Blog

ಆಲೂರುನಲ್ಲಿ ರೈಲ್ವೆ ನಿಲುಗಡೆ ಆಗಲು ಕಾರಣ ಯಾರು

ಆಲೂರು ತಾಲೂಕಿಗೆ  ರೈಲು ನಿಲುಗಡೆಯಿಂದ 20,000ಕ್ಕೂ ಹೆಚ್ಚು ಹಣ ಸಂಗ್ರಹವಾಗಿದ್ದರೂ ರೈಲು ನಿಲುಗಡೆ ಆದೇಶವನ್ನು ರದ್ದುಪಡಿಸಿರುತ್ತಾರೆ.
ಈ ತಾರತಮ್ಯವನ್ನು ಅಂಕಿ ಅಂಶಗಳ ಮುಖಾಂತರ ಪತ್ತೆ ಹಚ್ಚಿ  ರೈಲ್ವೆ ಅಧಿಕಾರಿಗಳಿಗೆ ಗಮನ ಸೆಳೆಯುವುದರಲ್ಲಿ ಕ್ಷೇತ್ರದ ಜನ ಪ್ರತಿನಿಧಿಗಳು ವಿಫಲರಾಗಿ ಕ್ಷೇತ್ರದ ಅಭಿವೃದ್ಧಿಗೆ ಒತ್ತನ್ನು ಕೊಡದೆ ತಮ್ಮ ಪ್ರಚಾರಕ್ಕಾಗಿ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಆಲೂರಿನ ರಾಧಮ್ಮ ಜನಸ್ಪಂದನ ಅಧ್ಯಕ್ಷರಾಗಿರುವ ಹೇಮಂತ್ ಕುಮಾರ್ ಅವರು ಮಲೆನಾಡು ಶ್ಯಾಡೋ ಗೆ ತಿಳಿಸಿದ್ದಾರೆ.

ಆಲೂರು ತಾಲೂಕಿನ ದುರ್ದೈವ ಸಂಗತಿ ಎಂದರೆ ಇಲ್ಲಿಯವರೆಗೂ ಕ್ಷೇತ್ರದ ಶಾಸಕರು ಈ ವಿಚಾರದಲ್ಲಿ ಯಾವುದೇ ರೈಲ್ವೆ ಅಧಿಕಾರಿಗಳಿಗೆ ಸಮರ್ಪಕವಾಗಿ ಅಂಕಿ ಅಂಶವನ್ನು ಪಡೆದು ಮಾಹಿತಿಯನ್ನು ಕೊಟ್ಟು ರೈಲ್ವೆ ಬೋರ್ಡ್ ನವರೆಗೂ ಹೋಗಿರುವುದಿಲ್ಲ.

ಕೇವಲ ಮಾಧ್ಯಮಗಳಿಗೆ ರೈಲ್ವೆ ಮಂತ್ರಿಗಳಿಗೆ ಸನ್ಮಾನ ಮಾಡುತ್ತಿರುವ ಫೋಟೋವನ್ನೇ ಕೊಟ್ಟು ಭಾಷಣಕ್ಕೆ ಸೀಮಿತ ಆಗಿರುವುದರಿಂದ ಇಲ್ಲಿಯವರೆಗೂ ಶಾಶ್ವತ ರೈಲು ನಿಲುಗಡೆ ಆದೇಶವನ್ನು ತರುವುದರಲ್ಲಿ ಯಶಸ್ಸು ಸಿಕ್ಕಿರುವುದಿಲ್ಲ . 

ರಾಧಮ್ಮ ಜನಸ್ಪಂದನ ಸಂಸ್ಥೆಯಿಂದ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಹಾಸನ ಜಿಲ್ಲೆಯ ಹೋಬಳಿ ಮಟ್ಟದ ರೈಲ್ವೆ ನಿಲ್ದಾಣಗಳ ಮಾಹಿತಿಯನ್ನು ಪಡೆದು ಅಂಕಿ ಅಂಶವನ್ನು ಸಮರ್ಪಕವಾಗಿ ಮನವಿ ಪತ್ರದೊಂದಿಗೆ ದಿನಾಂಕ 20 ಜುಲೈರಂದು  ದೆಹಲಿಯ ರೈಲ್ವೆ ಬೋರ್ಡ್ ಗೆ ತಲುಪಿಸಿರುತ್ತೇವೆ ಎಂದು ಹೇಮಂತ್ ತಿಳಿಸಿದ್ದಾರೆ.

ಈ ಸಮಸ್ಯೆ ಬಗ್ಗೆ ರಾಜ್ಯ ರೈಲ್ವೆ ಖಾತೆ ಸಚಿವರಾದ  ವಿ. ಸೋಮಣ್ಣನವರನ್ನು  ದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿ ಗಮನವನ್ನು ಸೆಳೆದಿದ್ದಾರೆ

1)ಆಲೂರು ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ ಒಂದು ಕಾರವಾರ ಎಕ್ಸ್ಪ್ರೆಸ್ ಸಂಚರಿಸುತ್ತಿದ್ದು ಈ ರೈಲಿನಿಂದ ತಿಂಗಳಿಗೆ 2024 ಅಕ್ಟೋಬರ್ ನಲ್ಲಿ 313 ಪ್ರಯಾಣಿಕರು ಪ್ರಯಾಣಿಸಿದ್ದು ಒಟ್ಟು 22580 ರೂಪಾಯಿಗಳು ರೈಲ್ವೆ ಟಿಕೆಟ್ ನಿಂದ ಸಂಗ್ರಹವಾಗಿರುತ್ತದೆ…
2024 ನವಂಬರ್ ತಿಂಗಳಲ್ಲಿ ಆಲೂರಿನಲ್ಲಿ 221 ರೈಲ್ವೆ ಪ್ರಯಾಣಿಕರು ಟಿಕೇಟನ್ನು ಪಡೆದು ಒಟ್ಟು ಟಿಕೆಟ್ ನ ಹಣ 15,925 ಸಂಗ್ರಹವಾಗಿರುತ್ತದೆ 2024 ಡಿಸೆಂಬರ್ ತಿಂಗಳಲ್ಲಿ ನಾಲ್ಕನೇ ತಾರೀಖಿನಿಂದ ರೈಲು ಸಂಚಾರವನ್ನು ರದ್ದು ಪಡಿಸಿರುತ್ತಾರೆ. ಆದಾಯದ ಕೊರತೆ ಇದೆ ಎಂದು ರೈಲ್ವೆ ಇಲಾಖೆಯಿಂದ ಉತ್ತರವನ್ನು ನೀಡಿರುತ್ತಾರೆ…

2)ಮಾವಿನಕೆರೆ ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ 8 ರೈಲುಗಳು ನಿಲಗಡೆಯಾಗುತ್ತಿದ್ದು ತಿಂಗಳಿಗೆ ಸರಾಸರಿ 33 ಸಾವಿರದಿಂದ 35,000 ಸಾವಿರ ವರೆಗೆ ಸಂಗ್ರಹವಾಗುತ್ತಿದ್ದರು ಸಹ ಅಲ್ಲಿ ಶಾಶ್ವತ ರೈಲು ನಿಲುಗಡೆ ರೈಲ್ವೆ ಇಲಾಖೆಯಿಂದ ಮಾಡಿಕೊಟ್ಟಿರುತ್ತಾರೆ

3)ಬಾಗೇಶ್ಪುರ ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ ಆರು ರೈಲುಗಳು ನಿಲುಗಡೆಯಾಗುತ್ತಿದ್ದು ತಿಂಗಳಿಗೆ 20,000 ಇಂದ 21 ಸಾವಿರ ವರೆಗೂ ಸರಾಸರಿ ಹಣವು ಸಂಗ್ರಹವಾಗಿರುತ್ತದೆ

4)ಡಿ ಸಮುದ್ರವಳ್ಳಿ ಚನ್ನರಾಯಪಟ್ಟಣ ತಾಲೂಕಿನ ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ ಎರಡು ರೈಲುಗಳು ನಿಲುಗಡೆ ಆಗುತ್ತಿದ್ದು ಒಂದು ರೈಲು ಎಕ್ಸ್ಪ್ರೆಸ್ ಯಶವಂತಪುರ ಇನ್ನೊಂದು ರೈಲು ಪ್ಯಾಸೆಂಜರ್ ರೈಲು ಆಗಿದ್ದು ಪ್ರತಿ ತಿಂಗಳು ಸರಾಸರಿ 7,000 ಇಂದ 8000 ವರೆಗೂ ಸಂಗ್ರವಾಗಿರುತ್ತದೆ. ಆದರೂ ಸಹ ಇಲ್ಲಿ ಶಾಶ್ವತ ರೈಲುಗಳು ಆದೇಶವನ್ನು ರೈಲ್ವೆ ಇಲಾಖೆಯಿಂದ ಮಾಡಿಕೊಟ್ಟಿರುತ್ತಾರೆ..

ನಾವು ನೀಡಿರುವ ಅಂಕಿ ಅಂಶಗಳನ್ನ ನಾವು ರಾಧಮ್ಮ ಜನಸ್ಪಂದನ ುಸ್ಥೆಯಿಂದ ರೈಲ್ವೆ ಇಲಾಖೆಯಿಂದ ಪಡೆದು ಈ ತಾರತಮ್ಯವನ್ನು ಆಲೂರು ತಾಲೂಕಿಗೆ ಏಕೆ ಮಾಡಿದ್ದೀರಾ ಎಂದು ಪ್ರಶ್ನಿಸಿದಾಗ ಆ ಭಾಗದ ರಾಜಕೀಯ ನಾಯಕರು ರೈಲ್ವೆ ಇಲಾಖೆಗೆ ಒತ್ತಡವನ್ನು ತಂದು ಶಾಶ್ವತ ನಿಲುಗಡೆಗಾಗಿ ಯಶಸ್ಸನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ನಮ್ಮ ತಾಲೂಕಿನಲ್ಲಿ ಜನಪ್ರತಿನಿಧಿಗಳು ಹಾಲಿಯಾಗಲಿ ಅಥವಾ ಮಾಜಿಯಾಗಲಿ ಕೇವಲ ಮಾಧ್ಯಮಗಳಲ್ಲಿ ಹೇಳಿಕೆ ಕೊಡುವುದೇ ಇವರ ಸಾಧನೆಯಾಗಿದೆ ಇದು ಕ್ಷೇತ್ರದ ಅಭಿವೃದ್ಧಿಗೆ ಮತ್ತು ನಮ್ಮ ತಾಲೂಕಿನ ಜನರನ್ನ ಅವರ ಬೇಜವಾಬ್ದಾರಿತನದಿಂದ ನಿರ್ಲಕ್ಷಿಸಿದ್ದಾರೆ ಎಂದು ಹೇಮಂತ್ ಕುಮಾರ್ ಅವರು ಮಾಧ್ಯಮಗಳಿಗೆ ಪ್ರಕಟಣೆ ಹೊರಡಿಸಿದ್ದಾರೆ…

ಮೇಲೆ ನಮೂದಿಸಿರುವ ಎಲ್ಲಾ ಅಂಕಿ ಅಂಶವನ್ನು ರೈಲ್ವೆ ಇಲಾಖೆಯಿಂದ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ರಾಧಮ್ಮ ಜನಸ್ಪಂದನ ಸಂಸ್ಥೆಯು ಪಡೆದಿರುವ ದಾಖಲಾತಿಗಳನ್ನು ಮಲೆನಾಡು ಶ್ಯಾಡೊಗೆ ನೀಡಿರುತ್ತಾರೆ.

Related posts

ಸಕಲೇಶಪುರದಲ್ಲಿ ವೈಚಾರಿಕ ಪತ್ರಿಕೆ ಕಾರ್ಯಕ್ರಮ

Bimba Prakashana

ಸಿದ್ದಗಂಗಾ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಹಕಾರ

Bimba Prakashana

ಹೆಚ್ ಎನ್ ಅಣ್ಣಯ್ಯರಿಗೆ ಡಾ. ಬಿ ಆರ್ ಅಂಬೇಡ್ಕರ್ ಪ್ರಶಸ್ತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More