ಬೇಲೂರಿನಲ್ಲಿ ಶಿಲ್ಪಕಲಾ ಬ್ರಹ್ಮ” ಜಕಣಾಚಾರಿ ಯವರ ಪ್ರತಿಮೆ ನಿರ್ಮಾಣಕ್ಕೆ ಅಡ್ಡ ಬಂದಿತೇ…. ಜಾತೀರಾಜಕಾರಣ…
ಭಾರತದ ಶ್ರೇಷ್ಠ ಶಿಲ್ಪಿಗಳಲ್ಲಿ ಒಬ್ಬರಾದ ಜಕಣಾಚಾರಿಯವರು ಕರ್ನಾಟಕ ಕಂಡಂತಹ ಅದ್ಬುತ ಅಮರಶಿಲ್ಪಿ.ಇವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಕ್ರೀಡಾಪುರ ಎಂಬ ಪುಟ್ಟ ಗ್ರಾಮದಲ್ಲದರೂ ಸಾದಿಸಿದ್ದು ಮಾತ್ರ ಹಾಸನ ಜಿಲ್ಲೆಯ ಬೇಲೂರು ಹಳೇಬೀಡಿನಲ್ಲಿ.
*ಅಂದು ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡ ಶ್ರೀ ಚನ್ನಕೇಶವ ದೇವಾಲಯಕ್ಕೆ ಸುಮಾರು 912 ವರ್ಷಗಳ ಇತಿಹಾಸವೇ ಇದೆ.ಯಾವುದೆ ಜಾತಿ,ಧರ್ಮಕ್ಕೆ ಸೀಮಿತವಾಗದೆ,ಧರ್ಮ,ನ್ಯಾಯ,ತ್ಯಾಗ ಮತ್ತು ವೃತ್ತಿ ನಿಷ್ಠೆಗೆ ಸಾಕ್ಷಿಯಾದ ಜಕಣಾಚಾರಿಯವರು ಕನ್ನಡ ನಾಡಿನ ಆತ್ಮಗೌರವದ ಪ್ರತೀಕವಾಗಿ ಇಂದಿಗೂ ಜೀವಂತವಾಗಿದ್ದಾರೆ.ಅವರ ಶಿಲ್ಪದ ನೀತಿಗಳು ವಿಶ್ವದ ಜನರ ಮನಸ್ಸಿನಲ್ಲಿ ಉಳಿಯಬೇಕಾದರೆ ಅವರ ಪ್ರತಿಮೆ ನಿರ್ಮಾಣ ಮಾಡುವುದು ಪ್ರತಿಯೊಬ್ಬ ನಾಗರೀಕನ ಮತ್ತು ಜನಪ್ರತಿನಿದಿಗಳ ಜವಾಬ್ದಾರಿ ಮತ್ತು ಶಾಸಕರ ಜವಾಬ್ದಾರಿ.
ಜಕಣಾಚಾರಿಯವರು ಎಲ್ಲಿಂದಲೋ ಬಂದು ಹಲವಾರು ವರ್ಷಗಳ ಕಾಲ ಬೇಲೂರಿನಲ್ಲಿ ನೆಲಸಿ ಕರ್ನಾಟಕದ ಪ್ರಸಿದ್ದ ಐತಿಹಾಸಿಕ ದೇವಾಲಯಕ್ಕೆ ಜೀವ ತುಂಬಿ ಇಂದು ಪ್ರಪಂಚದ ಯುನೆಸ್ಕೋ ಪಟ್ಟಿಗೆ ಸೇರಿರುವುದು ಹೆಮ್ಮೆ ಎನಿಸುತ್ತದೆ.ಇಂತಹ ಅದ್ಬುತ ಮಹಾಶಿಲ್ಪಿಯ ಪ್ರತಿಮೆ ಮಾಡದಿರುವುದು ಮಾತ್ರ ದುರಂತವೇ ಸರಿ.
ಬೇಲೂರು ಅಂದಾಕ್ಷಣ ನೆನಪಾಗುವುದು ಚನ್ನಕೇಶವ ದೇವಾಲಯದ ಶಿಲ್ಪಕಲೆ.ಅದಕ್ಕೆ ಪ್ರಮುಖ ಸಾಕ್ಷಿಯೆ ಅಮರ ಶಿಲ್ಪಿ ಜಕಣಾಚಾರಿ.ಆದರೆ ಅವರ ಪ್ರತಿಮೆ ಮತ್ತು ದೇವಾಲಯಕ್ಕೆ ತೆರಳುವ ರಸ್ತೆಗೆ ಜಕಣಾಚಾರಿ ರಸ್ತೆ ಎಂಬ ನಾಮಕರಣ ಮಾಡುವಂತೆ ಸುಮಾರು ಮೂರು ದಶಕಗಳಿಂದಲೂ ವಿಶ್ವಕರ್ಮ ಸಮುದಾಯ ಅರ್ಜಿ ನೀಡುತ್ತಲೆ ಬಂದಿದ್ದಾರೆ ಆದರೆ ಯಾವ ಪ್ರಯೋಜನವೂ ಆಗಿಲ್ಲ.
ಪಟ್ಟಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ,ಕೆಂಪೇಗೌಡ ಹರ್ಡೀಕರ್,ರಂತಹ ದಾರ್ಶನಿಕರ ಪ್ರತಿಮೆ ನಿರ್ಮಾಣ ಮಾಡುವ ಜೊತೆಗೆ ಯಗಚಿ ಸೇತುವೆಗೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸೇತುವೆ ಎಂದು ನಾಮಕರಣ ಮಾಡಿದ್ದು ಬೇಲೂರಿನ ಹಿರಿಮೆಯನ್ನು ಹೆಚ್ಚಿಸಿದೆ.ಅದರೆ ಮಹಾನ್ ಶಿಲ್ಪಿ ಜಕಣಾಚಾರಿಯವರ ಪ್ರತಿಮೆ ನಿರ್ಮಾಣ ಮಾಡಲು ಮಾತ್ರ ಜನಪ್ರತಿನಿದಿಗಳಿಗೆ ತಾತ್ಸಾರವೇಕೆ ಎಂಬುದು ನಿಗೂಢವಾಗಿಯೆ ಉಳಿದಿದೆ.
ಕಳೆದ ಹತ್ತಾರು ವರ್ಷಗಳಿಂದಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರಿಗೂ ಮನವಿ ಸಲ್ಲಿಸಲಾಗಿದೆ.ಆದರೆ ಸ್ಥಳಿಯ ಶಾಸಕರುಗಳ ಭರವಸೆಗಳಲ್ಲಿಯೆ ಪ್ರತಿಮೆ ನಿರ್ಮಾಣದ ಕನಸು ಕನಸಾಗಿಯೆ ಉಳಿದಿದೆ.
ಪ್ರಪಂಚದಾದ್ಯಂತ ದಿನನಿತ್ಯ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ.ಅಂತಹ ಬೇಲೂರು ವಿದಾನಸಭಾ ಕ್ಷೇತ್ರದ ಪ್ರವಾಸಿಗರ ಮುಖ್ಯದ್ವಾರ ದೇವಾಲಯದ ರಸ್ತೆ ಮತ್ತು ಹೋಳೆಬೀದಿ ರಸ್ತೆಗೆ ಹೊಂದಿಕೊಂಡಿರುವ ಹರ್ಡೀಕರ್ ವೃತ್ತದಲ್ಲಿ ವಿಶ್ವಕರ್ಮ ಜನಾಂಗದ ನೆನಪು ಮತ್ತು ಶಿಲ್ಪಕಲೆಯ ಸಾಕ್ಷಿಯಾಗಿ ಅಮರ ಶಿಲ್ಪಿ ಯ ಪುತ್ಥಳಿಯನ್ನು ನಿರ್ಮಾಣ ಮಾಡುವ ಮೂಲಕ ಬೇಲೂರಿನ ಇತಿಹಾಸ ಸಾರುವ ಸಂದೇಶವನ್ನು ಸಂಭಂದಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳ ಕನಸಾಗಬೇಕು ಎಂಬುದು ವಿಶ್ವಕರ್ಮ ಜನಾಂಗದ ಮತ್ತು ವಿಶ್ವದ ಚನ್ನಕೇಶವನ ಭಕ್ತರ ಆಶಯವಾಗಿದೆ.
ಜಕಣಾಚಾರಿಯವರ ಶಿಲ್ಪಕಲೆ ಪ್ರಪಂಚದುದ್ದಕ್ಕೂ ಹಬ್ಬಿ ಬೇಲೂರಿನ ಗೌರವಕ್ಕೆ ಪಾತ್ರರಾದ ಜಕಣಾ ಚಾರಿಯವರ ಪುತ್ಥಳಿ ನಿರ್ಮಾಣಕ್ಕೆ ವಿಶ್ವಕರ್ಮ ಜನಾಂಗದ ಶಾಸಕರೇ ಆಗಬೇಕಾ..! ಮತ್ತು ಒಬ್ಬ ಶಿಲ್ಪಿಯ ಪುತ್ಥಳಿ ನಿರ್ಮಾಣಕ್ಕೆ 900 ವರ್ಷ ಬೇಕಾ…ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಕಳೆದ ಮೂರ್ನಾಲ್ಕು ದಶಕಗಳ ಹಿಂದಿನ ಶಾಸಕರಾಗಿದ್ದ ಹೆಚ್.ಕೆ.ಕುಮಾರಸ್ವಾಮಿಯವರಿಂದಲೂ…ಕೂಡ ಅರ್ಜಿಗಳನ್ನು ನೀಡುತ್ತಲೆ ಬಂದಿದ್ದಾರೆ.ಆದರೆ ಅರ್ಜಿಗಳು ಕಸದ ಬುಟ್ಟಿಗೆ ಸೀಮಿತವಾಗಿವೆ ಹೊರತು ಕಾರ್ಯರೂಪಕ್ಕೆ ಬರಲೇ ಇಲ್ಲ.
ಬೇಲೂರು ವಿದಾನ ಸಭಾ ಕ್ಷೇತ್ರಕ್ಕೆ ಆರಿಸಿ ಬರುವ ಜನಪ್ರತಿನಿದಿಗಳು ಮಾತ್ರ ಬುದ್ದ,ಬಸವ,ಅಂಬೇಡ್ಕರ್ ಹೆಸರಿನಲ್ಲಿ ಭಾಷಣ ಮಾಡುವ ಇವರಿಗೆ ಜಕಣಾಚಾರಿಯವರ ಪ್ರತಿಮೆ ಮಾಡುವ ಕನಿಷ್ಟ ಕಿಂಚಿತ್ತು ಆಸಕ್ತಿ ಇಲ್ಲವಾಯಿತಲ್ಲ ಎಂಬುದು ನಮ್ಮ ಬೇಲೂರಿನ ದುರಂತವೇ ಸರಿ.
ಯಾವುದೆ ಜಾತಿ,ಧರ್ಮ,ಕ್ಕೆ ಸೀಮಿತವಾಗದ ಶಾಸಕ ಎಂದು ಹೆಚ್.ಕೆ.ಸುರೇಶ್ ಹೇಳುವುದು ನಿಜವಾದರೆ ತಾವಾದರೂ ಗಮನಹರಿಸಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗ್ತಾರಾ..ಎಂಬುದನ್ನು ಕಾದು ನೋಡಬೇಕಿದೆ.
