Blog

ಬೇಲೂರನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕರೆ



ಬೇಲೂರು:ಸ್ವಚ್ಛ ಭಾರತ್ 2.0 ಯೋಜನೆಯಡಿ ಪಟ್ಟಣದ ಪುರಸಭೆ ವತಿಯಿಂದ ಸ್ವಚ್ಛತೆಯಡೆಗೆ ನಮ್ಮ ನಡೆ,ಎಂಬ ಅಭಿಯಾನವನ್ನು ಆಯೋಜಿಸಲಾಗಿತ್ತು.


  ಕಾರ್ಯಕ್ರಮದಲ್ಲಿ ಪುರಸಭೆ ಅದ್ಯಕ್ಷೆ ಉಷಾ ಸತೀಶ್ ಮಾತನಾಡಿ,ರಾಜ್ಯ ಸರ್ಕಾರ ಪ್ಲಾಸ್ಟಿಕ್ ಮುಕ್ತ ರಾಜ್ಯ ವನ್ನಾಗಿಸಲು ಸ್ವಚ್ಛತೆಯಡೆಗೆ ನಮ್ಮ ನಡೆ ಎಂಬ ಅಭಿಯಾನ  ಹಮ್ಮಿಕೊಂಡಿದ್ದು,ಹಸಿಕಸ,ಒಣಕಸ ಬೇರ್ಪಡಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಯೋಜನೆಯನ್ನ ರೂಪಿಸಿತ್ತು.ಅದರ ಜೊತೆಗೆ ಹಸಿಕಸ,ಒಣಕಸ,ದ ಜೊತೆಗೆ ಗೃಹ ಉತ್ಪಾಧಿತ ಅಪಾಯಕಾರಿ ತ್ಯಾಜ್ಯಮತ್ತು ಸ್ಯಾನಿಟರಿ ತ್ಯಾಜ್ಯ ಎಂಬ ನಾಲ್ಕು ಭಾಗಗಳಾಗಿ ವಿಂಗಡಣೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಹೋಟೆಲ್,ಅಂಗಡಿಗಳಲ್ಲಿ,ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗಿದ್ದು,ಈಗಾಗಲೆ ದಂಢ ವಿದಿಸುವಂತಹ ಕೆಲಸವನ್ನು ಪುರಸಭೆ ಅಧಿಕಾರಿಗಳು  ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಎಲ್ಲೆಂದರಲ್ಲಿ ಕಸ ಹಾಕುವುದನ್ನು ನಿಲ್ಲಿಸಿ, ಕಸದ ಗಾಡಿಗಳಲ್ಲಿ ಕಸ ಹಾಕುವ ಮೂಲಕ ನಗರವನ್ನು ಸ್ವಚ್ಛವಾಗಿಡಬೇಕು.ನಗರವನ್ನು ಪ್ಲಾಸ್ಟಿಕ್ ಮುಕ್ತ ವಾಗಿಸಬೇಕಾದರೆ ಪುರಸಭೆ ಅಧಿಕಾರಿಗಳು,ಸಿಬ್ಬಂದಿಗಳ ಜೊತೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಸಲಹೆ ನೀಡಿದರು.


   ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ,ನಗರದಲ್ಲಿ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕು.ಸ್ವಚ್ಛತೆಯಡೆಗೆ ನಮ್ಮ ನಡೆ ಎಂಬ ಅಭಿಯಾನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದ್ದು,ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಎಲ್ಲರೂ ಸಹಕರಿಸಬೇಕು.ದೇಶದಲ್ಲಿ ಕಸದ ಸಮಸ್ಯೆ ವಿಶ್ವ ಜಾಗತಿಕ ಮಟ್ಟದಲ್ಲಿ ಮುಂದುವರಿಯುತ್ತಿದೆ.ಇತ್ತೀಚೆಗೆ ಆಸ್ಪತ್ರೆ,ಮಾಂಸದ ಅಂಗಡಿ,ಹೋಟೆಲ್,ಮೆಡಿಕಲ್ ಗಳು ಎಲ್ಲಾ ಕಡೆಗಳಲ್ಲಿ ತ್ಯಾಜ್ಯಗಳನ್ನು ರಸ್ತೆ ಬದಿ ಹಾಕುವುದರಿಂದ ಕಸದ ನಿರ್ವಹಣೆ ಕಷ್ಟವಾಗಿದೆ ಮತ್ತು ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭವಾಗಿದೆ.ಪಕ್ಕದ ರಾಜ್ಯಗಳಲ್ಲಿ ಅರ್ದ ಲೀಟರ್, ಒಂದು ಲೀಟರ್ ಬಾಟರ್ ತಯಾರಿಸುವಲ್ಲಿ ಕಡಿವಾಣ ಹಾಕಿ ಎರಡು ಲೀಟರ್ ಬಾಟಲಿ ಗಳನ್ನು ತಯಾರಿಸುವ ಮೂಲಕ ಕೆಲ ಬದಲಾವಣೆ ತಂದಿವೆ.ಹಾಗೆಯೆ ನಮ್ಮ ಜಿಲ್ಲೆಯಲ್ಲಿಯೂ ಅದೇ ರೀತಿ ಬದಲಾವಣೆ ಜಿಲ್ಲಾಧಿಕಾರಿಗಳು ತರಬೇಕು ಪ್ಲಾಸ್ಟಿಕ್ ಉತ್ಪಾದನೆ ಕಡಿಮೆಯಾದಷ್ಟು ಅದರ ಬಳಕೆಯೂ ಕಡಿಮೆಯಾಗುತ್ತದೆ.ಬೇಲೂರು ವಿಶ್ವ ಪ್ರಸಿದ್ದವಾಗಿದ್ದು,ಪ್ರವಾಸಿಗರಿಗೆ ಎಲ್ಲಾ ರಸ್ತೆಗಳಲ್ಲಿ ಕಸದ ರಾಶಿಗಳೆ ಸ್ವಾಗತ ಕೋರುವ ಪರಿಸ್ಥಿತಿ ಎದುರಾಗಿದೆ.ಆದ್ದರಿಂದ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಾವೆಲ್ಲರೂ  ಒಗ್ಗಟ್ಟಾಗಿ ಪ್ಲಾಸ್ಟ್ಟಿಕ್ ಬಳಕೆ ನಿಷೇದಿಸಿ,ಬಟ್ಟೆ ಬ್ಯಾಗ್ ಗಳನ್ನು ಬಳಸುವಲ್ಲಿ ಸಹಕರಿಸಬೇಕು ಎಂದರು.


ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ.ಆರೋಗ್ಯಾಧಿಕಾರಿ ಲೋಹಿತ್.ಸಿಬ್ಬಂದಿಗಳು ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Related posts

ಬೆಳಗೋಡು ನಲ್ಲಿ ಪ್ರತಿಭಾ ಕಾರಂಜಿ

Bimba Prakashana

ಆಲೂರುನಲ್ಲಿ ವಿಶ್ವ ಮಾನವ ಕ್ರಿಕೆಟ್ ಕಪ್ ಉದ್ಘಾಟನೆ

Bimba Prakashana

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More