೆದಾರರು, ಸಕಲೇಶಪುರ ವಿಭಾಗದ ನೌಕರರ ಸಂಘದ ಅಧ್ಯಕ್ಷರಾದ ಶಾಂತರಾಜ್ ಸಿಡಿಗಳಲೆ ಹಾಗೂ ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಸಾಮಾಜಿಕ ಸಂಘಟನೆಗಳ ಮುಖಂಡರುಗಳು ಉಪಸ್ಥಿತಿಯಿದ್ದರು.

