ಹಾಸನ ಜಿಲ್ಲೆ ಸಕಲೇಶಪುರ ತಾಲೂಕು, ಯಶಳೂರು ಹೋಬಳಿಯ ಹಾರಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ದೇವರಾಜ್ ರವರಿಗೆ ನಂದಳ್ಳಿ ಗ್ರಾಮದ ವೆಂಕಟೇಶ್ ಶೆಟ್ಟಿ ಮತ್ತುವಸಂತ ಗೌಡ ಸಹಚರರು ಕತ್ತಿಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ದಿನಾಂಕ 18.05.2026 ರಂದು ಸಂಜೆ
ದೇವರಾಜ್ ರವರ ಮಗಳ ಗಂಡ ಕಿರಣ್
ದೇವರಾಜ್ ಮನೆಯ ಮುಂಭಾಗ ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ
ನಿಲ್ಲಿಸಿದ್ದ ಬೈಕನ್ನು ಅಪಹರಿಸಿ ಡ್ಯಾಮೇಜ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಈ ವಿಷಯವಾಗಿ ಯಸಳೂರು ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ವೆಂಕಟೇಶ್ ಶೆಟ್ಟಿ ಮತ್ತು ವಸಂತ ನನ್ನು ಕರೆಸಿ ಬೈಕಿಗೆ ಆಗಿರುವ ಡ್ಯಾಮೇಜಿನ ನಷ್ಟ ತುಂಬಿ ಕೊಡುವಂತೆ ತಿಳುವಳಿಕೆ ನೀಡಿ ತಿಳಿಸಲಾಗಿತ್ತು.
ಈ ಹಳೆಯ ದ್ವೇಷದ ಹಿನ್ನೆಲೆ ಯಲ್ಲಿ ದೇವರಾಜ್ ರವರು ಕೆಲಸಕ್ಕೆ ಹೋಗುವಾಗ ನಂದಳ್ಳಿ ಗ್ರಾಮದ ವೆಂಕಟೇಶ್ ಶೆಟ್ಟಿ ರಸ್ತೆಯಲ್ಲಿ ಅಡ್ಡ ಹಾಕಿ ನನ್ನ ನಡುವೆ ಕಂಪ್ಲೇಂಟ್ ಕೊಡುತ್ತೀಯಾ ಸೂ *** ಮಗನೇ ಬೊ **ಮಗನೆ ಕೆಟ್ಟ ಪದಗಳಿಂದ ಜಾತಿ ನಿಂದಿಸಿ ಕತ್ತಿ ಯಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ತೀವ್ರವಾಗಿ ಗಾಯವಾಗಿದ್ದ ದೇವರಾಜ್ ರವರನ್ನು ಶನಿವಾರ ಸಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಂತರ ಈ ಹಿನ್ನೆಲೆಯಲ್ಲಿ ವೆಂಕಟೇಶ್ ಶೆಟ್ಟಿ ಮತ್ತು ಸಹಚಾರರು ದೇವರಾಜ್ ರವರು ವಾಸವಿದ್ದ ಮನೆಗೆ ಬೆಂಕಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಸಕಲೇಶಪುರ ಡಿವೈಎಸ್ಪಿ ಮಾಲತೇಶ್, ವೃತ್ತ ನಿರೀಕ್ಷಕರಾದ ಬಸವಣ್ಣ ಗೌಡ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ
ಈ ಸಂದರ್ಭದಲ್ಲಿ
ಗೊದ್ದು ಸೋಮಶೇಖರ್, ಶಂಭು ಹುಳುಗಳಲೆ,ಹಾರಳ್ಳಿ ಚೆನ್ನಯ್ಯ, ವಿರೇಶ್ ವಳಲಹಳ್ಳಿ,ಚಂಗಡಹಳ್ಳಿ ನಿಂಗರಾಜ್, ಪುಟ್ಟ ಸ್ವಾಮಿ, ಗೋಪಾಲ್. ಜಗದೀಶ್ ವಸಂತ್ ಹೊಸೂರು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
previous post
