Blog

ವಳಲ ಹಳ್ಳಿ ಲಾಡ್ಜ್ ನ ಸಾವು ಯಾತಕ್ಕಾಗಿ

ನಾಗೇಶ್ ಎಂ ಎಚ್ ಮಾಗೇರಿ.

ಸಕಲೇಶಪುರ :
ಸಕಲೇಶಪುರ ತಾಲ್ಲೂಕು ವಳಲ ಹಳ್ಳಿ ಲಾಡ್ಜ್‌ನಲ್ಲಿ 23ರ ಯುವತಿ ಅನುಮಾನಾಸ್ಪದ ಸಾವು:

ಸ್ನೇಹಿತರ ಜೊತೆ ಬಂದಿದ್ದ ಯುವತಿ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಮೃತ್ಯು!

ಬೆಂಗಳೂರು ಮೂಲದ 23 ವರ್ಷದ ವರ್ಷಾ ಸಕಲೇಶಪುರ ತಾಲೂಕಿನ ಲಾಡ್ಜ್‌ವೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಸೆಪ್ಟೆಂಬರ್ 11ರಂದು ವರ್ಷಾ ತನ್ನ ಸ್ನೇಹಿತರಾದ ರಘು ಹಾಗೂ ದರ್ಶನ್‌ ಜೊತೆ ಸಕಲೇಶಪುರಕ್ಕೆ ಬಂದಿದ್ದರು. ಹೆತ್ತೂರು  ಹೋಬಳಿಯ ವಳಲಹಳ್ಳಿ ಕೂಡಿಗೆ ಗ್ರಾಮದ ಶ್ರೀದೇವಿ ಲಾಡ್ಜ್‌ನಲ್ಲಿ ಅವರು ತಂಗಿದ್ದರು ಎನ್ನಲಾಗಿದೆ.

ಸೆಪ್ಟೆಂಬರ್ 15ರಂದು ವರ್ಷಾ ಸ್ನಾನ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಹೆತ್ತೂರು  ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಳಿಕ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಷಯ ತಿಳಿದು ಸಕಲೇಶಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ IPS ಅವರ ಮಾಹಿತಿ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಷಾ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಬೆಂಗಳೂರಿನಿಂದ ಬಂದು UDR ದೂರು ದಾಖಲಿಸಿದ್ದಾರೆ.

ವರ್ಷಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ HIMSಗೆ ರವಾನಿಸಲಾಗಿದೆ. ಆರಂಭಿಕ ಪರಿಶೀಲನೆಯಲ್ಲಿ ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸ್ಪಷ್ಟವಾಗಲಿದೆ.

ವರ್ಷಾ ಲಾಡ್ಜ್‌ಗೆ ಇಬ್ಬರು ಪುರುಷ ಸ್ನೇಹಿತರೊಂದಿಗೆ ಬಂದಿದ್ದ ಸಂದರ್ಭ ಸೇರಿದಂತೆ ಘಟನೆಯ ಎಲ್ಲ ಆಯಾಮಗ ಳಲ್ಲಿ ಪೊಲೀಸ್ ತನಿಖೆಯಲ್ಲಿ
ಸಕಲೇಶಪುರ ಲಾಡ್ಜ್‌ನಲ್ಲಿ 23ರ ಯುವತಿ ಅನುಮಾನಾಸ್ಪದ ಸಾವು: ಸ್ನೇಹಿತರ ಜೊತೆ ಬಂದಿದ್ದ ಯುವತಿ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಮೃತ್ಯು!

ಬೆಂಗಳೂರು ಮೂಲದ 23 ವರ್ಷದ ವರ್ಷಾ ಸಕಲೇಶಪುರ ತಾಲೂಕಿನ ಲಾಡ್ಜ್‌ವೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಸೆಪ್ಟೆಂಬರ್ 15ರಂದು ವರ್ಷಾ ಸ್ನಾನ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು  ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಳಿಕ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಷಯ ತಿಳಿದು ಸಕಲೇಶಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ IPS ಅವರ ಮಾಹಿತಿ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಷಾ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಬೆಂಗಳೂರಿನಿಂದ ಬಂದು UDR ದೂರು ದಾಖಲಿಸಿದ್ದಾರೆ.

ವರ್ಷಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ HIMSಗೆ ರವಾನಿಸಲಾಗಿದೆ. ಆರಂಭಿಕ ಪರಿಶೀಲನೆಯಲ್ಲಿ ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸ್ಪಷ್ಟವಾಗಲಿದೆ. ವರ್ಷಾ ಲಾಡ್ಜ್‌ಗೆ ಇಬ್ಬರು ಪುರುಷ ಸ್ನೇಹಿತರೊಂದಿಗೆ ಬಂದಿದ್ದ ಸಂದರ್ಭ ಸೇರಿದಂತೆ ಘಟನೆಯ ಎಲ್ಲ ಆಯಾಮಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related posts

ಲಿಟಲ್ ಚಾಂಪ್ಸ್ – ಸಕಲೇಶಪುರದ ಅನುಷ್ಕಾ ಮುನ್ನಡೆ

Bimba Prakashana

ಶಾಸಕರಿಂದ ಅಧಿಕಾರ ದುರುಪಯೋಗ – ಅಧಿಕಾರಿಗಳ ತೇಜೋವದೆ

Bimba Prakashana

ಸಮಾಜ ಸೇವಕ ತ್ಯಾಗ ರಾಜು ಜನ್ಮದಿನದ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More