Blog

ಪಾಳ್ಯದ ಯಶವಂತರಿಗೆ ಪ್ರಶಸ್ತಿ ನೀಡಿದ ರಾಜ್ಯ ಸರಕಾರ





, ಆಲೂರು

ಜಿಲ್ಲೆಯ ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ದಕ್ಷತೆಗೆ ಮತ್ತೊಂದು ಗೌರವ ದೊರೆತಿದೆ. ಹಾಸನ ಆರ್‌ಟಿಒ ಕಚೇರಿಯ ಹಿರಿಯ ಮೋಟಾರು ವಾಹನ ತನಿಖಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಆಲೂರು ತಾಲೂಕಿನ ಪಾಳ್ಯ ಗ್ರಾಮದ ಪಿ.ಆ‌ರ್.ಯಶವಂತಕುಮಾರ್ ಅವರಿಗೆ ಪ್ರತಿಷ್ಠಿತ ‘ನ್ಯಾಷನಲ್ ಪೋರ್ಸ್‌ಮೆಂಟ್ ಟ್ರಾನ್ಸ್‌ಪೋರ್ಟ್ ಎನ್‌ಫೋರ್ಸ್‌ಮೆಂಟ್ ಅವಾರ್ಡ್’ ನೀಡಿ ರಾಜ್ಯ ಸರ್ಕಾರ ಗೌರವಿಸಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಾರಿಗೆ ನಿಯಮಗಳ ಉಲ್ಲಂಘನೆ ತಡೆಗಟ್ಟುವುದು ಹಾಗೂ ಅತಿಹೆಚ್ಚು ದಂಡ ಶುಲ್ಕ ವಸೂಲಿ ಮೂಲಕ ಸರ್ಕಾರಕ್ಕೆ ಗರಿಷ್ಠ ಆದಾಯ ತಂದುಕೊಟ್ಟ ಅಧಿಕಾರಿಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪಿ.ಆರ್. ಯಶವಂತಕುಮಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶಸ್ತಿ ಪ್ರದಾನ ಮಾಡಿದರು. ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ ಉಪಸ್ಥಿತರಿದ್ದರು.

Related posts

ಸಕಲೇಶಪುರದಲ್ಲಿ ಆರೋಗ್ಯ ಶಿಬಿರ

Bimba Prakashana

ಹೆನ್ನಲಿ ಗ್ರಾಮದ ಯುವಕ ನಾಪತ್ತೆ – ಮಾಹಿತಿ ನೀಡಿ

Bimba Prakashana

ಐ ಹಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More