Blog

ರೋಲರ್ ಸ್ಪೀಡ್ ಸ್ಕೇಟಿಂಗ್ ನಲ್ಲಿ ಅಂತರ್ ರಾಷ್ಟೀಯ ಸಾಧನೆ

ಆಲೂರು. ಇಂಡೋನೇಷಿಯಾದ ಜಕರ್ತ ನಗರದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ರೋಲರ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ವಿಭಾಗದ 1000 ಮೀಟರ್ ಸ್ಕೇಟಿಂಗ್ ನಲ್ಲಿ ಆಲೂರು ತಾಲೂಕಿನ ದೊಡ್ಡಕಣಗಾಲು ಗ್ರಾಮದ ಶಿವರಂಜನ್. ಸಿ ಎಂಬ ಕ್ರೀಡಾಪಟು   ಭಾರತ ತಂಡದಲ್ಲಿ ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗೆಲ್ಲುವ ಮೂಲಕ ನಮ್ಮ ಭಾರತ ದೇಶಕ್ಕೆ ಹಾಗೂ ಕರ್ನಾಟಕ ರಾಜ್ಯಕ್ಕೆ. ಹಾಸನ ಜಿಲ್ಲೆಗೆ. ಹಾಗೂ  ತಾಲೂಕಿಗೆ ಹಾಗೂ ಬಸವನಪುರ ಹೊಸಪುರ ಗ್ರಾಮಕ್ಕೆ ಕೀರ್ತಿ ಕೀರ್ತಿ ತಂದು ತನ್ನ ತಂದೆ ತಾಯಿಗೆ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರಿಗೆ ಗೌರವ ತಂದಿರುತ್ತಾರೆ.

ಇವರನ್ನು ಆಲೂರು ಸಕಲೇಶಪುರ ಕ್ಷೇತ್ರದ ಜನಪ್ರಿಯ ಶಾಸಕರಾದ ಸಿಮೆಂಟ್ ಮಂಜು ಸೇರಿದಂತೆ  ಆಲೂರು ತಾಲೂಕಿನ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ದಡದಲ್ಲಿ ನವೀನ್ ಆಲೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಾಗೂ ಕಾರ್ಯನಿರತ್ ಪತ್ರಕರ್ತರ ಸಂಘದ   ಉಪಾಧ್ಯಕ್ಷರಾದ ನವೀನ್ ಬೈರಾಪುರ. ತಾಲೂಕ ಆಡಳಿತ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣೆಗೌಡ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದಂತಹ ನಟರಾಜ್. ಹಾಗೂ ಮಾದಿಗ ದಂಡೋರ ಅಧ್ಯಕ್ಷರಾದ ಹರಸಪ್ಪ ಜವರಪ್ಪ. ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸಾಧನೆ ಮಾಡಿದ ಶಿವರಂಜನ್ ಸಿ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Related posts

ಪೌರ ಕಾರ್ಮಿಕರಿಗೆ ಕಿಟ್ ವಿತರಣೆ

Bimba Prakashana

ಸೋಮಪ್ಪ ನಿಧನ

Bimba Prakashana

ಬಸವ ಕಪ್ ಕ್ರಿಕೆಟ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More