Blog

ಹುರುಡಿ ವಿಶ್ವನಾಥ್ ವಿರುದ್ಧ ಪ್ರತಿಭಟನೆ

🔴ಶಾಸಕರ ವಿರುದ್ದ ಹುರುಡಿ ವಿಶ್ವನಾಥ್ ಟಾಂಗ್:ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟಿಸುವುದಾಗಿ ಎಚ್ಚರಿಕೆ

ಆಲೂರು:ಆಲೂರು ಕಟ್ಟಾಯ ಸಕಲೇಶಪುರ ಕ್ಷೇತ್ರದ ಶಾಸಕರ ವಿರುದ್ದ ಕಮಿಷನ್ ಆರೋಪವನ್ನು ಮಾಜಿ ಶಾಸಕರಾದ ಹುರುಡಿ ವಿಶ್ವನಾಥ್ ಅವರು ಪ್ರಸ್ತಾಪ ಮಾಡಿದ್ದನ್ನು ಖಂಡಿಸಿ ಇಂದು ತಾಲ್ಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ನೋ) ಕಚೇರಿಯ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ ಮಾಜಿ ಶಾಸಕ ಹುರುಡಿ ವಿಶ್ವನಾಥ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕರಾದ ವಿಶ್ವನಾಥ್ ಹಾಲಿ ಶಾಸಕರಾದ ಸಿಮೆಂಟ್ ಮಂಜು ಅವರ ಬಗ್ಗೆ ಮಂಜುರಾದ ಅನುಧಾನದಲ್ಲಿ ಕಮಿಷನ್ ತೆಗೆದುಕೊಂಡು ಭೂಮಿ ಪೂಜೆ ಮಾಡಬೇಕೆ,ಅಂತಹ ನೀಚ ಮನಸ್ಥಿತಿ ಶಾಸಕರಿಗೆ ಯಾಕೆ ಬೇಕು? ಅನುಧಾನ ಬಂದರೇ ಅಧಿಕಾರಿಗಳಿ ಗೆ ಸಲಹೆ ಸೂಚನೆ ನೀಡಿ ಕೆಲಸ ಮಾಡಲು ತಿಳಿಸಿದರೆ ಸಾಕು,ಇವರಿಗೇಕೆ ಕಮಿಷನ್ ಉಸಾಬರೀ ಅದಲ್ಲದೇ ಭೂಮಿ ಪೂಜೆಗೆ ಮೋದಲೇ ಕಮಿಷನ್ ಕೊಡಬೇಕು ನಂತರ ಶಾಸಕರು ಹೇಳಿದ ದಿನವೇ ಭೂಮಿ ಪೂಜೆ ಮಾಡಬೇಕು,ಅಲ್ಲದೇ ಸ್ಥಳಿಯರಿಗೆ ಗುತ್ತಿಗೆ ನೀಡದೆ ಜಿಲ್ಲೆಯವರಿಗೆ ಗುತ್ತಿಗೆ ನೀಡುತ್ತಿರುವುದು ವಿಪರ್ಯಾಸ ಅಲ್ಲವೇ ಎಂದು ಗುತ್ತಿಗೆದಾರ ಲೊಕೇಶ್ ಪರವಾಗಿ ಪ್ರಶ್ನಿಸಿದ್ದರು.

ಇಂದು ಮಾಜಿ ಶಾಸಕರ ಪ್ರಶ್ನೆಗೆ ಪತ್ರಿಕಾಗೋಷ್ಠಿಯ ಮೂಲಕ ಪ್ರತ್ಯುತ್ತರ ನೀಡಿದ ಅಬ್ಬನ ಕೃಷ್ಣಮೂರ್ತಿ ಅವರು ನಮ್ಮ ಕ್ಷೇತ್ರದಲ್ಲಿ ತಳ ದಲಿತ ಸಮುದಾಯದ ಒಬ್ಬ ವ್ಯಕ್ತಿ ಶಾಸಕರಾಗಿ ಅವರ ಕಾರ್ಯವೈಖರಿ ಮತ್ತು ಪ್ರತಿಯೋಂದು ಸಮಸ್ಯೆಗೂ ಸ್ಪಂದಿಸುವ ಮೂಲಕ ಜನಮನಗೆದ್ದ ನಾಯಕರೆಂದು ಗುರುತಿಸಿಕೊಂಡಿರುವುದನ್ನು ಸಹಿಸಲಾಗುತ್ತಿಲ್ಲ,ಮಾಜಿ ಶಾಸಕರು ಏನೇನು ಕೆಲಸ ಮಾಡಿದ್ದಾರೆ ಎಂದು ಕ್ಷೇತ್ರದ ಜನತೆಗೆ ಗೊತ್ತಿದೆ,ಯಾವುದೇ ವಿಚಾರವನ್ನು ಮಾತನಾಡುವಾಗ ಪೂರ್ವಪರ ಯೋಚಿಸಿ ದಾಖಲೆ ಸಹಿತ ಪ್ರಶ್ನಿಸಬೇಕು,ಸಾಬೀತಾದ ನಂತರ ಕ್ರಮ ತೆಗೆದುಕೊಳ್ಳಲಿ.ಸುಮ್ಮನೇ ನಾಲಿಗೆ ಹರಿಬಿಡುವುದು ಸರಿಯಲ್ಲ,ಎರಡು ಸಾವಿರದ ನೋಟು ಮತ್ತು ಐದುನೂರು ನೋಟಿಗಳಿಗೆ ಹೋಲಿಸಿ ತಿರುಗೇಟು ನೀಡಿದರು,ರಾಜಕೀಯದಲ್ಲಿ ಹಿರಿಯರಿದ್ದಾರೆ ಅವರದೇ ಆದ ಘನತೆಯಿದೆ ಅದನ್ನು ಉಳಿಸಿಕೊಳ್ಳಲಿ ಎಂದು ವಿಶಾದ ವ್ಯಕ್ತಪಡಿಸಿದರು.

ಇದೇ ಸಂಧರ್ಭದಲ್ಲಿ ಬಿಜೆಪಿ ವಕ್ತಾರ ಮೋಹನ್ ಮಾತನಾಡಿ ಇದೇ ರೀತಿ ತಮ್ಮ ನಾಲಿಗೆ ಹರಿಬಿಟ್ಟು ಮುಂದುವರೆದರೆ ಮನೆಗೆ ಮುತ್ತಿಗೆ ಹಾಕುತ್ತೇವೆ ಅಲ್ಲದೇ ರಾಜ್ಯ ಮಟ್ಟದಲ್ಲೂ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ದ್ರುವ ಕಣಗಾಲು.ಬಿಜೆಪಿ ವಕ್ತಾರ ಮೋಹನ್ .ಎಸ್ಸಿ ಮೋರ್ಚಾ ಅಧ್ಯಕ್ಷ ದೇವರಾಜ್.ಮುಖಂಡರುಗಳಾದ ನಂಜುಂಡಪ್ಪ,ಕಿರಣ್.ಉಪಸ್ಥಿತರಿದ್ದರು.

Related posts

ಸಕಲೇಶಪುರದಲ್ಲಿ ಈಜಾಟ ವ್ಯವಸ್ಥೆ

Bimba Prakashana

ಅಪಘಾತ ಮಾಡಿ ಪರಾರಿ ಆದ ಲಾರಿ ಪತ್ತೆ ಆಗಲೇ ಇಲ್ಲ

Bimba Prakashana

ವಳಲ ಹಳ್ಳಿ ಲಾಡ್ಜ್ ನ ಸಾವು ಯಾತಕ್ಕಾಗಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More