ಆಲೂರು: ಬಯಲು ಸೀಮೆಗೆ ಕುಡಿಯುವ ನೀರನ್ನ ಒದಗಿಸುವ ಮಹತ್ವಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಕಾಮಗಾರಿಯು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕರ ತೆರಿಗೆ ಹಣವು ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು
ಆಲೂರು ತಾಲೂಕಿನಲ್ಲಿ ಹಾದು ಹೋಗಿರುವ ಎತ್ತಿನಹೊಳೆ ಯೋಜನೆ ನಾಲೆ ಪ್ರದೇಶದಲ್ಲಿ ಚಾನಲ್ ತಡೆಗೋಡೆ ಕುಸಿದಿರುವ ಪ್ರದೇಶಗಳಿಗೆ ಭೇಟಿನೀಡಿ ಪರಿಶೀಲನೆ ನೆಡೆಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಬಯಲು ಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸುಮಾರು 68 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ ಆದರೆ ಆಲೂರು ತಾಲೂಕಿನ ಕೆಲವು ಆಯ್ದ ಗ್ರಾಮಗಳಲ್ಲಿ ಈ ಯೋಜನೆಯ ಕಾಲುವೆಗಳಲ್ಲಿ ನೀರು ಹರಿಯುವ ಮುನ್ನವೇ ನಾಲೆಗಳು ಅಲ್ಲಲ್ಲಿ ಕುಸಿದು ಹೋಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಂದಂತಿದೆ ಈ ಪ್ರದೇಶಗಳಿಗೆ ಮಾನ್ಯ ಜಲ ಸಂಪನ್ಮೂಲ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಕಾಮಗಾರಿಯಲ್ಲಿ ಆಗಿರುವ ಬೇಜವಾಬ್ದಾರಿತನಕ್ಕೆ ಹೊಣೆಗಾರರಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು
ಎತ್ತಿನಹೊಳೆ ಯೋಜನೆಯು ಆರ್ಥಿಕವಾಗಿ ಅತಿ ದೊಡ್ಡ ಮೊತ್ತದ ಯೋಜನೆಯಾಗಿದೆ ಆರಂಭಿಕ ಅಂದಾಜು ವೆಚ್ಚ ಸುಮಾರು 13 ಸಾವಿರ ಕೋಟಿ (2012-14ರ ಅವಧಿಯಲ್ಲಿ) ಪರಿಷ್ಕೃತ ಅಂದಾಜು ವೆಚ್ಚ: ಪ್ರಸ್ತುತ ಈ ಯೋಜನೆಯ ಅಂದಾಜು ವೆಚ್ಚವು 23 ಸಾವಿರ ಕೋಟಿಗೂ ಅಧಿಕವಾಗಿದೆ ಖರ್ಚಾಗಿರುವ ಮೊತ್ತ: ಇತ್ತೀಚಿನ ವರದಿಗಳ ಪ್ರಕಾರ, ಸರ್ಕಾರವು ಈವರೆಗೆ ಸುಮಾರು 15 ಸಾವಿರ ಕೋಟಿಯಿಂದ 16 ಸಾವಿರ ಕೋಟಿವರೆಗಿನ ಹಣವನ್ನು ಈ ಯೋಜನೆಗಾಗಿ ಖರ್ಚು ಮಾಡಿದೆ.ಆದರೂ ಎತ್ತಿನಹೊಳೆ ಯೋಜನೆಯ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು ಕಾಮಗಾರಿಯಲ್ಲಿ ಅಗತ್ಯವಿರುವ ಕಬ್ಬಿಣ ಸೇರಿದಂತೆ ಮೂಲಭೂತ ವಸ್ತುಗಳನ್ನು ಬಳಕೆ ಮಾಡದೆ, ಅಸಡ್ಡೆ, ಮತ್ತು ಬೇಜವಾಬ್ದಾರಿ ಕಾಮಗಾರಿ ನಡೆಸಲಾಗಿದೆ ಎಂದು ಆರೋಪಿಸಿದ ಅವರು, ಯೋಜನೆಯ ಶೇ.70ರಷ್ಟು ಭಾಗದಲ್ಲಿನ ತಡೆಗೋಡೆಗಳು ಸಂಪೂರ್ಣವಾಗಿ ಕುಸಿದು ಬಿದ್ದಿರುವುದು ಹಾಗೂ ಒಡೆದು ಹೋಗಿರುವುದು ಕಾಮಗಾರಿಯ ಗುಣಮಟ್ಟವನ್ನು ಬಯಲು ಮಾಡುತ್ತಿದೆ ಇದರ ಹೊಣೆಯನ್ನು ಹೊರುವುದು ಯಾರು ಎಂದು ಪ್ರಶ್ನಿಸಿದರು
ಮಾಜಿ ಸಚಿವ ಹೆಚ್.ಕೆ ಕುಮಾರಸ್ವಾಮಿ ಮಾತನಾಡಿ ಈ ಯೋಜನೆಗಾಗಿ ನಮ್ಮ ಆಲೂರು ತಾಲೂಕಿನ ರೈತರು ತಮ್ಮ ಜಮೀನನ್ನು ತ್ಯಾಗ ಮಾಡಿದ್ದಾರೆ ತಾಲೂಕಿನಾದ್ಯಂತ ಸಾವಿರಾರು ಎಕರೆ ರೈತರ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಂಡಿರುವ ಸರ್ಕಾರವು ಅವರಿಗೆ ಪರಿಹಾರವನ್ನು ನೀಡಿದೆ ಆದರೆ ಒಂದು ಮಹತ್ವಕಾಂಕ್ಷೆಯನ್ನ ಹೊಂದಿರುವ ಯೋಜನೆಯು ಸಫಲವಾಗಬೇಕಾದರೆ ಕಾಮಗಾರಿಯು ಗುಣಮಟ್ಟದಲ್ಲಿ ನಡೆಯಬೇಕು ಕಾರಣ ಈ ಯೋಜನೆ ಕೇವಲ 1-2ದಿನದ ಯೋಜನೆಯಾಗಿರದೆ ಬಯಲುಸೀಮೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ನಾಲೆಗಳಲ್ಲಿ ಪ್ರತಿ ವರ್ಷ ನೀರು ಹರಿಯುವುದರಿಂದ ನಾಲೆಗಳು ಗುಣಮಟ್ಟದಲ್ಲಿ ನಿರ್ಮಾಣವಾಗಬೇಕು ಈಗಾಗಲೇ ನೀರು ಹರಿಯುವ ಮುನ್ನವೇ ನಾಲೆಗಳು ಕುಸಿಯುತ್ತಿರುವುದನ್ನು ನೋಡಿದರೆ ಈ ಯೋಜನೆ ಎಲ್ಲೋ ಒಂದು ಕಡೆ ಬಯಲು ಸೀಮೆಯ ಜನರ ಕುಡಿಯುವ ನೀರಿನ ಕನಸನ್ನು ಭಗ್ನ ಗೊಳಿಸುತ್ತದೆಯೋ ಎಂಬ ಅನುಮಾನ ಮೂಡಿದೆ ಈ ಸಂದರ್ಭದಲ್ಲಿ ಹೆಚ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್ ಮಂಜೇಗೌಡ, ಹಾಸನ ಕೆಎಂಎಫ್ ನಿರ್ದೇಶಕ ಪಿ.ಎಲ್ ನಿಂಗರಾಜು, ಹಾಸನ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಸ್.ಎನ್ ಪ್ರಕಾಶ್,ತಾ.ಪಂ ಮಾಜಿ ಸದಸ್ಯ ಸಿ.ವಿ ಲಿಂಗರಾಜು,ಮುಖಂಡರಾದ ಓಂಕಾರ ಮೂರ್ತಿ, ಶಾಂತರಾಜು,ನಿಂಗರಾಜು,ರಾಜಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು
ಹೆಚ್. ಕೆ ಕುಮಾರಸ್ವಾಮಿ ಮಾಜಿ ಸಚಿವರು: ಈ ಕಳಪೆ ಕಾಮಗಾರಿಗೆ ಜವಾಬ್ದಾರರು ಇಲಾಖೆಯ ಅಧಿಕಾರಿಗಳೋ ಮತ್ತು ಗುತ್ತಿಗೆದಾರರೊ ಎಂಬುದು ಬಹಿರಂಗವಾಗಬೇಕು ಹಾಗೂ ಈ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಒಂದು ಪರಿಶೀಲಾನ ಸಮಿತಿಯನ್ನ ನೇಮಕ ಮಾಡಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು
ಡಾ. ಸೂರಜ್ ರೇವಣ್ಣ ವಿಧಾನ ಪರಿಷತ್ ಸದಸ್ಯರು:
ಈ ಪ್ರದೇಶಗಳಿಗೆ ಮಾನ್ಯ ಜಲ ಸಂಪನ್ಮೂಲ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲನೆ ನೆಡೆಸಿ ಕಾಮಗಾರಿಯಲ್ಲಿ ಆಗಿರುವ ಕಳಪೆ ಮತ್ತು ಬೇಜವಾಬ್ದಾರಿತನಕ್ಕೆ ಹೊಣೆಗಾರರಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
previous post
