Blog

ಪಿಯುಸಿ ಪ್ರಶ್ನೆ ಪತ್ರಿಕೆ ಬದಲಾದ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬದಲಾದ ಪ್ರಕರಣ
ಮುಚ್ಚಿಹಾಕುವ ಪ್ರಯತ್ನ:ಪ್ರಿನ್ಸಿಪಾಲ್ ವೀಣಾ ಹಾಗೂ ಸಂಧ್ಯಾ ಅಮಾನತು ಆಗಬೇಕು ಎಂದು ಕೆಲ ನೈಜ ಪತ್ರಕರ್ತರಿಂದ  ಅಗ್ರಹ ತನಿಖೆಗೆ ಮುಂದಾದ
ಜಿಲ್ಲಾಧಿಕಾರಿಗಳು.

ವರದಿ : ಅರುಣ್ ರಾಜಪುತ್

ಬೇಲೂರು.
ಬೇಲೂರು ಪಟ್ಟಣದ ಕೆಂಪೇಗೌಡ ರಸ್ತೆಯಲ್ಲಿರುವ ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಮಾರ್ಚ್ 16 ರಂದು ನಡೆದ ದ್ವಿತೀಯ ಪಿಯುಸಿ ಕಂಪ್ಯೂಟರ್ ಸೈನ್ಸ್ ಪ್ರಶ್ನೆ
ಪತ್ರಿಕೆ ಅದಲು ಬದಲು ಪ್ರಕರಣ ಮುಚ್ಚಿಹಾಕುವ ಪ್ರಯತ್ನ
ನಡೆಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಹೇಳಲಾಗುತ್ತಿದೆ.


ಪಟ್ಟಣದ ಸರ್ವೋದಯ ಕಾಲೇಜು ಹಾಗೂ ಜೂನಿಯರ್ ಕಾಲೇಜು ವಿದ್ಯಾರ್ಥಿನಿಯರು ಈ ಪರೀಕ್ಷಾ ಕೇಂದ್ರದಲ್ಲಿ ಕಂಪ್ಯೂಟರ್ ಸೈನ್ಸ್ ಪರೀಕ್ಷೆ ಬರೆಯಲು ಬಂದಿದ್ದರು. ಮೊದಲ ಬಾರಿಗೆ ಪರೀಕ್ಷೆ ಬರೆಯಲು ಬಂದಿದ್ದ ಈ 6 ಪರೀಕ್ಷಾರ್ಥಿಗಳಿಗೆ ಪುನಾವರ್ತಿತ (ರಿಪೀಟರ‍್ಸ್) ಪರೀಕ್ಷೆ ಬರೆಯಲು ಬಂದಂತಹ ಪರೀಕ್ಷಾರ್ಥಿಗಳಿಗೆ ನೀಡಬೇಕಿದ್ದ ಪ್ರಶ್ನೆ ಪತ್ರಿಕೆಯನ್ನುಈ ಸಾಲಿನ ವಿದ್ಯಾರ್ಥಿಗಳಿಗೆ ನೀಡಿ ಪರೀಕ್ಷೆ ಬರೆಸಿದ್ದರು.ಪರೀಕ್ಷೆ ಸಮಯ
ಪೂರ್ಣಗೊಂಡರೂ ತಮ್ಮ ತಪ್ಪು ಮೇಲ್ವೀಚಾರಕರಿಗೆ ತಿಳಿಯಲೇ ಇಲ್ಲ.

ಆದರೆ
ಪರೀಕ್ಷೆ ಮುಗಿಸಿ ಹೊರಬಂದ ವಿದ್ಯಾರ್ಥಿಗಳಿಗೆ ನಂತರ
ತಿಳಿಯಿತು ನಾವು ಬರೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಅದಲು
ಬದಲಾಗಿದೆ’ ಎಂಬುದು. ನಂತರ ವಿಷಯವನ್ನು ಮೇಲ್ವಿಚಾರಕಿ
ಸಂದ್ಯಾ ಹಾಗೂ ಪ್ರಾಂಶುಪಾಲೆ ವೀಣಾ ಅವರ ಗಮನಕ್ಕೆ
ತಂದಿದ್ದರಿಂದ ಪರೀಕ್ಷೆ ಸಮಯದ ನಂತರ ಪುನಃ ಕೊಠಡಿಗೆ
ಪರೀಕ್ಷಾರ್ಥಿಗಳನ್ನು ಕರೆಸಿ ಅದಲು ಬದಲು ಆಗಿದ್ದ ಪ್ರಶ್ನೆ
ಪತ್ರಿಕೆಗಳ ಸರಿಪಡಿಸಿ ಕೊಟ್ಟು ಕೇವಲ ಅರ್ಧ ಗಂಟೆ ಸಮಯ ನೀಡಿ ಪರೀಕ್ಷೆ
ಬರೆಸಿ ಕಳುಹಿಸಿದ್ದರು.ಇದರಿಂದ ಕಂಗಾಲಾದ ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತ ಮಾದ್ಯಮದ ಮುಂದೆ ನ್ಯಾಯ ಒದಗಿಸಿಕೊಡುವಂತೆ ಕೋರಿದರು. ಪೋಷಕರು ಕೂಡ ಕ್ರಮಕ್ಕೆ ಒತ್ತಾಯಿಸಿದ್ದರು.
ಇದಿಷ್ಟು ಅಂದಿನ ಕಥೆ.


     ನಂತರ ತಪ್ಪು ಮಾಡಿದವರಿಗೆ ಕ್ರಮ
ಜರುಗಿಸಬೇಕಿತ್ತು.ಆದರೆ ಈವರಗೆ ಯಾವುದೂ ಕ್ರಮ ಆಗಿಲ್ಲ.
ಪದವಿಪೂರ್ವ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಮೌನಕ್ಕೆ
ಶರಣಾಗಿರುವುದಲ್ಲದೆ, ಕೆಲ ಮಾದ್ಯಮದವರ ಹಾಗೂ ರಾಜಕೀಯ ವ್ಯಕ್ತಿಗಳ ಆಸೆ, ಆಮಿಷದೊಂದಿಗೆ ಒತ್ತಡ ತಂದು ಪ್ರಕರಣ ಮುಚ್ಚಿಹಾಕುವ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಘಟನೆ
ಮಾಧ್ಯಮದಲ್ಲಿ ಬಂದಿರುವುದರಿಂದ ಹಾಗೂ ಪೋಷಕರು ಕ್ರಮಕ್ಕೆ ಒತ್ತಾಯಿಸುತ್ತಿರುವುದರಿಂದ, ಇದೀಗ ಜಿಲ್ಲಾಧಿಕಾರಿಗಳೇ
ಸ್ವತಃ ಪ್ರಕರಣದ ಬಗ್ಗೆ ಆಸಕ್ತಿ ತೋರಿದ್ದು, ಮಕ್ಕಳ
ಭವಿಷ್ಯದ ಬಗ್ಗೆ ಚಲ್ಲಾಟ ಆಡುವುದರಿಂದ ಆಗುವ ಅನಾಹುತ ಹಾಗೂ
ನಷ್ಟದ ಬಗ್ಗೆ ಯೋಚಿಸಿ, ಮಕ್ಕಳಿಂದಲೇ ಹೇಳಿಕೆ
ತರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ
ಇಷ್ಟಾದರೂ ಜಿಲ್ಲಾಧಿಕಾರಿಗಳ  ಮೇಲೂ ಒತ್ತಡ ಬರುವ ಸಾಧ್ಯತೆಯಿದ್ದು, ಶಿಸ್ತಿಗೆ ಹೆಸರು ಮಾಡಿರುವ ಹಾಗೂ ನೊಂದವರ ಪಾಲಿಗೆ ದಯೆ ತೋರುವ ಜಿಲ್ಲಾಧಿಕಾರಿಗಳು ಈ ಪ್ರಕರಣದ ಯಾವ ಒತ್ತಡಕ್ಕೆ ಮಣಿಯದೆ
ವಿದ್ಯಾರ್ಥಿಗಳಿಗೆ ಹಾಗೂ  ಪೋಷಕರಿಗೆ ನ್ಯಾಯ ಸಿಗುವಂತಹ ಕೆಲಸ ಮಾಡಬೇಕು.
ತಪ್ಪು ಮಾಡಿದ ಪ್ರಿನ್ಸಿಪಾಲ್ ವೀಣಾ ಹಾಗೂ ಸಂಧ್ಯಾ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಕೆಲ ನೈಜ ಪತ್ರಕರ್ತರ ಆಶಯವಾಗಿದೆ.

Related posts

ವಿಜಯ ಕುಮಾರ್ ರಿಗೆ ದಸರಾ ಸಾಂಸ್ಕೃತಿಕ ಪ್ರಶಸ್ತಿ

Bimba Prakashana

ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ

Bimba Prakashana

ಬೊಬ್ಬನ ಹಳ್ಳಿ ಜಾತ ಹಳ್ಳಿಯ ಮಲ್ಲೇಶ್ವರ ಸ್ವಾಮಿ ಜಾತ್ರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More