Blog

ಜೀ ಟಿವಿಯಲ್ಲಿ ಕಾಗಿನೆರೆಯ ಅನುಷ್ಕಾ ಮುನ್ನಡೆ

ಕು. ಅನುಷ್ಕ (11 ವರ್ಷ ) ಸಕಲೇಶಪುರದ ಕಾಗಿನೆರೆಯ ಕು ಅನುಷ್ಕ ರವರು ಜೀ ಟಿವಿ ಸರಿಗಮಪ ಲಿಟಲ್ ಚಾಂಪ್ಸ್ – ಕಂಟೆಸ್ಟ್ ನಲ್ಲಿ ಆಯ್ಕೆಯಾಗಿದ್ದಾರೆ..

ಈ ಸ್ಪರ್ಧೆಗಳಲ್ಲಿ ಅತೀ ಕಿರಿಯವಳಾಗಿರುವ ಈ ಬಾಲಕಿ (ಸ್ಪೆಷಲ್ ಕಾಂಟೆಸ್ಟಂಟ್ಸ್ 5 ಮತ್ತು 5 ವರ್ಷದವರನ್ನು ಬಿಟ್ಟು ). ಮೂಲತಃ ಸಕಲೇಶಪುರದವಳು.

ಆದರೆ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ತಾಯಿ ಡಾ .ದೀಪಶ್ರೀ ತೀರ್ಥಹಳ್ಳಿಯವರು – ರೇಡಿಯೋಲಾಜಿಸ್ಟ್ ಡಾಕ್ಟರ್ – ತಂದೆ – ಕೆ ಜಿ . ಆದರ್ಶ – ಚಾರ್ಟರ್ಡ್ ಅಕೌಂಟೆಂಟ್ ( ಸಿ. ಎ ).

ಇಡೀ ಮಲೆನಾಡಿನಲ್ಲಿಂದ ಆಯ್ಕೆಯಾದ ಏಕೈಕ ಸ್ಪರ್ದಿಯಾಗಿರುವ ಈ ಬಾಲಕಿ  ಸುಮಾರು 17, 000 ಆಕಾಂಕ್ಷಿ ಗಳನ್ನು( 31 ಜಿಲ್ಲೆಯ ಮತ್ತು 239 ತಾಲೂಕಿನ ) ಹಿಂದಿಕ್ಕಿ ಸಾಧನೆ ಮಾಡಿದ್ದಾರೆ.

ಶ್ರೀಮತಿ ಎಸ್ ರಾಜಲಕ್ಷ್ಮಿ . ಹಾಗೂ ಡಿ ಸಿ . ಶ್ರೀಧರ್ IRS (ನಿ ) – ಭೂತಪೂರ್ವ ಪ್ರಧಾನ ಆಯುಕ್ತರು, ಆದಾಯ ತೆರಿಗೆ ಇಲಾಖೆ, ಮತ್ತು ಪ್ಲಾಂಟರ್ ಉದೆವಾರ, ಸಕಲೇಶಪುರ ಇವರ ಮೊಮ್ಮಗಳಾಗಿರುವ ಈ ಬಾಲಕಿಗೆ ಬಹಳಷ್ಟು ಮಂದಿ ಶುಭ ಹಾರೈಕೆ ಮಾಡಿದ್ದಾರೆ.

ಆಯ್ಕೆ ವಿಧಾನ ಈ ರೀತಿ
———————-

ಜೀ ಟಿವಿ ಸ ರಿ ಗ ಮ ಪ – ಲಿಟಲ್ ಚಾಂಪ್ಸ್ – 2026 ಸ್ಪರ್ಧೆಗಾಗಿ ರಾಜ್ಯದಾ ದ್ಯಂತ 31 ಜಿಲ್ಲೆಗಳು ಮತ್ತು 239 ತಾಲೂಕುಗಳಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಲು ಸುಮಾರು 17,000 – ಐದರಿಂದ ಹದಿನಾರು ವರ್ಷದ – ಮಕ್ಕಳನ್ನು ಸಂದರ್ಶಿಸಿ ಅಂತಿಮವಾಗಿ 30 ಆಕಾಂಕ್ಷಿಗಳನ್ನು ಆಯ್ಕೆ ಮಾಡಿದ್ದಲ್ಲದೆ 7 ಮಕ್ಕಳನ್ನು – ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಆಯ್ಕೆ ಮಾಡಿ ಮೆಗಾ ಆಡಿಷನ್ ನಲ್ಲಿ 15 ಮಕ್ಕಳನ್ನಲ್ಲದೆ 4 ಮಕ್ಕಳನ್ನು ಕಾಯುವಿಕೆ ಪಟ್ಟಿಯಿಂದ ತೆಗೆದುಕೊಂಡು ಒಟ್ಟು 19 ಸ್ಪರ್ಧಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿದ್ದಾರೆ. ಇದಲ್ಲದೆ ವೈಲ್ಡ್ ಕಾರ್ಡ್ ಎಂಟ್ರಿ ಯ ಮೂಲಕ 3 ಚಿಕ್ಕ ( 4, 5 ಮತ್ತು 5 ವರ್ಷದ ) ಮಕ್ಕಳನ್ನು ವಿಶೇಷ ಸ್ಪರ್ಧಿ ಗಳನ್ನಾಗಿ ಆಯ್ಕೆ ಮಾಡಿದ್ದಾರೆ. ಈ 15 +4 =19 ರಿಯಲ್ ಸ್ಪರ್ಧಿಗಳಲ್ಲಿ,  ಸಕಲೇಶಪುರ ಮೂಲದ ಕಾಗಿನೆರೆಯ ಕು. ಅನುಷ್ಕ (11 ವರ್ಷ ) ಅತೀ ಕಿರಿಯವಳು. ಈಗಾಗಲೇ ಸುಮಾರು 7- 8 ಸಂಚಿಕೆಗಳಲ್ಲಿ ಹಾಡಿ ಎಲ್ಲರ ಮನ ಗೆದ್ದಿದ್ದಾಳೆ. ಮಲೆನಾಡಿನಿಂದ ಆಯ್ಕೆಯಾದ ಏಕೈಕ ಮಗು ಇವಳು. ಹಳೆಯ ಮೈಸೂರು ಭಾಗದಿಂದ ಆಯ್ಕೆಯಾದ ಒಬ್ಬಳೇ ಮಗು ಕೂಡಾ.

Related posts

ಸ್ವಯಂ ಟೈಮ್ಸ್ ವಾರ್ತಾ ವಾಹಿನಿಯನ್ನು ಹ್ಯಾಕ್ ಮಾಡಿದ ಸೈಬರ್ ಕಳ್ಳ

Bimba Prakashana

ರೋಲರ್ ಸ್ಪೀಡ್ ಸ್ಕೇಟಿಂಗ್ ನಲ್ಲಿ ಅಂತರ್ ರಾಷ್ಟೀಯ ಸಾಧನೆ

Bimba Prakashana

ಸಕಲೇಶಪುರದಲ್ಲಿ ಈಜಾಟ ವ್ಯವಸ್ಥೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More