Blog

ಹೆತ್ತೂರು ಆಸ್ಪತ್ರೆ ನಿರ್ಲಕ್ಷ್ಯದಿಂದ ತಾಯಿ ಮಗು ಮೃತ್ಯು

ನಾಗೇಶ್ ಎಂ ಎಚ್ ಮಾಗೇರಿ.

🔴ಹೆತ್ತೂರು ಆಸ್ಪತ್ರೆಯ ನಿರ್ಲಕ್ಷದಿಂದ
ತಾಯಿ ಮತ್ತು ಮಗು ಸಾವು.?

🔴ಸರಿಯಾಗಿ ಚಿಕಿತ್ಸೆ ಆಗದಿರುವುದೇ ಅವಘಡ ನಡೆಯಲು ಕಾರಣ


ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ
ಎ ಬ್ಲಾಕ್ ನಿವಾಸಿಯಾದ
ಅಂಬಿಕಾ ರವರಿಗೆ  ಹೆರಿಗೆ ನೋವು ಕಾಣಿಸಿಕೊಂಡು  ಹೆತ್ತೂರು ಆಸ್ಪತ್ರೆಗೆ  ದಾಖಲಾಗಿದ್ದರು..

ಇಲ್ಲಿ ಸುಮಾರು ಮೂರು ಗಂಟೆಗಳ ಚಿಕಿತ್ಸೆಯ
ನಂತರ   ಮಗು ಅಡ್ಡಲಾಗಿದೆ ಇಲ್ಲಿ ಆಗಲ್ಲ ನೀವು ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಅಲ್ಲಿನ ಸಿಬ್ಬಂದಿಯಾದ ಮಂಜುಳಾ ತಿಳಿಸಿರುತ್ತಾರೆ.

ಇಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸರಿಯಾಗಿ ಸಿಗದಿದ್ದಾಗ
ತಡವಾಗಿ ಸಕಲೇಶಪುರ ಕ್ಕೆ
ಕರೆದುಕೊಂಡು ಬಂದಿದ್ದು,
ಇಲ್ಲೂ ಕೂಡ  ವೈದ್ಯರು ಗರ್ಭಿಣಿಯನ್ನು ಆರೋಗ್ಯ ಪರೀಕ್ಷೆ ಮಾಡಿ ನೀವು ಹಾಸನ ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗಲು
ಸಂಬಧಿಕರಿಗೆ ತಿಳಿಸಿದ್ದಾರೆ.

ತಕ್ಷಣ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ  ಕರೆದುಕೊಂಡು ಬಂದು ಚಿಕಿತ್ಸೆ ನೀಡಿ
ನಾರ್ಮಲ್ ಡೆಲಿವರಿ ಆಗುವುದಿಲ್ಲ  ಸಿಜೇರಿಯನ್ ಆಗ್ಬೇಕು ಎಂದು ವೈದ್ಯರು ತಿಳಿಸಿದ್ದರು.
.
ಈ  ಸಂದರ್ಭದಲ್ಲಿ ಮಗು ಹೊಟ್ಟೆಯಲ್ಲಿ   ಮರಣ ಪಟ್ಟಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿನ ದೇಹವನ್ನು
ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಈ ಮಧ್ಯೆ ಮಗುವಿನ ತಾಯಿ ಅಂಬಿಕಾ ರವರ ಸ್ಥಿತಿಯು ಗಂಭೀರವಾಗಿದ್ದು ಇವರನ್ನು ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ರೆಫರ್ ಮಾಡಿರುತ್ತಾರೆ 

ಆಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಹೋಗುವ ದಾರಿ ಮಧ್ಯದಲ್ಲಿ ಅಂಬಿಕಾ ರವರು ಮರಣ ಹೊಂದಿದ್ದು, ಅಂಬಿಕಾ ರವರ ದೇಹಯನ್ನು  ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.


ಅಂಬಿಕಾ ರವರ ಸಂಬಂಧಿಕರಿಂದ ಆಕ್ರೋಶ.

ಅಂಬಿಕಾ ರವರಿಗೆ ಹೆತ್ತೂರು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೇ  ತಾಯಿ ಮತ್ತು ಮಗು ಮರಣ ಹೊಂದಲು ಸಿಬ್ಬಂದಿಗಳೇ ನೇರ ಹೊಣೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಲಿಟಲ್ ಚಾಂಪ್ಸ್ – ಸಕಲೇಶಪುರದ ಅನುಷ್ಕಾ ಮುನ್ನಡೆ

Bimba Prakashana

ಜಕಣಾಚಾರಿಯವರ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿ ಬರಲು ಕಾರಣ ಏನು

Bimba Prakashana

ಸಕಲೇಶಪುರದಲ್ಲಿ ಆಟೋ ದರ ಹೆಚ್ಚಳ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More