Blog

ಆಲೂರುನಲ್ಲಿ 2.5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ

ವರದಿ :ರಂಜಿತ್ ಕುಮಾರ್ ಅಂಬುಗ..

*ಕ್ಷೇತ್ರದ ಜನರಿಗೆ  ಮೂಲಭೂತ ಸೌಕರ್ಯ ಒದಗಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ:ಶಾಸಕ ಸಿಮೆಂಟ್ ಮಂಜು*

ಆಲೂರು : ಕುಡಿಯುವ ನೀರು,ರಸ್ತೆ,ಚರಂಡಿ,ಹಾಗೂ ವಿದ್ಯುತ್ ದ್ವೀಪ ಹೀಗೆ ಹತ್ತಾರು ಮೂಲಭೂತ ಸೌಕರ್ಯ ನೀಡಬೇಕಾದುದು ಜನಪ್ರತಿನಿಧಿ ಮತ್ತು ಸರ್ಕಾರದ ಕರ್ತವ್ಯ,ನಾನು ಶಾಸಕನಾದ ನಂತರ ಸರ್ಕಾರದಿಂದ ಬರುವ ಅನುದಾನವನ್ನು  ಪ್ರಾಮಾಣಿಕವಾಗಿ ಜನಸಾಮಾನ್ಯರಿಗೆ ಒದಗಿಸಲು ಬದ್ಧನಾಗಿದ್ದೇನೆ ಎಂದು ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಅವರು ತಾಲೂಕಿನ ತಾಲೋಕಿನ ಕಣತೂರು ಮತ್ತು ಹುಣಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಸವಳ್ಳಿ, ಮುರುಡೂರು-ಸಿದ್ದಾಪುರ, ವಿರುಪಾಪುರ, ಹುಲ್ಲಹಳ್ಳಿ ಗ್ರಾಮಗಳ ಹಾಗೂ ಕಾರಗೋಡು ಗ್ರಾ.ಪಂ ವ್ಯಾಪ್ತಿಯ ಅಡಿಬೈಲು ಗ್ರಾಮದ ರಸ್ತೆ ಸೇರಿದಂತೆ ಇಂದು ಮೇಲ್ಕಂಡ ಗ್ರಾಮಗಳ ರಸ್ತೆ ಅಭಿವೃದ್ಧಿಗೆಗಾಗಿ ಸುಮಾರು 2.5 ಕೋಟಿ  ರೂಗಳ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಈ ಗ್ರಾಮಗಳ ಜನರು ನಾನು ಚುನಾವಣೆ ಪೂರ್ವದಲ್ಲಿ ಮತಕ್ಕಾಗಿ ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ರಸ್ತೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಬೇಡಿಕೆ ಸಲ್ಲಿಸಿದ್ದರು ಆದರೆ ಸರ್ಕಾರವು ನಿರೀಕ್ಷಿತ ಪ್ರಮಾಣದಲ್ಲಿ ಅನುದಾನವನ್ನು ವಿಧಾನಸಭಾ ಕ್ಷೇತ್ರಗಳಿಗೆ ಕೊಡದೆ ಇರುವುದರಿಂದ  ತಮಗೆ ನೀಡಿದ್ದ ಭರವಸೆ ಈಡೇರಿಸಲು ಸ್ವಲ್ಪ ತಡವಾಯಿತು ಸರ್ಕಾರದಿಂದ ಬಂದ ಸಣ್ಣಪುಟ್ಟ ಅನುದಾನದಲ್ಲಿ ಕ್ಷೇತ್ರದ ಹೆಚ್ಚು ಅತ್ಯವಶ್ಯಕವಾಗಿರುವ ರಸ್ತೆಗಳ ಪಟ್ಟಿ ಮಾಡಿ ಯಾವುದೇ ತಾರತಮ್ಯ ಮಾಡದೇ ಅಭಿವೃದ್ಧಿ ಪಡಿಸಲಾಗುತ್ತಿದೆ ಈ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಎತ್ತಿನಹೊಳೆ ಯೋಜನೆಯಿಂದ ಅನುದಾನವನ್ನು ಮೀಸಲಿರಿಸಿ ಹಲವು ದಶಕಗಳ ಕಾಲ ರಸ್ತೆಯ ಮೂಲಭೂತ ಸೌಕರ್ಯದಿಂದ ವಂಚಿತವಾಗಿರುವ ಗ್ರಾಮಗಳನ್ನು ಗುರುತಿಸಿ ಜಲ್ಲಿ ರಸ್ತೆಗಳನ್ನು ನಂಬರ್ ರಸ್ತೆಗಳಾಗಿ ಪರಿವರ್ತಿಸುವ ಪ್ರಾಮಾಣಿಕ ಪ್ರಯತ್ನವನ್ನ ಮಾಡಲಾಗುತ್ತಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವುದಾಗಿ ತಿಳಿಸಿದರು ಮುಂದಿನ ದಿನಗಳಲ್ಲಿಯೂ ಸಹ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಚಂದ್ರು,ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಅಬ್ಬನ,ಹುಣಸವಳ್ಳಿ ಗ್ರಾ.ಪಂ ಮಾಜಿ ಸದಸ್ಯ, ಮೋಹನ್ ಮಾವನೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ಉಪ್ಪಿನಂಗಡಿ ಗಡಿಯಾರ ಬಳಿ ಅಪಘಾತ – ಯುವಕ ಮೃತ್ಯು

Bimba Prakashana

ಆನೆ ಸಮಸ್ಯೆ – ದೆಹಲಿಯಲ್ಲಿ ಮಾಜಿ ಪ್ರಧಾನಿ ಹಾಗೂ ಸಚಿವರ ಭೇಟಿ

Bimba Prakashana

ಹಾಸನ ಜಿಲ್ಲಾ ಸಹಕಾರ ಒಕ್ಕೂಟ ಜಿಲ್ಲಾ ನಿರ್ದೇಶಕರಾಗಿ ಗೊದ್ದು ಕೌಶಿಕ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More