Blog

ಟಿ ಎ ಪಿ ಸಿ ಎಂ ಮಹಾಸಭೆ

ವರದಿ ರಾಣಿ ಪ್ರಸನ್ನ

ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ  ಮಾರಾಟ ಸಹಕಾರ ಸಂಘ ಸಕಲೇಶಪುರ  ಇವರ ವತಿಯಿಂದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ  ದಿನಾಂಕ 21/9/2024 ರ ಶನಿವಾರ  ಬೆಳಗ್ಗೆ 11.00ಘಂಟೆಗೆ *ರೈತ ಭವನ* ಎ ಪಿ ಎಂ ಸಿ ಆವರಣ  ಇಲ್ಲಿ ನೆರವೇರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು ಪಿ ಶಶಿಕುಮಾರ್ , ಕಿರುವಾಲೆ  ಇವರ ಉಪಸ್ಥಿತಿಯಲ್ಲಿ  ಸರ್ವ ಸದಸ್ಯರು ಹಾಗು ಅಧ್ಯಕ್ಷರಿಂದ  ಜ್ಯೋತಿ  ಬೆಳಗುವ ಮೂಲಕ  ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಉದ್ಘಾಟನೆ ನಂತರ  ರೈತ ಗೀತೆ ಹಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಯಿತು. ಸಂಘದ ವಾರ್ಷಿಕ ಆಡಳಿತ ವರದಿಯನ್ನು ಕಾರ್ಯದರ್ಶಿ ಲೋಕೇಶ್ ಅವರ ಮೂಲಕ ಓದಿ ಅಂಗೀಕರಿಸಲಾಯಿತು.  
2023 -24 ನೇ ಸಾಲಿನ ಅಂದಾಜು ಬಡ್ಜೆಟ್  ಹಾಗುಬ್ಲೆಕ್ಕ ಶೋಧಕರನ್ನು ಆಯ್ಕೆ ಮಾಡಿಕೊಳ್ಳುವ ಕುರಿತು, ಲಾಭಾಂಶ ವಿಲೇವಾರಿ,  ರೈತ ಭವನದ ಊಟದ ಹಾಲ್ ನಿರ್ಮಾಣ ಮಾಡುವ ಕುರಿತು  ಚರ್ಚಿಸಲಾಯಿತು.

ಅಧ್ಯಕ್ಷರು ಶಶಿಕುಮಾರ್ ಕಿರುವಾಲೆ ಇವರು ಮಾತನಾಡಿ  ಸಹಾಯ ಹಸ್ತ  ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಾ ತಮ್ಮ ಮಾತುಗಳನ್ನಾಡಿದರು , ಎಷ್ಟು ಲಾಭವನ್ನು ಪಡೆದಿದ್ದೇವೋ ಅಷ್ಟೇ ಹಣವನ್ನು ರೈತ ಭವನಕ್ಕೆ ಸದ್ಬಳಕೆ ಮಾಡಿಕೊಂಡಿದ್ದೇವೆ ಎಲ್ಲಾ ಸದಸ್ಯರುಗಳ ಸಲಹೆಯನ್ನು ತೆಗೆದುಕೊಳ್ಳುತ್ತೇವೆ ಹಾಗೆಯೇ ಪಾಲಿಸುತ್ತೇವೆ ಎಂದರು

ಹಲವು ಠೇವಣಿದಾರರಿಗೆ , ಹಾಗು ರೈತ ಭವನಕ್ಕೆ ಸಹಾಯ ಹಸ್ತ ನೀಡಿದ ಹಲವರಿಗೆ ಗೌರವ ದಾನಿಗಳಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರುಗಳು ಶ್ರೀ ಯು.ಪಿ. ಶಶಿಕುಮಾರ್ ಕಿರುವಾಲೆ, ಹೆಚ್.ಜೆ. ಉಮೇಶ್ ಹೆಗ್ಗದ್ದೆ , ಜೆ.ಡಿ. ಪುಟ್ಟಸ್ವಾಮಿಗೌಡ ಜಾತಳ್ಳಿ ,
ಕೆ.ಕೆ. ರಾಮಚಂದ್ರ ಕರಗೂರು, ಐ.ಡಿ. ಚನ್ನಮಲ್ಲಿಕಾರ್ಜುನ, ಐಗೂರು, ಜೆ.ಎನ್. ಚಂದ್ರಶೇಖರ್ ಜಂಬರಡಿ,
ಕೆ.ಬಿ. ಬಸವರಾಜು ಕಿರ್ಕಹಳ್ಳಿ,
ಎಸ್.ಕೆ. ಸೂರ್ಯ, ಸಕಲೇಶಪುರ,  ಎ.ಆರ್. ರವಿಕುಮಾರ್ ಅಗನಿ, ಗೀತಾ ಮಲ್ಲಿಕಾರ್ಜುನ ಉದೇವಾರ, ಚೈತ್ರ ನವೀನ್ಹಸಿಡೆ , ಹರೀಶ್ ನಾಯಕ
ಲಕ್ಕುಂದ ,ಆನಂದ ಕಿರುವಾಲೆ, ಕೆ.ಡಿ. ಮಂಜುನಾಥ್ ಶುಕ್ರವಾರಸಂತೆ . ಸಹಕಾರ ಸಂಘಗಳ ಸಹಾಯಕ ನಿಬಂಧಕರು , ಸಕಲೇಶಪುರ  , ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related posts

ಇಂದು ಕೊನೆಯ ದಿನ

Bimba Prakashana

ಹಿಂದೂ ಜಾಗರಣ ವೇದಿಕೆಯಿಂದ ಸಕಲೇಶಪುರದಲ್ಲಿ ಪ್ರತಿಭಟನೆ

Bimba Prakashana

ದೇಶದ ವ್ಯವಸ್ಥೆಯನ್ನು ಬಲ ಪಡಿಸಲು ಪತ್ರಿಕೆಗಳ ಪಾತ್ರ ಮಹತ್ತರವಾದುದು – ಶಾಸಕ ಶಿವಲಿಂಗೆ ಗೌಡರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More