🔴ಹಾಸನ ಜಿಲ್ಲೆಯಲ್ಲಿ ಹಲವು ಪಿಎಸ್‌ಐಗಳ ವರ್ಗಾವಣೆ
ಹಾಸನ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳನ್ನು (ಪಿಎಸ್‌ಐ) ವರ್ಗಾವಣೆ ಮಾಡಿ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಎಂ.ಬಿ. ಬೋರಲಿಂಗಯ್ಯ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.
ವರ್ಗಾವಣೆ ಆದೇಶದಂತೆ, ಶಾಂತಿಗ್ರಾಮ ಪೊಲೀಸ್ ಠಾಣೆಯ ಅರುಣ್ ಅವರನ್ನು ಗಂಡಸಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ದುದ್ದ ಠಾಣೆಯ ಎಂ.ಟಿ. ಅಂತಿಮ ಅವರನ್ನು ಶಾಂತಿಗ್ರಾಮ ಠಾಣೆಗೆ, ಸೆನ್ ಠಾಣೆಯ ಜಿ. ಜತೇಂದ್ರಕುಮಾರ್ ಅವರನ್ನು ದುದ್ದ ಠಾಣೆಗೆ ವರ್ಗಾಯಿಸಲಾಗಿದೆ.
ಹಿರೀಸಾವೆ ಠಾಣೆಯ ರೂಪಾದೇವಿ ಬಿರಾದಾರ್ ಅವರನ್ನು ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಗೆ, ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯ ಎಲ್. ಸಂತೋಷ್ ಅವರನ್ನು ನುಗ್ಗೇಹಳ್ಳಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಇದೇ ವೇಳೆ, ಗೊರೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್. ಧನರಾಜು ಅವರನ್ನು ಶ್ರವಣಬೆಳಗೊಳ ಠಾಣೆಗೆ, ಕುಶಾಲನಗರ ಠಾಣೆಯ ಗಣೇಶ ಅವರನ್ನು ಗೊರೂರು ಠಾಣೆಗೆ ಹಾಗೂ ಶ್ರವಣಬೆಳಗೊಳ ಠಾಣೆಯ ಎನ್.ಜಿ. ನವೀನಕುಮಾರ್ ಅವರನ್ನು ಹಿರೀಸಾವೆ ಠಾಣೆಗೆ ವರ್ಗಾಯಿಸಲಾಗಿದೆ.
ಪಿಎಸ್‌ಐಗಳಾದ ಟಿ. ಆರತಿ ಹಾಗೂ ಭರತಕುಮಾರ್ ರೆಡ್ಡಿ ಅವರಿಗೆ ಮುಂದಿನ ಆದೇಶದವರೆಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.
ಜಿಲ್ಲೆಯ ವಿವಿಧ ಠಾಣೆಗಳ ಆಡಳಿತಾತ್ಮಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ವರ್ಗಾವಣೆ ಆದೇಶ ಹೊರಡಿಸಲಾಗಿದೆ.
previous post
