Blog

ಆಲೂರು ಬೈರಾಪುರ ಕಾಮಗಾರಿ ಅವೈಜ್ಞಾನಿಕ

ಅವೈಜ್ಞಾನಿಕ ವಾಗಿ ನಡೆಯುತ್ತಿರುವ ಆಲೂರು ಬೈರಾಪುರ ಸಂಪರ್ಕಿಸುವ ಚತುಷ್ಪತ ರಸ್ತೆ ಕಾಮಗಾರಿ?


. ಆಲೂರು ಬೈರಾಪುರ ರಸ್ತೆ ಕಾಮಗಾರಿಗೆ ಚಾಲನೆ  ಕೊಟ್ಟಿರುವುದು ಒಂದು ಕಡೆ ಸಂತೋಷವಾದರೆ ರಸ್ತೆಯ ಅಕ್ಕಪಕ್ಕದಲ್ಲಿ ಚರಂಡಿ ಮಾಡದೆ ಅವಜ್ಞಾನಿಕ ಕಾಮಗಾರಿ ಮಾಡಿದ್ದಾರೆ.

ಯಾವುದೇ ನಾಮಫಲಕ ಹಾಕದೆ ರೇಡಿಯಮ್ ಸ್ಟಿಕರ್ ಹಾಕಿಲ್ಲ  ಹಾಗೂ ಎರಡು ಮೂರು ತಿಂಗಳು ಕಳೆದರು ಶೇಕಡ ಮೂವತ್ತರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಹಳೆಯ ಡಾಂಬರ್ ರಸ್ತೆ ಮೇಲೆ ಡಿವೈಡರ್ ಸಿಮೆಂಟ್ ಇಟ್ಟಿಗೆ ಯನ್ನು ಇಟ್ಟಿರುವುದು ಅವೈಜ್ಞಾನಿಕವಾಗಿದೆ. ರಸ್ತೆಯಲ್ಲಿ ಸಾರ್ವಜನಿಕರು ದ್ವಿಚಕ್ರ ವಾಹನ ಸವಾರರು ಪರದಾಡುತ್ತಿರುವುದು ಹಾಗೂ ದಿನಕ್ಕೆ ಏಳರಿಂದ ಎಂಟು ಅಪಘಾತಗಳು ಸಂಭವಿಸುತ್ತಿದ್ದು. ವಾಹನ ಸವಾರರು ಇಡೀ ಶಾಪ ಹಾಕುತ್ತಿದ್ದಾರೆ.

ಮಾರ್ಚ್ ತಿಂಗಳಿನಲ್ಲಿ ಅಲೂರು ಸಕಲೇಶಪುರ ಶಾಸಕರಾದ ಸಿಮೆಂಟ್ ಮಂಜುನಾಥ್ ರವರು ಈ ರಸ್ತೆಗೆ ಗುದ್ದಲಿ ಪೂಜೆ ಮಾಡಿದ್ದು ಮೂರು ತಿಂಗಳು ಕಳೆದರೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದು. ಸಾರ್ವಜನಿಕರಲ್ಲಿ ಬೇಸರ ಮೂಡಿದೆ.

ಶಾಲೆಗಳು ಶುರುವಾಗಿರುವುದರಿಂದ ಮಕ್ಕಳು, ಸೈಕಲ್ ಗಳಲ್ಲಿ ಶಾಲೆಗೆ ಪ್ರಯಾಣ ಮಾಡುವುದಕ್ಕು ತೊಂದರೆ ಆಗಿದೆ.

ಆದ್ದರಿಂದ ಮಾನ್ಯ ಶಾಸಕರು, ಸಂಬಂಧಪಟ್ಟ ಇಲಾಖೆಯವರು,ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಆದಷ್ಟು ಬೇಗ ಕಾಮಗಾರಿಯನ್ನು ಸರಿಯಾದ ರೀತಿಯಲ್ಲಿ ಮಾಡುವಲ್ಲಿ ಸಹಕಾರ ನೀಡಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.

Related posts

ಶಾಸಕರಿಗೆ ಶುಭಾಶಯಗಳನ್ನು ತಿಳಿಸಿದ ಸಕಲೇಶಪುರ ಪತ್ರಕರ್ತರು

Bimba Prakashana

🔴ಬೇಕಾಗಿದ್ದಾರೆ

Bimba Prakashana

ನ್ಯಾಯ ಬೆಲೆ ಅಂಗಡಿ ಮಾಲೀಕರ ವಿರುದ್ಧ ಅಧಿಕಾರಿಗಳು ಕ್ರಮ ಕೈ ಗೊಳ್ಳಿ – ದೇಶಾಣಿ ಆನಂದ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More