Blog

ಆಲೂರು ಯುವಕ ಕರಡಿ ಬೆಟ್ಟ ರಸ್ತೆಯಲ್ಲಿ ಮೃತ್ಯು


-ಆಲೂರು ತಾಲೂಕು, ಕೆ ಹೊಸಕೋಟೆ ಹೋಬಳಿಗೆ ಸೇರಿರುವ ಹೊಸಳ್ಳಿ ಗ್ರಾಮದ ನಾಗರಾಜ್ ಅವರ ಮಗ ದೀಕ್ಷಿತ್ ಕರಡಿಬೆಟ್ಟ ರಸ್ತೆ ಯಲ್ಲಿ ಬೈಕ್ ಅಪಘಾತದಿಂದ ಸಾವಿಗೀಡಾಗಿದ್ದಾನೆ.


ರಾತ್ರಿ ಪ್ರಯಾಣ ಮಾಡುವಾಗ ಮಳೆ ಮತ್ತು ಗಾಳಿಯ ರಭಸಕ್ಕೆ ಮರ ರಸ್ತೆಗೆ ಬಿದ್ದರುತ್ತದೆ, ಈ ಬಿದ್ದಿರುವ ಮರವನ್ನು ಗಮನಿಸದ ಯುವಕ ಬೈಕ್ನಲ್ಲಿ ಮರಕ್ಕೆ ಗುದ್ದಿ ರಸ್ತೆಯಲ್ಲಿ ಬಿದ್ದಿರುತ್ತಾನೆ, ರಸ್ತೆಗೆ ಬಿದ್ದ ಪರಿಣಾಮ ತಲೆಗೆ ತೀವ್ರವಾದ ಗಾಯವಾಗಿದ್ದು ರಾತ್ರಿ 11:30 ರಿಂದ ಬೆಳಿಗ್ಗೆ 6 ಘಂಟೆಯವರೆಗೂ ರಕ್ತದ ಮಡುವಲ್ಲಿ ನರಳಾಡಿ ಪ್ರಾಣಬಿಟ್ಟಿರುತ್ತಾನೆ,

• ಕಳೆದ ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಯುವಕ ಪತ್ನಿ ಯನ್ನು ತವರುಮನೆಗೆ ಬಿಟ್ಟು ರಾತ್ರಿ 11:30 ರ ಸಮಯ ಕರಡಿಬೆಟ್ಟ ರಸ್ತೆಯಲ್ಲಿ ತೆರಳುವಾಗ ಈ ಘಟನೆ ನೆಡೆದಿದೆ, ಯುವಕನಿಗೆ 22 ವರ್ಷ ವಯಸ್ಸಾಗಿದ್ದು ಅಪ್ಪ ಅಮ್ಮ ಮತ್ತು ತನ್ನ ಪತ್ನಿ ಯನ್ನು ಅಗಲಿದ್ದಾನೆ.


• ⁠ರಾತ್ರಿ ಸಮಯದಲ್ಲಿ ಕರಡಿಬೆಟ್ಟ ರಸ್ತೆಯಲ್ಲಿ ಯಾರೊಬ್ಬರು ಪ್ರಯಾಣ ಮಾಡದಿರುವುದು ಕೂಡಾ ಈ ಸಾವಿಗೆ ಕಾರಣವಾಗಿದ್ದು ಯಾರಾದರು ನೋಡಿ ಕೂಡಲೆ ಆಸ್ಪತ್ರೆಗೆ ಕರೆದೊಯ್ದಿದ್ದರೆ ಜೀವವನ್ನು ಉಳಿಸಬಹುದಿತ್ತು, ಹೆಚ್ಚಿನ ಮಳೆ ಮತ್ತು ಗಾಳಿಯ ಮಡುವಲ್ಲಿ ನರಳಿ ಪ್ರಾಣಬಿಟ್ಟ ಯುವಕನ ಕುಟುಂಬ ದುಃಖ ದಿಂದ ಮುಳುಗಿದೆ .


• ⁠ಬೆಳಗಿನ ಜಾವ ಕುಡಿದಲೇ ಗ್ರಾಮದ ಸಂದೇಶ್ ರವರು ಸುಮಾರು 6 ಗಂಟೇ ಯ ಸಮಯದಲ್ಲಿ ತೋಟದಕಡೆ ಹೋಗುವಾಗ ಬಿದ್ದಿರುವುದನ್ನು ಗಮನಿಸಿ ಇನ್ನು ಬದುಕಿರಬಹುದು ಎಂಬ ನಂಬಿಕೆಯಿಂದ ಕೊಡಲೆ ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಸೇರಿಸುವ ನಿಟ್ಟಿನಲ್ಲಿ ಶೆಟ್ಟಿಹಳ್ಳಿವರೆಗೂ ಕರೆದುಕೊಂಡು ಹೋಗಿದ್ದಾರೆ ಅಷ್ಟರಲ್ಲಿ ಅಲ್ಲಿಗೆ ಬಂದಂತಹ ಆಬ್ಯುಲೆನ್ಸ್ ಗೆ ಯುವಕನನ್ನು ಕಳುಹಿಸಿಕೊಟ್ಟಿದ್ದು ಯುವಕ ಮಾರ್ಗ ಮದ್ಯೆ ಮೃತಪಟ್ಟಿರುತ್ತಾನೆ ಎಂದು ಆoಬ್ಯುಲೆನ್ಸ್ ರವರು ತಿಳಿಸಿದ್ದಾರೆ

Related posts

ಸಕಲೇಶಪುರ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

Bimba Prakashana

ಅಪೂರ್ಣ ಕಾಮಗಾರಿ ಉದ್ಘಾಟನೆ

Bimba Prakashana

ಆಂಧ್ರ ಪ್ರದೇಶದಿಂದ ಗೋ ಸಾಗಾಣಿಕೆ – ಮಾರನ ಹಳ್ಳಿ ಬಳಿ ಪೊಲೀಸ್ ವಶಕ್ಕೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More