Blog

ಸಕಲೇಶಪುರ 5 ನೇ ವಾರ್ಡ್ ನಲ್ಲಿ ಚರಂಡಿಯಲ್ಲಿ ಬ್ಲಾಕ್ ಆದ ತ್ಯಾಜ್ಯ

ಸಕಲೇಶಪುರ ಐದನೇ ವಾರ್ಡ್ ಬ್ರಾಹ್ಮಣರ ಬೀದಿಯಲ್ಲಿ ಇತ್ತೀಚೆಗೆ ಕಾಂಕ್ರೀಟ್ ಚರಂಡಿ ಕಾಮಗಾರಿ ನಿರ್ವಹಿಸಿರುತ್ತಾರೆ.

ಈ ಕಾಮಗಾರಿ ಮುಗಿದಿದೆ. ಆದರೆ ಚರಂಡಿಯಲ್ಲಿ ಹರಿದು ಬರುವ ನೀರು ಮುಂದೆ ಹೋಗುವ ಸ್ಥಳದಲ್ಲಿ ಅಂಡರ್ ಗ್ರೌಂಡ್ ಕಾಲುವೆಯಲ್ಲಿ ತ್ಯಾಜ್ಯ ಬ್ಲಾಕ್ ಆಗಿದ್ದು ಈಗ ಸುಮಾರು ಹತ್ತು ದಿನಗಳಿಂದ ನೀರು ಮುಂದಕ್ಕೆ ಹರಿದು ಹೋಗದೆ ಚರಂಡಿಯಲ್ಲಿ ತುಂಬಿಕೊಂಡಿರುತ್ತದೆ.

ಇದರಿಂದ ದಿನೇ ದಿನೇ ಸೊಳ್ಳೆಗಳ ಸಂತತಿ ಹೆಚ್ಚಾಗಿದ್ದು, ರೋಗರುಜಿನ  ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ಪುರಸಭಾ ಮುಖ್ಯಾಧಿಕಾರಿಗಳು, ಪುರಸಭಾ ಆಡಳಿತ ಅಧಿಕಾರಿಗಳು ಹಾಗೂ ಸಂಬಂಧಿಸಿದ ಆರೋಗ್ಯ ನಿರೀಕ್ಷಕರುಗಳು ಇತ್ತ ಗಮನ ಹರಿಸಿ ಕೂಡಲೇ ತುರ್ತು ಕ್ರಮ ವಹಿಸಲು ಈ ಪ್ರದೇಶದ ನಿವಾಸಿಗಳು ಕೋರಿರುತ್ತಾರೆ.

Related posts

ಮಾದಕ ವಸ್ತು ಮಾರಾಟ – ಓರ್ವ ಬಂಧನ

Bimba Prakashana

ಬೆಳಗಾರರ ಸಂಘದ ಮಾಸಿಕ ಸಭೆ

Bimba Prakashana

🔴ಕರ್ನಾಟಕ ಪಬ್ಲಿಕ್ ಶಾಲೆ ಹೆತ್ತೂರಿನಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮ.

🔴ಪೋಷಕರಿಂದ ಉತ್ತಮ ಪ್ರತಿಕ್ರಿಯೆ – ಶಿಕ್ಷಣದ ಮೊದಲ ಹೆಜ್ಜೆಗೆ ಶುಭಾರಂಭ.

ಸಕಲೇಶಪುರ :-  ಕರ್ನಾಟಕ ಪಬ್ಲಿಕ್ ಶಾಲೆ ಹೆತ್ತೂರು ಪೂರ್ವ ಪ್ರಾಥಮಿಕ ವಿಭಾಗದ ಎಲ್‌ಕೆಜಿ ತರಗತಿಗೆ ಹೊಸದಾಗಿ ಸೇರ್ಪಡೆಯಾದ ಮಕ್ಕಳಿಗೆ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದದವರ ವತಿಯಿಂದ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಿರಿಯ ಅರ್ಚಕರಾದ ಶ್ರೀಯುತ ಮೂರ್ತಿ ಅವರು ಮಕ್ಕಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಮಂಜುನಾಥ್ ಅವರು ಮಾತನಾಡಿ, ಅಕ್ಷರ ಅಭ್ಯಾಸ ಕಾರ್ಯಕ್ರಮವು ಮಕ್ಕಳಲ್ಲಿ ಹೊಸ ಚೈತನ್ಯ ಹಾಗೂ ಉತ್ಸಾಹ ತುಂಬಲಿ ಎಂದು ಹಾರೈಸಿದರು. ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ನಡೆಯುವ ಸಂಪ್ರದಾಯದ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವುದು ಸಂತಸದ ವಿಷಯ ಎಂದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕರಡಿಗಾಲ ಹರೀಶ್ ಅವರು ಮಾತನಾಡಿ, ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿದ್ದು, ಓದು ಹಾಗೂ ಸೃಜನಾತ್ಮಕ ಚಟುವಟಿಕೆಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.

ಶಾಲಾ ಶಿಕ್ಷಕಿ ಶ್ರೀಮತಿ ತೇಜಸ್ವಿನಿ ಅವರು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಶಾಲೆಯಲ್ಲಿನ ಕಲಿಕಾ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕರಾದ ಮಹೇಶ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ,ಶಿಕ್ಷಕಿಯರಾದ ಸುನಂದಾ ,ರೂಪ ,ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More