Blog

ಬೇಲೂರುನಲ್ಲಿ ಜಕಣಾಚಾರಿ ಪುತ್ತಳಿ ಪ್ರತಿಷ್ಠೆ –   ಭರವಸೆ

ಬೇಲೂರಿನಲ್ಲಿ ಜಕಣಾಚಾರಿ ಪುತ್ಥಳಿ ಪ್ರತಿಷ್ಠಾಪನೆ: ಶಾಸಕ ಹೆಚ್.ಕೆ.ಸುರೇಶ್ ಭರವಸೆ

ಬೇಲೂರು.
ಪಟ್ಟಣದ ಡಾ.ನಾ.ಸು.ಹರ್ಡೀಕರ್ ವೃತ್ತದ ಸಮೀಪ ಪೆಟ್ಟಿಗೆ ಅಂಗಡಿಗಳ ತೆರವುಗೊಳಿಸಿದ ಸ್ಥಳದಲ್ಲಿ ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇಗುಲದ ಅದ್ಬುತ ಶಿಲ್ಪಿ ಜಕಣಾಚಾರಿ ಅವರ ಪುತ್ಥಳಿ ಪ್ರತಿಷ್ಠಾಪನೆಗೆ ವಿಶ್ವಕರ್ಮ ಸಮಾಜದ ನೇತೃತ್ವದಲ್ಲಿ ಶಾಸಕ ಹೆಚ್.ಕೆ.ಸುರೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಶಾಸಕರ ನಿವಾಸಕ್ಕೆ ತೆರಳಿದ ವಿಶ್ವಕರ್ಮ ಸಮಾಜದ ಮುಕಂಡರುಗಳು ಹಾಗೂ ವಿವಿಧ ಸಂಘ ಸಂಸ್ಥೆ ಮುಖಂಡರು ಮನವಿ ಪತ್ರ ಸಲ್ಲಿಸಿ ಪುತ್ಥಳಿ ಸ್ಥಾಪನೆ ಮಾಡುವಂತೆ ಶಾಸಕರಿಗೆ ಮನವಿಪತ್ರ ನೀಡಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಶಾಸಕ ಹೆಚ್.ಕೆ.ಸುರೇಶ್, ಪುತ್ಥಳಿ ಪ್ರತಿಷ್ಠಾಪನೆಗೆ ವಿಶ್ವಕರ್ಮ ಸಮಾಜದವರು ಮುಂದೆ ಬಂದಿರುವುದು ಸಂತೋಷದ ವಿಷಯ. ನಾನು ಶಾಸಕನಾದ ನಂತರ ಪುತ್ಥಳಿ ಬಗ್ಗೆ ಪ್ರಸ್ಥಾಪವಾಗಿರುವುದು ಇದೆ ಮೊದಲು. ವಿಶ್ವಕರ್ಮ ಸಮಾಜದ ನೇತೃತ್ವದಲ್ಲಿ ಸ್ಥಳೀಯವಾಗಿ 26 ಸಂಘ ಸಂಸ್ಥೆ ಹಾಗೂ ಸಮುದಾಯದ ಸಂಘಗಳನ್ನು ಜಾತಿ, ಧರ್ಮ ಮೀರಿ ಪುತ್ಥಳಿ ಪ್ರತಿಷ್ಠಾಪನೆಗೆ ಮನವಿ ಪತ್ರ ನೀಡಿರುವುದು ಈ ವಿಷಯ ಎಷ್ಟು ಆಳವಾಗಿ ಬೇರೂರಿದೆ ಎನ್ನುವುದನ್ನು ತೋರಿಸುತ್ತದೆ ಎಂದರು.
ಹರ್ಡೀಕರ್ ವೃತ್ತದ ಸಮೀಪ ಇದ್ದ ಪೆಟ್ಟಿಗೆ ಅಂಗಡಿಗಳ ತೆರವುಗೊಳಿಸಲಾಗಿದ್ದು ಆ ಸ್ಥಳದ ಮಾಹಿತಿ ಪಡೆದು ಹಾಗೂ ಹೊಳೆಬೀದಿ ವಿಸ್ತರಣೆ ಎಷ್ಟರ ಮಟ್ಟಿಗೆ ಆಗುವುದೆಂಬುದನ್ನು ಗಣನೆಗೆ ತೆಗೆದುಕೊಂಡು ತಾಂತ್ರಿಕವಾಗಿ ಅಡ್ಡಿಯಾಗದಂತೆ, ಪುರಸಭೆ ಆಡಳಿತದ, ಅಧಿಕಾರಿಗಳ ಸಹಕಾರದೊಂದಿಗೆ ಸ್ವಲ್ಪ ತಡವಾದರೂ ಶಾಶ್ವತವಾಗಿ ಪುತ್ಥಳಿ ಇರುವಂತೆ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಪುತ್ಥಳಿ ಪ್ರತಿಷ್ಠಾಪನೆ ವಿಚಾರದಲ್ಲಿ ತನು ಮನ ಧನ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಪುತ್ಥಳಿ ಪ್ರತಿಷ್ಠಾಪನೆ ಮಾಡಿಕೊಡುವಂತೆ  ವಿರಾಟ್ ವಿಶ್ವಕರ್ಮ ವೇದಿಕೆ ಅಧ್ಯಕ್ಷ ಹಾಗೂ ಪತ್ರಕರ್ತ ಯಮಸಂದಿ ಸೋಮಶೇಖರ್ ವಿನಂತಿಸಿದರು.
ಪುತ್ಥಳಿ ಪ್ರತಿಷ್ಠಾಪನೆ ಕುರಿತು ಕೆಲವೊಂದು ಮಾಹಿತಿಯನ್ನು ಕರವೇ ಅಧ್ಯಕ್ಷ ಚಂದ್ರಶೇಖರ್, ಖಾದರ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಾ.ನ.ಮಂಜೇಗೌಡ, ಮಾಜಿ ಅಧ್ಯಕ್ಷ ಅನಂತರಾಜೇಅರಸು, ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ರಾಜೇಗೌಡ, ವೀರಾಂಜನೇಯಸ್ವಾಮಿ ಟ್ರಸ್ಟ್ ಅಧ್ಯಕ್ಷ ಬಿ.ಕೆ.ಮೋಹನಕಮಾರ್, ಡಾ.ರಾಜ್ ಸಂಘದ ಅಧ್ಯಕ್ಷ ತೀರ್ಥಂಕರ್, ಛಾಯಾಗ್ರಾಹಕ ಸುರೇಶ್, ಅ,ಭಿ ಯೋಗಾಚಾರ್, ಯಮಸಂಧಿ ಪಾಪಣ್ಣ, ಗೈಡ್ ಸಂಘದ ಅಧ್ಯಕ್ಷ ಮಿಮಿಕ್ರಿರಾಮು ಮಾಹಿತಿ ನೀಡಿದರು.
ಈ ವೇಳೆ ಶಾಸಕರನ್ನು ವಿಶ್ವಕರ್ಮ ಸಮಾಜದಿಂದ ಗೌರವಿಸಲಾಯಿತು. ವಿಶ್ವಕರ್ಮ ಸಮಾಜದ ಗೌರವ ಅಧ್ಯಕ್ಷ  ಬೇಂದ್ರೆ ಆಚಾರ್ ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಮಂಜುನಾಥಾಚಾರ್ ಪ್ರಮುಖರಾದ ಅರೇಹಳ್ಳಿಯ ಸೋಮಶೇಖರ್, ಹನಿಕೆ ಮಲ್ಲಿಕಾರ್ಜುನ್, ಸೂರಾಪುರ ರವಿ, ಬಂಟೇನಹಳ್ಳಿ ಮಹೇಶ್, ಬಿಕ್ಕೋಡು ಮಂಜು, ಜನಾರ್ಧನ್, ಜಗದೀಶ್ ಧರ್ಮೇಂದ್ರ,ಯೋಗೇಶ್,ಧರ್ಶನ್,ಕಲ್ಲೇಶ ವಿಜಯ್,ಹಾಗೂ  ವಿಶ್ವಕರ್ಮ ಸಮಾಜದ ಮುಖಂಡರು ಭಾಗವಹಿಸಿದರು.

Related posts

ನಾಡ ಪ್ರಭು ಕೆಂಪೇಗೌಡ ಯುವ ವೇದಿಕೆಗೆ ಅರುಣ್ ಗೌಡ ಮಾಧ್ಯಮ ಪ್ರತಿನಿಧಿ

Bimba Prakashana

ಹಳೇ ಬೀಡಿನಲ್ಲಿ ಪಲ್ಸ್ ಪೋಲಿಯೋ

Bimba Prakashana

ಆಲೂರುನಲ್ಲಿ ಪುನೀತ್ ಕೆರೆ ಹಳ್ಳಿ ಬಂಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More