Blog

ಜಾತಿ ನಿಂದನೆ – ಕೊಲೆ ಬೆದರಿಕೆ

ವರದಿ.
ನಾಗೇಶ್ ಎಂ ಎಚ್ ಮಾಗೇರಿ

ವನಗೂರು  ಗ್ರಾಮ ಪಂಚಾಯತಿ ಹರಾಜು ಪ್ರಕ್ರಿಯೆ ವಿಚಾರದಲ್ಲಿ ಪರಿಶಿಷ್ಟ ಜಾತಿ ವಿ ಎಂ ವಸಂತ ಕುಮಾರ್ ರವರಿಗೆ ಆಕಾಶ್ ಕನ್ವೆನ್ಷನ್ ಮಾಲಕ ಉಮೇಶ್ ಬಿ ಟಿ ರವರಿಂದ ಕೊಲೆ ಬೆದರಿಕೆ.


ಘಟನೆ ವಿವರ :
ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿ
ವನಗೂರು  ಗ್ರಾಮದಲ್ಲಿ ದಿನಾಂಕ.24.03.2026 ರಲ್ಲಿ
ಸಂತೆ ಶುಲ್ಕ, ಹಂದಿ ಮಾಂಸ , ಕೋಳಿಮಾಂಸ,
ಮೀನು, ಹೀಗೆ ಹರಾಜು ಪ್ರಕ್ರಿಯೆ ನಡೆದಿರುತ್ತದೆ ಇದರಲ್ಲಿ ಸುಮಾರು  ಹಲವಾರು ಜನ  ಹರಾಜು ಕೂಗಿರುತ್ತಾರೆ.
ಇದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ  ವಿ ಎಂ ವಸಂತ್ ಕುಮಾರ್ ರವರು  ಹರಾಜು ಪ್ರಕ್ರಿಯೆ ಯಲ್ಲಿ ಭಾಗವಹಿಸಿರುತ್ತಾರೆ.
ಉಳಿದ ಎಲ್ಲರೂ ಬೇರೆ ಜಾತಿಗೆ ಸೇರಿದವರಾಗಿರುತ್ತಾರೆ


ಇದರಲ್ಲಿ ಸಂತೆ ಶುಲ್ಕ ಮತ್ತು ಮೀನಿನ ಸಂಬಂಧ ಪಟ್ಟ ಹರಾಜನ್ನು ಬಿ. ಟಿ ಉಮೇಶ್ ರವರು ಕೂಗಿರುತ್ತಾರೆ.

ಬಿ ಟಿ ಉಮೇಶ್ ರವರು
ಎರಡು ವಾರ ಸಂತೆಯಲ್ಲಿ  ಮಾರಾಟ ದಾರರ ಹತ್ತಿರ ಒಂದು ಅಂಗಡಿಗೆ 150 ರೂ ಗಳಂತೆ ವಸೂಲಿ ಮಾಡುತ್ತಿದ್ದು ಕೊಡದಿದ್ದವರಿಗೆ ಬೈದು ವಸೂಲಿ ಮಾಡುವುದು  ಕಂಡು ಬಂದಿದ್ದು
ಇಲ್ಲಿನ ಕೆಲವು ಸುಮಾರು 40 ಜನ ಗ್ರಾಮಸ್ಥರು ಹರಾಜಿನ ವಿರುದ್ಧವಾಗಿ ಪಂಚಾಯತಿ ಅಧ್ಯಕ್ಷರು ಮತ್ತು ಪಿ ಡಿ ಓ ರವರಿಗೆ ಅರ್ಜಿ ನೀಡಿರುತ್ತಾರೆ

ಉದ್ದೇಶ ಪೂರ್ವಕವಾಗಿ ಬೇರೆ ಯಾರನ್ನು ಪ್ರಶ್ನೆ ಮಾಡದೇ
ಅದೇ ದಿನ  ಬಿ ಟಿ ಉಮೇಶ್ ರವರು ವಸಂತ ಕುಮಾರ್ ರವರ ಅಂಗಡಿ ಮುಂದೆ ಕಾರನ್ನು  ರಸ್ತೆಯ ಮದ್ಯ ಭಾಗದಲ್ಲಿ ಅಡ್ಡಲಾಗಿ ನಿಲ್ಲಿಸಿ ವಸಂತ ಕುಮಾರ್ ರವರಿಗೆ ಕೊಲೆ ಬೆದರಿಕೆ
ಹಾಕಿ ಜಾತಿಯನ್ನು ನಿಂದಿಸಿ ದೊಣ್ಣೆ ಇಂದ ಹೊಡೆಯಲು ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಉಮೇಶ್  ವಿರುದ್ಧವಾಗಿ ಯಶಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಸ್ಥಳಕ್ಕೆ
ಸಕಲೇಶಪುರ ಡಿ ವೈ ಎಸ್ ಪಿ ಮಾಲತೀಶ್
ಮತ್ತು ಯಶಳೂರು ಸಬ್ ಇನ್ಸ್ಪೆಕ್ಟರ್  ಸಲ್ಮಾನ್ ರವರು
ಸ್ಥಳ ಪರಿಶೀಲನೆ ನಡೆಸಿದ್ದಾರೆ.

Related posts

ಹುಟ್ಟುಹಬ್ಬದ ಶುಭಾಶಯಗಳು

Bimba Prakashana

ಕುಡಿಯುವ ನೀರಿನ ಸಮಸ್ಯೆ

Bimba Prakashana

ಮಹರ್ಷಿ ವಾಲ್ಮೀಕಿ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More