ವನಗೂರು ಎಸ್ಟೇಟ್ ಗೆ ಮಾಜಿ ಸಚಿವರಾದ ಎಚ್ ಕೆ ಕುಮಾರಸ್ವಾಮಿ
ಭೇಟಿ.
ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ ವನಗೂರು ಎಸ್ಟೇಟ್ ಗೆ ಮಾಜಿ ಸಚಿವರು ಶಾಸಕರು ಆದ
ಎಚ್. ಕೆ.ಕುಮಾರಸ್ವಾಮಿ ಯವರು ಭೇಟಿ ನೀಡಿದರು.
ಸಕಲೇಶಪುರ ಹೆತ್ತೂರು ಹೋಬಳಿ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಣಗೂರಿನಿಂದ ಸುಬ್ರಮಣ್ಯಕ್ಕೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ 22 ಪ್ರಯಾಣಿಕರಿದ್ದ ಮಿನಿ ಬಸ್ ಬಿಸಿಲೆ ಘಾಟ್ ರಸ್ತೆ ಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿ ಪಲ್ಟಿ ಆಗಿ ಸುಮಾರು ಇಪ್ಪತ್ತು ಜನರಿಗೆ ಗಾಯ ಆಗಿತ್ತು ನಾಲ್ಕು ಜನರಿಗೆ ಗಂಭೀರ ಗಾಯ ವಾಗಿತ್ತು
ಇದರಲ್ಲಿ ವನಗೂರು ಎಸ್ಟೇಟ್ ನ ಶಿವರಾಜ್ ಎಂಬುವರು ಮರಣ ಹೊಂದಿದ್ದರು
ಇವರ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿ ಅವರಿಗೆ ಬರಬೇಕಾದಂತಹ ಪರಿಹಾರವನ್ನ ಒದಗಿಸಿಕೊಡುವುದಾಗಿ ತಿಳಿಸಿದರು
ನಂತರ ಅದೇ ಗ್ರಾಮದಲ್ಲಿ ಹಲವಾರು ಜನರಿಗೆ ಗಾಯಗಳಾಗಿದ್ದು ಅವರುಗಳ ಮನೆಗೆ ಭೇಟಿ ಮಾಡಿ ಗಾಯಾಳುಗಳನ್ನ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಗೊದ್ದು ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಕೌಸಿಕ್, ನಿರ್ದೇಶಕರಾದ ವಿ, ಎಂ ವಸಂತ್ ಕುಮಾರ್,ವನಗೂರು ಗ್ರಾಮ ಪಂಚಾಯತಿ ಸದಸ್ಯರಾದ ಹೇಮಂತ್ ಕುಮಾರ್ (ಸುಧೀರ್)
ಮತ್ತು ಈ ಭಾಗದ ಎಲ್ಲಾ ಜೆಡಿಎಸ್ ಕಾರ್ಯಕರ್ತರು ಗ್ರಾಮಸ್ಥರು ಭಾಗವಹಿಸಿದ್ದರು.
previous post
