Blog

ಅಕ್ರಮ ಗಾಂಜಾ ಮಾರಾಟ

ಸಕಲೇಶಪುರ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ದಿನಾಂಕ 17-7-206 ರಂದು ಅಕ್ರಮ ಗಾಂಜಾ ಮಾರಾಟದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದ ಪೊಲೀಸರು ಅಸ್ಸಾಂ ಮೂಲದ ಮೈನುಲ್  ಹಕ್ ಬಿನ್ ಮನ್ನಾಸ್ ಆಲಿ  ಎಂಬ  ಕೂಲಿ ಕಾರ್ಮಿಕರನ್ನು ವಶಕ್ಕೆ ಪಡೆದು ಆತನಿಂದ ಸುಮಾರು 2 ಕೆಜಿ. 400 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯು ಸಕಲೇಶಪುರ ನಗರ ಪೊಲೀಸ್ ಠಾಣೆ, ಪೊಲೀಸ್ ಇನ್ಸ್ಪೆಕ್ಟರ್ ವನರಾಜು ವಿ ಸಿ ರವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಪಿಎಸ್ಐ ಕೃಷ್ಣಪ್ಪ ರವರ ನೇತೃತ್ವದಲ್ಲಿ ನಡೆದಿದ್ದು ಪಿ ಸಿ ರೇವಣ್ಣ ಶ್ರೀಧರ್ ಅಶೋಕ್ ಮಧು ಹೆಚ್ ಸಿ ಸುನಿಲ್ ರವರು ಭಾಗವಹಿಸಿದ್ದರು.

Related posts

ವಿದ್ಯುತ್ ತಾಗಿ ಮೃತ್ಯು

Bimba Prakashana

ಬೀದಿ ನಾಯಿಗಳಿಗೆ ಬಲಿಯಾದ ಜಿಂಕೆ ಮರಿ

Bimba Prakashana

ಗಣಪತಿ ಸಮಿತಿ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More