Blog

ಕ್ಯಾಮನ ಹಳ್ಳಿ ಗ್ರಾಮ ಪಂಚಾಯತ್ ಗ್ರಾಮ ಸಭೆ

ವರದಿ ರಾಣಿ ಪ್ರಸನ್ನ

ಸಕಲೇಶಪುರದ ಹಾನುಬಾಳು ಹೋಬಳಿಯ  ಕ್ಯಾಮನಹಳ್ಳಿ ಗ್ರಾಮದಲ್ಲಿ ಇಂದು  ಗ್ರಾಮ ಸಭೆ.

ದಿನಾಂಕ 30/ 9/ 2024 ರ ಸೋಮವಾರ 24-25 ನೇ ಸಾಲಿನ ಮೊದಲನೇ ಹಂತದ ಗ್ರಾಮ ಸಭೆ.

ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿಯ  ಅಧ್ಯಕ್ಷರಾದ ಸಚಿನ್ ರವರ ಅಧ್ಯಕ್ಷತೆಯಲ್ಲಿ ಕ್ಯಾಮನಹಳ್ಳಿ ಗ್ರಾಮ ಪಂಚಾಯತಿಯನ್ನು ನಡೆಸಲಾಯಿತು.  

ಈ ಸಭೆಯ ನೋಡಲ್ ಅಧಿಕಾರಿಯಾಗಿ ಸಾಮಾಜಿಕ ಅರಣ್ಯ ಇಲಾಖೆ  ಅಧಿಕಾರಿಗಳು  ವಿಜಯ್ ಕುಮಾರ್  ಅವರು ವಹಿಸಿದ್ದರು.

ಸೇಸ್ಕಾಂ  ಅವರ ನಿರ್ಲಕ್ಷ್ಯತೆಗೆ ಜನರು ಹಲವಾರು ದೂರುಗಳನ್ನು ಗ್ರಾಮ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಸಭೆಯಲ್ಲಿ  ಬೀದಿ  ದೀಪಗಳು ಇಲ್ಲದಿರುವುದು,  ಅಭಿವೃದ್ದಿ ಕಾರ್ಯಗಳು ಕುಂಠಿತಗೊಂಡಿರುವುದರ ಕುರಿತು , ರಸ್ತೆ ದುರಸ್ತಿ , ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸಲಾಯಿತು.

ಅರಣ್ಯ ಅಧಿಕಾರಿಗಳಿಂದ  ಡೀಮ್ಡ್ ಫಾರೆಸ್ಟ್  ಸೆಕ್ಷನ್ 4ರ ಕುರಿತು ಅರಿವು ಮೂಡಿಸಲಾಯಿತು , ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ,  ಪಶುವೈದ್ಯರು , ಮೀನುಗಾರಿಕೆ ಇಲಾಖೆ ಈ ಎಲ್ಲಾ  ಇಲಾಖೆಯ ಅಧಿಕಾರಿಗಳು  ತಮ್ಮ ತಮ್ಮ ಇಲಾಖೆಯ ಮಾಹಿತಿಯನ್ನು ನೀಡಿದರು.

ಈ ಸಭೆಗೆ ಗ್ರಾಮ ಪಂಚಾಯತಿ ಮಟ್ಟದ ಎಲ್ಲಾ ಅಧಿಕಾರಿಗಳು. ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.

Related posts

ವಿಜಯ ಕುಮಾರ್ ರಿಗೆ ದಸರಾ ಸಾಂಸ್ಕೃತಿಕ ಪ್ರಶಸ್ತಿ

Bimba Prakashana

ನೂತನ ಬಸ್ ಸಂಚಾರ ಕ್ಕೆ ಚಾಲನೆ ನೀಡಿದ ಶಾಸಕರು

Bimba Prakashana

ಯುದ್ಧ ಪೀಡಿತ ದೇಶದಲ್ಲಿರುವ ಹಾಸನದವರ ಮಾಹಿತಿಗಾಗಿ ಸೂಚನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More