Blog

ಆಲೂರುನಲ್ಲಿ ಪುನೀತ್ ಕೆರೆ ಹಳ್ಳಿ ಬಂಧನ

ಆಲೂರು : ಮುಸ್ಲಿಂ ಧರ್ಮಗುರುಗಳಿಗೆ ಅವಮಾನ
ಆರೋಪದ ಮೇಲೆ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ರವರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಶುಕ್ರವಾರ ಬೆಳಿಗ್ಗೆ ಆಲೂರು ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಬಂಧಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಮುಸ್ಲಿಂ ಧರ್ಮಗುರುಗಳಿಗೆ ಅವಮಾನ ಮಾಡಿದ್ದಾರೆ ಎಂದು ಅಬ್ದುಲ್ ರಜಾಕ್ ಎಂಬವರು ಪುನೀತ್ ಕೆರೆಹಳ್ಳಿ ಅವರ ಮೇಲೆ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ, ಆಲೂರು ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿರುವ ಪುನೀತ್ ರವರ ವಾಸದ ಮೇಲೆ ಪೊಲೀಸರು ದಾಳಿ ಮಾಡಿ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಬಂಧನದ ವೇಳೆ ಸರ್ಕಾರದ ವಿರುದ್ಧ ಅವರು ಕಿಡಿಕಾರಿ ಮಾತನಾಡಿದ ಪುನೀತ್ ಅವರು ನಾನು ಈಗಾಗಲೇ ಅಬ್ದುಲ್ ರಜಾಕ್ ರವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದೆ ಆದರೆ ಪೊಲೀಸ್ ಅವನನ್ನು ಬಂಧಿಸದೆ ನನ್ನನ್ನು ಬಂಧಿಸುತ್ತಿರುವುದು ಯಾವ ನ್ಯಾಯ ಸರ್ಕಾರ ಮುಸ್ಲಿಮರ ಪರವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಸತ್ಯದ ವಿರುದ್ಧ ಹಾಗೂ ಗೋವುಗಳ ರಕ್ಷಣೆಗೆ ಪಣತೊಟ್ಟು ನಿಂತಿರುವ ನನ್ನನ್ನು ಬಂದಿಸಲೇಬೇಕು ಎಂಬುದು ಇವರ ನಿರ್ಧಾರವಾಗಿದೆ ಇದಕ್ಕೆಲ್ಲ ನಾನು ಜಗ್ಗುವುದಿಲ್ಲ ಬಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುನೀತ್ ಕೆರಳ್ಳಿ ರವರ ಬಂಧನದ ವೇಳೆ ಅವರ ತಾಯಿ ಶಿವಮ ಕಣ್ಣೀರಿಟ್ಟು ಮಗನನ್ನು ಬಂಧಿಸ ಬೇಡಿ ಎಂದು ಪೊಲೀಸರನ್ನು ಅಂಗಲಾಚಿ ಬೇಡಿಕೊಂಡರು.

Related posts

ಕ್ಷೇತ್ರ ಶಿಕ್ಷಣ ಅಧಿಕಾರಿ ಪುಷ್ಪರಿಗೆ ಸನ್ಮಾನ

Bimba Prakashana

ಹೆಚ್ ಎನ್ ಅಣ್ಣಯ್ಯರಿಗೆ ಡಾ. ಬಿ ಆರ್ ಅಂಬೇಡ್ಕರ್ ಪ್ರಶಸ್ತಿ

Bimba Prakashana

ಬೀದಿ ನಾಯಿಗಳಿಗೆ ಬಲಿಯಾದ ಜಿಂಕೆ ಮರಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More