ಮಕ್ಕಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕ್ರೀಡೆಗಳಲ್ಲೂ ಭಾಗವಹಿಸಬೇಕು : ಬಿಇಓ ಭಾಗ್ಯಮ್ಮ ಸಲಹೆ
ಬೇಲೂರು.
ಕರ್ನಾಟಕ ರಕ್ಷಣ ವೇದಿಕೆ ಬೇಲೂರು ತಾಲ್ಲೂಕು ಘಟಕ ಮತ್ತುಸಾಂಸ್ಕೃತಿಕ ಘಟಕದ ವತಿಯಿಂದ ಪ್ರೌಡಶಾಲಾ ಮಕ್ಕಳಿಗೆ ಜಾನಪದ ಮತ್ತು ಭಾವಗೀತೆ ಸ್ಪರ್ದೆ ಯನ್ನು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯ ಕ್ರಮದ ಉದ್ಘಾಟನೆಯನ್ನು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಭಾಗ್ಯಮ್ಮ ನೆರವೇರಿಸಿ ಮಾತನಾಡಿದ ಅವರು,ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಇಲಾಖೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.ತಾಲ್ಲೂಕಿನಲ್ಲಿ ಹಲವಾರು ಮಕ್ಕಳು ಜಾನಪದ,ಭಾವಗೀತೆ,ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಪ್ರಶಸ್ತಿಗಳನ್ನು ಪಡೆದಿದ್ದಾರೆ ಪ್ರತಿಭಾ ಪುರಸ್ಕಾರ,ಕ್ರೀಡೆ,ನಾಟಕ,ನೃತ್ಯ ಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು.ವೇದಿಕೆ ಕಾರ್ಯಕ್ರಮಗಳ ಅವಕಾಶಗಳನ್ನು ಮಕ್ಕಳು ಸದುಪಯೋಗಪಡೆದುಕೊಳ್ಳಬೇಕು.ಇಂತಹ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ನಡೆಸುವುದರಿಂದ ಮಕ್ಕಳಿಗೆ ಉತ್ತೇಜನ ನೀಡಿದಂತಾಗುತ್ತದೆ.ಮಕ್ಕಳಿಗೆ ಭಯ ಸಹಜವಾಗಿ ಬರುತ್ತದೆ ಆದರೆ ದೈರ್ಯವಾಗಿ ಎದುರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕರವೇ ತಾಲ್ಲೂಕು ಅದ್ಯಕ್ಷ ಚಂದ್ರಶೇಖರ್ ಮಾತನಾಡಿ,ಮಕ್ಕಳು ಸಣ್ಣ ವೇದಿಕೆಗಳ ಮೂಲಕ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕು ನಂತರ ತಾನಾಗಿಯೆ ವೇದಿಕೆಗಳು ಒದಗಿಬರುತ್ತವೆ.ಮಕ್ಕಳು ದೈರ್ಯ ಕಳೆದುಕೊಳ್ಳಬಾರದು.ಮಕ್ಕಳುವಿದ್ಯಾಬ್ಯಾಸದ ಜೊತೆಗೆ ಕಲೆ,ಸಾಹಿತ್ಯ, ಕ್ರೀಡೆ,ಇನ್ನಿತರೆ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ನಮ್ಮ ಸಂಘಟನೆ ತಾಲ್ಲೂಕು ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯ ,ರಾಷ್ಟ್ರ,ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಮುಂದಾಗಿದ್ದೇವೆ.ಸರ್ಕಾರಿ ಶಾಲಾ ಮಕ್ಕಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪುರಸಭೆ ಅದ್ಯಕ್ಷ ಅಕ್ರಂ ಶರೀಫ್ ಮಾತನಾಡಿ,ಇಂತಹ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಸಂಘ ಸಂಸ್ಥೆಗಳು ಮುಂದಾಗಬೇಕು.ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸದ ಗುಣಮಟ್ಟ ಕಡಿಮೆಯಾಗುತ್ತಿದೆ.ಶಿಕ್ಷಣಾಧಿಕಾರಿಗಳು ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾತನಾಡಿ,ಮಕ್ಕಳು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು ಶಿಕ್ಷಣದ ಜೊತೆಗೆ ಸಾಮಾಜಿಕ,ಶೈಕ್ಷಣಿಕ,ಸಾಂಸ್ಕೃತಿಕ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು.ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಬೇಕು. ಸಣ್ಣ ಮೆಟ್ಟಿಲುಗಳ ಮೂಲಕ ದೊಡ್ಡ ಮೆಟ್ಟಿಲೇರಬಹುದು, ಮಕ್ಕಳು ದೈರ್ಯದಿಂದ ಮುಂದೆ ಸಾಗಿದರೆ ಮುಂದೊಂದು ದಿನ ಯಶಸ್ಸು ಕಾಣಲು ಸಹಕಾರಿಯಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಸಾಂಸ್ಕೃತಿಕ ಘಟಕದ ಅದ್ಯಕ್ಷ ನರಸಿಂಹ ಸ್ವಾಮಿ ಮಾತನಾಡಿ,ಯಾವುದೆ ವೇದಿಕೆ ಯಲ್ಲಿ ಅವಕಾಶಗಳು ಸಿಗುವುದು ಕಷ್ಟ.ಆದರೆ ಸಿಗುವಂತಹ ಅವಕಾಶಗಳನ್ನು ಬಳಸಿಕೊಂಡು ಗುರಿ ಸಾದಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಶಕ್ತಿಯಾಗಬೇಕು.ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಕಳೆದ ಎರಡು ತಿಂಗಳ ಹಿಂದೆಯೆ ಕಾರ್ಯಕ್ರಮ ರೂಪಿಸಲಾಗಿತ್ತು ಅದರೆ ಕಾರಣಾಂತರಗಳಿಂದ ಕಾರ್ಯಕ್ರಮ ಮುಂದೂಡಲಾಗಿತ್ತು.ಎಲ್ಲಾ ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆಯ ಮೂಲಕ ಸಂಗೀತದ ರಸದೌತಣವನ್ನು ನೀಡಿದ ಮಕ್ಕಳಿಗೆ ಕರವೇ ಸಂಘಟನೆ ವತಿಯಿಂದ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ,ಕರವೇ ಅಧ್ಯಕ್ಷ ಚಂದ್ರಶೇಖರ್,ಸಾಂಸ್ಕೃತಿಕ ಘಟಕದ ಅದ್ಯಕ್ಷ ನರಸಿಂಹಸ್ವಾಮಿ, ಸಾಂಸ್ಕೃತಿಕ ಘಟಕದ ಗೌರವಾದ್ಯಕ್ಷ ಡಾ.ಸಂತೋಷ್,ನಗರ ಘಟಕದ ಅದ್ಯಕ್ಷ ಪ್ರಸನ್ನ,ಗಾಯತ್ರಿ,ತೀರ್ಪುಗಾರರಾಗಿ ಶ್ರೀ ಮತಿ ಸೌಭಾಗ್ಯ,ಶೋಭಹರೀಶ್,ಚಂದನ್ ಕುಮಾರ್ ಹಾಗೂ ಹಲವು ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
previous post
