Blog

1 ರೂ ಗೆ ಬಿಸಿ ಬಿಸಿ ಟೀ

ಇಂದು ಬೆಳಿಗ್ಗೆ ಸಕಲೇಶಪುರದಲ್ಲಿ ಮಲೆನಾಡು ರಕ್ಷಣ ಸೇನೆಯ ಕಾರ್ಯಕರ್ತರು 1 ರೂ ನಲ್ಲಿ ಟೀ ನೀಡುವ ಮೂಲಕ ಒಂದು ವಿನೂತನ ಪ್ರತಿಭಟನೆ ಹಮ್ಮಿ ಕೊಂಡಿದ್ದರು.

ಸಕಲೇಶಪುರದ ಹೇಮಾವತಿ ನದಿಯ ಬಳಿ ಉದ್ಯಮಿಯೋರ್ವರು ಸರಕಾರಿ ಜಾಗವನ್ನು ಕಬಳಿಸಲು ಹುನ್ನಾರ ನಡೆಸುವ ಬಗ್ಗೆ ಮಲೆನಾಡು ರಕ್ಷಣಾ ಸೇನೆ ಆಕ್ರೋಶ ವ್ಯಕ್ತ ಪಡಿಸಿ ವಿನೂತನ ಪ್ರತಿಭಟನೆ ಮಾಡಿತ್ತು.

ಜನರಿಗೆ 1 ರೂ ನಲ್ಲಿ ಟೀ ನೀಡತೊಡಗಿದಾಗ  ಶಾಸಕ ಸಿಮೆಂಟ್ ಮಂಜುನಾಥ್ ರವರು ಈ ಸಮಸ್ಯೆ ಪರಿಹಾರ ಮಾಡುವುದಾಗಿ ಭರವಸೆ ನೀಡಿದ್ದರಿಂದ ಬೋರ್ಡನ್ನು ಕಾನೂನು ರೀತಿಯಲ್ಲಿ ನಾನು ತೆರವುಗೊಳಿಸಿಕೊಡುತ್ತೇನೆ ಎಂದು ಹೇಳಿದ್ದರಿಂದ ಹೋರಾಟವನ್ನು ಈ ದಿನ ತಾತ್ಕಾಲಿಕವಾಗಿ ಕೈ ಬಿಡಲಾಯಿತು.

ಮುಂದಿನ ದಿನಗಳಲ್ಲಿ ಬೋರ್ಡ್ ತೆರವುಗೊಳಿಸದೆ ಇದ್ದರೆ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಡಾ. ಸಾಗರ್ ಜಾನೇ ಕೆರೆ ತಿಳಿಸಿದ್ದಾರೆ

Related posts

ವಳಲಹಳ್ಳಿಯಲ್ಲಿ ಶ್ರೀ ಗುರು ಶನೈಶ್ಚರ ಪೂಜೆ

Bimba Prakashana

ಆಲೂರು ವಿದ್ಯುತ್ ವಿತರಣ ಉಪ ಕೇಂದ್ರ ಕಾಮಗಾರಿಗೆ ಭೂಮಿ ಪೂಜೆ

Bimba Prakashana

ಜೆಡಿಎಸ್ ನಿಂದ ಹಲವಾರು ಮಂದಿ ಕಾಂಗ್ರೆಸ್ ಗೆ ಸೇರ್ಪಡೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More