Blog

ಸಕಲೇಶಪುರದಲ್ಲಿ ದುರ್ವರ್ತನೆ ತೋರಿದ ಲೈನ್ ಮೆನ್ – ಹಲವರು ಆಕ್ಷೇಪ

 

ಸಕಲೇಶಪುರ : ಮಳೆಗಾಲದಲ್ಲಿ ಹಾಗೂ ಇತರ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಂದಾಗ ಲೈನ್ ಮೆನ್ ಗಳು ವಿದ್ಯುತ್ ಸಮಸ್ಯೆ ಪರಿಹಾರ ಮಾಡಲು ಬಹಳಷ್ಟು ಪ್ರಯತ್ನ ಪಡುತ್ತಾರೆ. ಈ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. ಆದರೆ ಕೆಲವೇ ಕೆಲವು ಮಂದಿ ಲೈನ್ ಮೆನ್ ಗಳು ಜನರೊಂದಿಗೆ ಕೆಟ್ಟ ವರ್ತನೆ ಮಾಡುವ ಬಗ್ಗೆ ಹಲವಾರು ಮಂದಿ ಆಕ್ಷೇಪ ಎತ್ತಿದ್ದಾರೆ.

ಸಕಲೇಶಪುರದ ಕುಶಾಲನಗರ ಬಡಾವಣೆಯಲ್ಲಿ  ಇಂತಹದೊಂದು ಘಟನೆ ನಡೆದಿದೆ.

ಈ ಘಟನೆಯಲ್ಲಿ ಲೈನ್ ಮ್ಯಾನ್ ದುರ್ವರ್ತನೆ ಮಾಡಿದ್ದು ಅಲ್ಪ ಪ್ರಮಾಣದ ಮೊತ್ತಕ್ಕೆ.ಏಕಾಏಕಿ ಕರೆಂಟ್ ಕಟ್ ಮಾಡಲು ಬಂದ ಲೈನ್ ಮ್ಯಾನ್ ಮನೆಯವರು ಕೇಳಲು ಹೋದರೆ ಉಡಾಫೆ ಉತ್ತರಗಳನ್ನು ನೀಡಿ ದಬ್ಬಾಳಿಕೆಗೆ ಮುಂದಾದರು.

ಕರೆಂಟ್ ಕಟ್ ಮಾಡುವುದಕ್ಕೂ ಮುನ್ನವೇ ಮಾಲೀಕರಿಗೆ ಮಾಹಿತಿ ನೀಡಬೇಕು ಸ್ವಲ್ಪ ಕಾಲಾವಕಾಶ ಕಲ್ಪಿಸಿ ಕೊಡಬೇಕಾಗಿರುವುದು ಆದೇಶವಾಗಿರುತ್ತದೆ.

ಆದರೆ ಸಕಲೇಶಪುರದ ಕೆಲ ಲೈನ್ ಮ್ಯಾನ್ ಗಳ ಕತೆ ಹೇಳೋಕೆ ಸಾಕಾಗಲ್ಲ. ಮನೆ ಮಾಲೀಕರ ಜೊತೆ ದಬ್ಬಾಳಿಕೆ ನಡೆಸಿ ಏಕಾಏಕಿ ಡಿಸ್ಕನೆಕ್ಟ್ ಮಾಡಿ ಗೂಂಡಾಗಿರಿ ಮೆರೆಯುತ್ತಿದ್ದಾರೆ.

ಕೇಳಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಸ್ವಲ್ಪ ಹೊತ್ತು ಕಾಲಾವಕಾಶ ಕೊಡಿ ಎಂದು ಕೇಳಿದರು ಪುಡಿ ರೌಡಿಗಳಂತೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಮತ್ತು ಮನೆಯ ಮಾಲೀಕರಾದ ವೃದ್ಧಿಯ  ಜೊತೆ ಅಸಭ್ಯವಾಗಿ ವರ್ತಿಸಿರುವುದು ಸಾರ್ವಜನಿಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Related posts

ಹೆತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಚಾಂಪಿಯನ್

Bimba Prakashana

ಕಾರ್ಜುವಳ್ಳಿ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ವಿಶ್ವರತ್ನ ಕ್ರಿಕೆಟ್ ಪಂದ್ಯಾಟ

Bimba Prakashana

ಉದ್ಯೋಗ ಮಾಹಿತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More