Blog

ಬಾಗೆ ಪಿಡಿಓ ವಿರುದ್ಧ ಹೋರಾಟದ ಕಹಳೆ

ಪಿಡಿಓ ಅಮಾನತ್ತಿಗೆ ಆಗ್ರಹ – ತಾಲ್ಲೂಕು ಕರವೇ ವತಿಯಿಂದ ನಾಳೆ ಅನಿರ್ಧಿಷ್ಟಾವಧಿ ಧರಣಿ.

ಸಕಲೇಶಪುರ: ತಾಲ್ಲೂಕಿನ ಬಾಗೆ ಗ್ರಾಮಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಓ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ತಕ್ಷಣ ಅಮಾನತ್ತು ಮಾಡಿ ಪಾರದರ್ಶಕ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಕಲೇಶಪುರ ಘಟಕ ಒತ್ತಾಯಿಸಿದೆ.

ಕರವೇ ವೇದಿಕೆಯ ಮುಖಂಡರು ಸಾರ್ವಜನಿಕ ಹಣದ ದುರ್ಬಳಕೆ ಆರೋಪಗಳನ್ನು ಉಲ್ಲೇಖಿಸಿ ಈಗಾಗಲೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಇನ್ನೂ ಕಠಿಣ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಳೆ ತಾಲ್ಲೂಕು ಪಂಚಾಯತ್ ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ವೇದಿಕೆ ಘೋಷಿಸಿದೆ. ಪ್ರತಿಭಟನೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡುವಂತೆ ತಾಲ್ಲೂಕು ಕರವೇ  ಘಟಕದ ಅಧ್ಯಕ್ಷರಾದ ಗಗನ್ ಹಾಡ್ಲಾಹಳ್ಳಿ  ಮನವಿ ಮಾಡಿದ್ದಾರೆ.

Related posts

ಸಾಲು ಮರದ ತಿಮ್ಮಕ್ಕ ಸ್ಮಾರಕ ನಿರ್ಮಾಣಕ್ಕೆ ಆದ್ಯತೆ – ಈಶ್ವರ ಖಂಡ್ರೆ

Bimba Prakashana

ಬಿಜೆಪಿ ಜಯಭೇರಿ – ಆಲೂರುನಲ್ಲಿ ಬಿಜೆಪಿ ಸಂಭ್ರಮ

Bimba Prakashana

ಬೇಲೂರುನಲ್ಲಿ ಗ್ಯಾರಂಟಿ ಸಮಿತಿ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More