Blog

ಬೇಲೂರು ಘಟ್ಟದ ಹಳ್ಳಿ ಶಾಲೆ ಸಮಸ್ಯೆ

🔴ಘಟ್ಟದಹಳ್ಳಿ ಶಾಲೆಗೆ ಕಾಂಪೌಂಡ್ ನಿರ್ಮಿಸುವಂತೆ ಪೋಷಕರ ಒತ್ತಾಯ.
  
ಬೇಲೂರು.
      ತಾಲ್ಲೂಕಿನ ಘಟ್ಟದಹಳ್ಳಿ ಸರ್ಕಾರಿ ಹಿರಿಯ ಪ್ರಾರ್ಥಮಿಕ ಪಾಠಶಾಲೆಗೆ  ಕಾಂಪೌಂಡ್ ಇಲ್ಲದೆ ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ.


  ಕಳೆದ ಕೆಲ ದಿನಗಳ ಹಿಂದೆಯಷ್ಟೆ ಎತ್ತಿನಹೊಳೆ  ಕಾಮಾಗಾರಿ ಯೋಜನೆಯಿಂದ ಇಲ್ಲಿನ ಕೆಲ ಕೆರೆಕಟ್ಟೆಗಳು ಭರ್ತಿಯಾಗಿದ್ದು,ಶಾಲಾ ಕಟ್ಟಡಕ್ಕೆ ಹೊಂದಿಕೊಂಡಂತೆ ನಾಲ್ಕೈದು ಮೀಟರ್‌ಗಳಷ್ಟು ಅಂತರದಲ್ಲಿ ಕೆರೆ ಭರ್ತಿಯಾಗಿದ್ದು ಮಕ್ಕಳು ಆಟವಾಡುವ ಸಮಯದಲ್ಲಿ ಮಕ್ಕಳಿಗೆ ಅನಾಹುತ ಸಂಭವಿಸುವ ಅನಿವಾರ್ಯತೆ ಇದೆ.ಕೂಡಲೆ ಶಾಲೆಯ ಸುತ್ತ ಕಾಂಪೌಂಡ್ ನಿರ್ಮಿಸುವಂತೆ ಪೋಷಕರು ಶಾಸಕರಿಗೆ ಒತ್ತಾಯಿಸಿದ್ದಾರೆ.


    ಇತ್ತೀಚೆಗೆ ತಾಲ್ಲೂಕಿನಲ್ಲಿ ಹಲವಾರು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ.ಸರ್ಕಾರಿ ಶಾಲಾ ಕಟ್ಟಡಗಳ ಶಿಥಿಲಾವಸ್ಥೆ,ಶಿಕ್ಷಕರ, ಮತ್ತು ಶಿಕ್ಷಣದ ಕೊರತೆಯಿಂದ ಪೋಷಕರು ಖಾಸಗಿ ಶಾಲೆಯತ್ತ ಗಮನ ಹರಿಸಿದ್ದಾರೆ. ಆದ್ದರಿಂದ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಗಮನಹರಿಸಿ ಕಾಂಪೌಂಡ್ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


     ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ಮಾತನಾಡಿ,ಕಾಂಪೌಂಡ್ ನಿರ್ಮಿಸುವಂತೆ ಹಲವಾರು ವರ್ಷದಿಂದಲೂ ಗ್ರಾಮ ಪಂಚಾಯತಿ ಕಛೇರಿಗೆ ಅರ್ಜಿ ನೀಡುತ್ತಲೆ ಬಂದಿದ್ದೇವೆ.ಯಾವುದೆ ಪ್ರಯೋಜನವಾಗಿಲ್ಲ.ಬರಗಾಲ ಇದ್ದುದರಿಂದ ಕೆರೆಯಲ್ಲಿ ನೀರು ಇರಲಿಲ್ಲ ಆದರೆ ಎತ್ತಿನ ಹೊಳೆ ಯೋಜನೆಯಿಂದ ಈ ಭಾಗದ ಕೆರೆಗಳೆಲ್ಲ ಭರ್ತಿಯಾಗಿವೆ ನಮ್ಮ ಶಾಲೆಯ ಪಕ್ಕದಲ್ಲಿಯೆ ಕೆರೆ ಬರ್ತ ಇಯಾಗಿರುವುದರಿಂದ ಮಕ್ಕಳು ಕೆರೆಗೆ ಹೋಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಶಿಕ್ಷಕ ಅಸಮದಾನ ವ್ಯಕ್ತಪಡಿಸಿದರು.

Related posts

ಕೇಶವ ಮೂರ್ತಿ ನಿಧನ

Bimba Prakashana

ಬೇಲೂರನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕರೆ

Bimba Prakashana

ಹಾನು ಬಾಳು ಚಿಕ್ಕಿ ಸ್ಪರ್ಧೆಯ ಫಲಿತಾಂಶ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More