ನಾಗೇಶ್ ಎಂ ಎಚ್ ಮಾಗೇರಿ.
🔴ಪ್ರಕೃತಿಯಲ್ಲಿ ಲೀನವಾದ ಪ್ರತಾಪ್ ಗೌಡ ಬಾಚಿಹಳ್ಳಿ.
ಸಕಲೇಶಪುರ: ಉತ್ತರಾಖಂಡ್‌ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಕಲೇಶಪುರ ತಾಲೂಕಿನ ಬಾಚೀಹಳ್ಳಿ ಗ್ರಾಮದ ಉದ್ಯಮಿ ಪ್ರತಾಪ್ ಗೌಡ ಅವರ ಪಾರ್ಥಿವ ಶರೀರ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ನೂರಾರು ಜನರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ಪಟ್ಟಣದ ಕೆಂಪೇಗೌಡ ಪ್ರತಿಮೆ ಬಳಿ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಯಿತು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಪ್ರತಾಪ್ ಗೌಡ ಅವರ ನಿಧನಕ್ಕೆ ಸಕಲೇಶಪುರದ ಜನತೆ ಕಂಬನಿ ಮಿಡಿದರು. ಬೆಂಗಳೂರಿನಲ್ಲಿ ನೆಲೆಸಿದ್ದ ಅವರು, ಸಕಲೇಶಪುರ ಕ್ಷೇತ್ರದಲ್ಲಿಯೂ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
🔴ಸಕಲೇಶಪುರ ದಿಂದ ಬಾಚಿಹಳ್ಳಿ ವರಗೆ ರಸ್ತೆ ಉದ್ದಕ್ಕೂ ಜನಸಾಗರ.
ಹೆತ್ತೂರಿನ ಹೃದಯ ಭಾಗದಲ್ಲಿ ಸಾವಿರಾರು ಜನರ ನಡುವೆ ಪ್ರತಾಪ್ ಗೌಡ ಅವರ ಪಾರ್ಥಿವ ಶರೀರ ಮೆರವಣಿಗೆ
ಮುಖಾಂತರ ತನ್ನ ಹುಟ್ಟುರಿಗೆ ಸಾಗಿತು.
ಪ್ರತಾಪ್ ಗೌಡ ರವರ ಅಂತ್ಯ ಕ್ರಿಯೆಗೆ
ಸಂಸದರಾದ ಶ್ರೇಯಸ್ ಪಟೇಲ್, ಶಾಸಕ ಸಿಮೆಂಟ್ ಮಂಜು, ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್ ರವರು ಹಲವಾರು ಗಣ್ಯ ವ್ಯಕ್ತಿಗಳು, ಸಂಬಂಧಿಕರು ಕುಟುಂಬಸ್ಥರು ಹಲವಾರು ಗ್ರಾಮಸ್ಥರು ಅವರ ಅಭಿಮಾನಿಗಳ ಸಾವಿರಾರು ಜನರ ಜನಸ್ತೋಮವಾಗಿತ್ತು.
