ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹಾನು ಬಾಳು ಹೋಬಳಿ ಅವರೆಕಾಡು ಗ್ರಾಮದ ಡಾ. ಅವರೆಕಾಡು ವಿಜಯಕುಮಾರ್ ಅವರ ಅಮೂಲ್ಯ ಸುದೀರ್ಘ 33 ವರ್ಷಗಳ ಶಿಕ್ಷಣ ಸೇವೆಯನ್ನು ಗುರುತಿಸಿ ಮೈಸೂರು ಜಿಲ್ಲಾಡಳಿತ ಪ್ರತಿಷ್ಠಿತ ಮೈಸೂರು ಜಿಲ್ಲಾ “ಕನ್ನಡ ರಾಜ್ಯೋತ್ಸವ ಪುರಸ್ಕಾರ 2026” ಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಆಯ್ಕೆ ಮಾಡಲಾಗಿದೆ.
ಇವರು ಪ್ರಸ್ತುತ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಭಾಷಾಂತರ ಅಧ್ಯಯನ ಮತ್ತು ವಿದೇಶಿ ಭಾಷಾ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
