Blog

ರಾಧಮ್ಮ ಜನ ಸ್ಪಂದನದಿಂದ ವಿದ್ಯಾರ್ಥಿನಿಯರಿಗೆ ಆರೋಗ್ಯ ಕಾರ್ಯಕ್ರಮ

ರಾಧಮ್ಮ ಜನಸ್ಪಂದನ ಸಂಸ್ಥೆ ವತಿಯಿಂದ ಗರ್ಭ ಕೊರಳ ಕ್ಯಾನ್ಸರ್ ಬಗ್ಗೆ ಹರಿವು ಕಾರ್ಯಕ್ರಮ ಆಲೂರು ತಾಲೂಕು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ವೈದ್ಯರ ತಂಡದಿಂದ ಯಶಸ್ವಿಯಾಗಿ ನಡೆಯಿತು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಣ್ಣು ಮಕ್ಕಳಿಗೆ ತಮ್ಮ ಮುಂದಿನ ಭವಿಷ್ಯಕ್ಕಾಗಿ ಆರೋಗ್ಯವೇ ನಿಜವಾದ ಆಸ್ತಿಯೆಂದು ಡಾ. ಸಾವಿತ್ರಿ ಮಲೆನಾಡು ನರ್ಸಿಂಗ್ ಹೋಮ್ ರವರು ವಿಶ್ಲೇಷಿಸಿದರು ವಿದ್ಯಾರ್ಥಿನಿಯರಿಗೆ ಉದ್ದೇಶಿಸಿ ಮಾತನಾಡಿದ್ದ  ಪ್ರಸ್ತುತಿ ಸ್ತ್ರೀ ರೋಗ ತಜ್ಞರ ಅಧ್ಯಕ್ಷರಾಗಿರುವ ಡಾ. ಪ್ರೇಮಲತಾ ಈಗ ಭಾರತದಲ್ಲಿ ಗರ್ಭ ಕೊರಳ ಕ್ಯಾನ್ಸರ್ ರೆಡ್ ಜೋ ನಲ್ಲಿದ್ದು ಪ್ರತಿ ಏಳು ನಿಮಿಷಕ್ಕೆ ಒಬ್ಬ ಮಹಿಳೆರು, ಈ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಾ ವರ್ಷಕ್ಕೆ ಒಂದು ಲಕ್ಷ ಮೂವತ್ತು ಸಾವಿರ ಜನ ಮೃತಪಡುತ್ತಿದ್ದಾರೆ.

ಇಂಥ ಮಾರಣಾಂತಿಕ ಕಾಯಿಲೆಯನ್ನು ವ್ಯಾಕ್ಸಿನೇಷನ್ ಹಾಕುವ ಮುಖಾಂತರ ಮುಂದಿನ ತಮ್ಮ ಭವಿಷ್ಯದಲ್ಲಿ ಉತ್ತಮ ಆರೋಗ್ಯದ ಮುಖಾಂತರ ಜೀವನ ನಡೆಸಬಹುದು ಎಂದು ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಿದರು ಈ ರೀತಿ ಕಾರ್ಯಕ್ರಮವನ್ನು ಆಲೂರು ಕಾಲೇಜಿನಲ್ಲಿ ನಡೆಸಲು ಸಹಕರಿಸಿದ ಹೇಮಂತ್ ಕುಮಾರ್ ರಾಧಮ್ಮ ಜನಸ್ಪಂದನ ರವರಿಗೆ ಸಮಾಜದ ಕಳಕಳಿಯಿಂದ ದುಡಿಯುತ್ತಿರುವ ಒಳಿತು ಮಾಡಲಿ ಎಂದು ಹಾರೈಸಿದರು..

ರಾಧಮ್ಮ ಜನಸ್ಪಂದನ ಅಧ್ಯಕ್ಷರಾಗಿರುವ ಹೇಮಂತ್ ಮಾತನಾಡಿ ಇಂತಹ ಕಾರ್ಯಕ್ರಮ ಮಾಡಲು ನಮಗೆ ರಾಜ್ಯಸಭೆಯಲ್ಲಿ ಸುಧಾ ಮೂರ್ತಿಯವರ ಮಾತುಗಳು ಮತ್ತು ಅರಕಲಗೂಡಿನ ಎ ಟಿ ರಾಮಸ್ವಾಮಿ ರವರ ಪ್ರೇರಣೆಯ ಪ್ರಮುಖ ಕಾರಣ ಎಂದು ನುಡಿದರು.

ಕಾಲೇಜಿನ ಪ್ರಾಂಶುಪಾಲರಾದ ಕಾಂತಮ್ಮ ರವರು ಎಲ್ಲಾ ವೈದ್ಯರಿಗೂ ಅಭಿನಂದಿಸಿದರು ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ತ್ರಿವೇಣಿ ಅವರು ಸಮಾಜ ಸೇವಕರಾದ ಕಣಗಾಲ್ ಲೋಕೇಶ್ ರವಿ ರವರು ಉಪಸಿತರಿದ್ದರು

Related posts

ಆಲೂರುನಲ್ಲಿ ಶಂಕರ್ ಬಿದರಿ

Bimba Prakashana

ಅಪಘಾತ – ಬೇಲೂರು ಹಾಗೂ ಚಿಕ್ಕಮಗಳೂರುವಿನ ಹಲವರು ಮೃತ್ಯು

Bimba Prakashana

ಗ್ಯಾಸ್ ಏಜನ್ಸಿ ಮಾಲಕ ಹರೀಶ್ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More