Blog

ನಕಲಿ ದಾಖಲೆ – ಅಧಿಕಾರಿಗಳನ್ನು ಅಮಾನತು ಮಾಡಿ

ಅಧಿಕಾರಿಗಳ ಹಗರಣಗಳಿಗೆ ಕಡಿವಾಣ ಇಲ್ಲವೇ:ರೈತರಿಗೆ ಮುಕ್ತಿ ಇಲ್ಲವಾ.

ಆಲೂರು:ನಕಲಿ ದಾಖಲೆ ಸೃಷ್ಟಿಸಿ ಭೂ ಮಂಜೂರು ಮಾಡಿರುವ ಅಧಿಕಾರಿಗಳ ವಿರುದ್ಧ ರೈತ ಸಂಘಟನೆ ಹಾಗೂ ದಲಿತ ಸಂಘಟನೆಗಳಿಂದ ಕಾನೂನು ಕ್ರಮ ಕೈಗೊಂಡು ಅಕ್ರಮ ಅಧಿಕಾರಿಗಳನ್ನು ಅಮಾನತ್ತು ಮಾಡಿ ನೊಂದಿರುವ ದಲಿತ ಕುಟುಂಬಗಳಿಗೆ ನ್ಯಾಯ ಕೊಡಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಾಲೂಕಿನ ಕರ್ನಾಟಕ ಕಾರ್ಯ ನಿರ್ವಹಿತ ಪತ್ರಕರ್ತರ ಸಂಘ (ನೋಂ) ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷರಾದ ಬಸವರಾಜ್ ಅವರು ಒತ್ತಾಯ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಜಯಣ್ಣ ಹೈದೂರು ಮಾತನಾಡಿ ತಾಲೂಕಿನ ಕೆ ಹೊಸಕೋಟೆ ಹೋಬಳಿ ಕಾಡ್ಲೂರು ಗ್ರಾಮದ ಸರ್ವೆ ನಂಬರ್ 4 ರಲ್ಲಿ ಸುಮಾರು ಎಂಟು ದಲಿತ ಕುಟುಂಬಗಳು ಮನೆಯನ್ನು ಕಟ್ಟಿಕೊಂಡು ಎರಡು ಮೂರು ತಲೆಮಾರಿನಿಂದ ವಾಸಿಸಿಕೊಂಡು ಇಲ್ಲಿಯವರೆಗೆ ಜೀವನ ನಡೆಸಿಕೊಂಡು ಬರುತ್ತಿದ್ದಾರೆ, ಅಲ್ಲದೆ ಬಗರುಕ್ಕು ಫಾರಂ 52 ಯಲ್ಲಿ ಅರ್ಜಿ ಹಾಕಿಕೊಂಡು ಇನ್ನೇನು ಭೂ ಮಂಜೂರಾತಿ ಆಗುತ್ತದೆ ಎಂದು ಕಾಯುತ್ತಿದ್ದ ಸಂದರ್ಭದಲ್ಲಿ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ ಅಲ್ಲಿಯೇ ವರದಿಯನ್ನು ನೀಡಿ ಅಕ್ರಮವಾಗಿ ಅದೇ ಅದೇ ಗ್ರಾಮದ ವೀರಭದ್ರಪ್ಪ ಬಿನ್ ರುದ್ರಸ್ವಾಮಿ ಎಂಬುವರಿಗೆ ನಾಲ್ಕು ಎಕರೆ ಭೂಮಿಯನ್ನು ಮಂಜೂರು ಮಾಡಿ ದಲಿತರನ್ನ ಒಕ್ಕಲಿಬ್ಬಿಸುವ ಉನ್ನಾರ ನಡೆಸುತ್ತಿದ್ದಾರೆ,ಹಾಗಾಗಿ ಅಕ್ರಮವಾಗಿ ಮಂಜೂರು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅಮಾನತುಗೊಳಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಡ್ಲೂರು ಗ್ರಾಮಸ್ಥರಾದ ಕೆಂಚಯ್ಯ.ಜಗದೀಶ್.ಶಿವಪ್ಪ.ಕವನ ಉಪಸ್ಥಿತರಿದ್ದರು.

Related posts

ಹೆತ್ತೂರು ಶ್ರೀ ಕುಮಾರ ಲಿಂಗೇಶ್ವರ ಸ್ವಾಮಿ ಜಾತ್ರೆ

Bimba Prakashana

ಶಿಕ್ಷಕರ ಪ್ರಶಸ್ತಿ ಪ್ರಕಟ

Bimba Prakashana

ಅಬ್ಬನ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚಂದ್ರ ಶೆಟ್ಟಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More