Blog

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ನಾಗೇಶ್ ಎಂ ಹೆಚ್ ಮಾಗೇರಿ.


ಸಕಲೇಶಪುರ ತಾಲ್ಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಕ್ಷೇಮ ಅಭಿವೃದ್ಧಿ ಸಂಘ (ರಿ )
ಸಕಲೇಶಪುರ ತಾಲ್ಲೂಕು ಹಾಸನ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ
2024/25 ಮತ್ತು 2025/26ನೇ ಸಾಲಿನ  ಎಸ್. ಎಸ್.ಎಲ್.ಸಿ. /ದ್ವಿತೀಯ ಪಿ. ಯು. ಸಿ. ಮತ್ತು ಪದವಿ ವಿದ್ಯಾರ್ಥಿಗಳಿಗೆ ಪತಿಭಾ ಪುರಸ್ಕಾರ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಕಾರ್ಯಕ್ರಮ
ಮಹೇಶ್ ಶಿಕ್ಷಕರು  ಮರಡಿಕೆರೆ ಇವರ ಅಧ್ಯಕ್ಷತೆಯಲ್ಲಿ  ಡಾ. ಬಿ. ಆರ್.ಅಂಬೇಡ್ಕರ್  ಭವನ ಸಕಲೇಶಪುರ ದಲ್ಲಿ ನಡೆಯಿತು.


ಕೀರ್ತಿ ಪೊಲೀಸ್
ಸುಳ್ಳಕ್ಕಿ ರವರು ಬಂದ ಗಣ್ಯರ ಗುಣಗಳನ್ನು
ವಿಶೇಷತೆಯನ್ನ ವಿವರಿಸುತ್ತ
ತುಂಬಾ ಅರ್ಥ ಗಂಭಿತವಾಗಿ
ಸ್ವಾಗತವನ್ನು ಮಾಡಿದರು.

ಕಾರ್ಯಕ್ರಮದ ನಿರೂಪಣೆ ಯನ್ನೂ ಉಮಾದೇವಿ ಮತ್ತು ಆನಂದ  ಶಿಕ್ಷಣ ಇಲಾಖೆ ಯಸಳೂರು ರವರು ನಡೆಸಿ ಕೊಟ್ಟರು.




ಕಾರ್ಯಕ್ರಮದ  ಉದ್ಘಾಟನೆಯನ್ನೂ ಶಾಸಕರಾದ ಸಿಮೆಂಟ್ ಮಂಜು ರವರು ನೆರವೇರಿಸಿ ಮಾತನಾಡಿ ನಾನು ಶಾಸಕನಾಗಿ ಹಾಗೂ ಈ ಹಿಂದೆ ಶಾಸಕರಾಗಿದ್ದ ಮಾಜಿ ಸಚಿವರಾದ ಎಚ್ ಕೆ ಕುಮಾರಸ್ವಾಮಿ ರಾಗಲಿ, ಉತ್ತಮವಾದ ಶಿಕ್ಷಣ ಪಡೆದು ಉತ್ತಮವಾದ ಜನಪ್ರತಿನಿಧಿಗಳಾಗಿ ಹೊರಹೊಮ್ಮಿದ್ದೆ ಆಗಿದ್ದರೆ,


“ಇತಿಹಾಸ ಅರಿಯದವನು
ಇತಿಹಾಸ ಸೃಷ್ಟಿಸಲಾರ”

“ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವನು ಘರ್ಜಿಸಲೇಬೇಕು”

ಡಾ. ಬಿ ಆರ್ ಅಂಬೇಡ್ಕರ್.

ಅಂಬಾನಿಗೂ ಒಂದೇ ಮತ
ಅಂಬಾನಿ ಕಾರ್ ತೊಳೆಯುವ
ಸೇವಕನಿಗೂ ಒಂದೇ ಮತ
ಸಮಾನ ಹಕ್ಕು ಕೊಟ್ಟು ಸರ್ವರಿಗೂ ನ್ಯಾಯ ಕೊಡಿಸುವಂತಹ ಸಂವಿಧಾನ ಕೊಟ್ಟ ಡಾ. ಬಿಆರ್ ಅಂಬೇಡ್ಕರ್  ರವರು ಕೊಟ್ಟ ಭಿಕ್ಷೆ…  ಇಲ್ಲಿ ಬಂದಿರುವ ಎಲ್ಲಾ ವಿದ್ಯಾರ್ಥಿಗಳು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ರವರ ಆದರ್ಶಗಳನ್ನು  ಪಾಲಿಸಿ ಅವರಂತೆ ಉತ್ತಮ ವ್ಯಕ್ತಿಗಳಾಗಿ ಎಂದು ಶಾಸಕ ಸಿಮೆಂಟ್ ಮಂಜು ಅವರು ಹೇಳಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಡಾ.ಶಿವಕುಮಾರ್ ರವರು ಮಾತನಾಡಿ ” ಬಾಬಾಸಾಹೇಬ್ ಡಾ||ಬಿ.ಆರ್ ಅಂಬೇಡ್ಕರ್ ರವರು ನಮಗೆ ಸ್ಪೂರ್ತಿ ಮಯಾಗಬೇಕು. ಅಂಬೇಡ್ಕರ್ ರವರಲ್ಲಿದ್ದ ಶಿಕ್ಷಣದ ಚಿಂತನೆ,ನಡೆ-ನುಡಿ, ಶೀಲವನ್ನು  ಪಾಲಿಸಿದರೆ ನಾವುಗಳು ನಿಜವಾಗಲೂ ಮಹತ್ತರವಾದ ಸ್ಥಾನಕ್ಕೇರುತ್ತೇವೆ. ಪ್ರತಿಷ್ಠಿತ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡು ನಾವು ಓದಬೇಕಾಗಿದೆ. ದಿನಕ್ಕೆ ಕನಿಷ್ಠ 6  ಗಂಟೆಗಳ ಕಾಲ ಓದಿಗಾಗಿಯೇ ಮೀಸಲಿಟ್ಟರೇ ಉನ್ನತ ಮಟ್ಟದ ಹುದ್ದೆಗೇರುವುದು ದೊಡ್ಡ ಮಾತಲ್ಲ. ಬಾಬಾಸಾಹೇಬರು ವಿದ್ಯಾರ್ಥಿಗಳಿಗೆ ಹೇಳಿರುವ ಮಾತುಗಳನ್ನು ನಾವು ನೆನಪಲ್ಲಿಟ್ಟುಕೊಂಡು ಅದರಂತೆ ವಿದ್ಯೆ ಗಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ,ಈ ರೀತಿಯಾಗಿ ನಾವು ಅಂಬೇಡ್ಕರ್ ರವರಿಗೆ ಗೌರವ ಕೊಡಬೇಕಾಗಿದೆ. ನೌಕರರು ಈ ರೀತಿಯಲ್ಲಿಯೇ ಇನ್ನಷ್ಟು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಜೊತೆಗೆ ಇವರ ಮುಂದಿನ ವಿದ್ಯಾಭ್ಯಾಸ ದಾರಿಯಲ್ಲಿ ಸರಿಯಾದ ಆಯ್ಕೆಗಳನ್ನು ತಿಳಿ ಹೇಳುವ ಜೊತೆಗೆ ಹತ್ತಾರು ಮಹನೀಯ ಅಧಿಕಾರಿಗಳನ್ನು ಸೃಷ್ಠಿಸುವಂತಹ ವಾತಾವರಣವನ್ನು ನಿರ್ಮಿಸಬೇಕೆಂದು ವಿದ್ಯಾರ್ಥಿಗಳು ಮತ್ತು ನೌಕರರಿಗೆ  ಮಾರ್ಗದರ್ಶನ ನೀಡುವ ಜೊತೆಗೆ ಅಭಿನಂದನೆ ಸಲ್ಲಿಸಿದರು.


ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್ ರವರು ಮಾತನಾಡಿ  ನಾನು ಲೋಕಸಸಭಾ ಸದಸ್ಯರಾಗಿ ಏನಾದರು ಆಗಿದ್ರೆ  ನಾವೆಲ್ಲರೂ ಸಮಾನ ಶಿಕ್ಷಣ ಪಡೆಯಲು ಅವಕಾಶ ಆಗಿದೆ ಅಂದ್ರೆ ಅದು ಡಾ ಬಿ ಆರ್ ಅಂಬೇಡ್ಕರ್ ರವರು ಕೊಟ್ಟ ಸಂವಿಧಾನ.
ನಾನು ಲೋಕಸಭಾ ಸದಸ್ಯನಾಗಿ ಇರುವುದಕ್ಕಿಂತ ಮುಂಚೆ  ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಆನುಯಾಯಿಯಾಗಿ ಇದ್ದೆ.
ಸಂಸದನಾಗಿ ನಾನು ಹೋದಾಗ  ಅಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಸ್ವಸಜಿತವಾದ ಒಂದು ಗ್ರಂಥಾಲಯವನ್ನು ನೋಡಿದೆ
ಜೊತೆಗೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಬರೆದ ಸಂವಿಧಾನದ ಮೂಲ ಪ್ರತಿಗಳನ್ನ  ಇಲ್ಲಿ  ಸಂಗ್ರಹಿಸಿ ಇಡಲಾಗಿದೆ ಎಂದು ತಿಳಿದು ನಾನು ತುಂಬಾ ಖುಷಿ  ಪಟ್ಟೆ.
  ಗ್ರಂಥಾಲಯದಲ್ಲಿ ಸುಮಾರು 50,000  ಬುಕ್ಕುಗಳನ್ನ ಸಂಗ್ರಹಿಸಿ ಇಡಲಾಗಿದೆ
ನಮ್ಮ ವಯಸ್ಸು 60 ರಿಂದ 70
ವರ್ಷಕ್ಕೆ ಒಂದೇ ಬುಕ್ಕುಗಳನ್ನು ಓದಿದರು ಸಹ ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ  ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ನಮ್ಮೆಲ್ಲರ ಬದುಕಿಗೆ ಕೊಟ್ಟ ಕೊಡುಗೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಸಕಲೇಶಪುರ ಮೂಲದ ಎನ್.ಈ  ಕ್ರಾಂತಿ ಐ.ಎಫ್.ಎಸ್,ಡಿ.ಸಿ.ಎಫ್- ಬೆಳಗಾವಿ, ಹೆಚ್.ಎಸ್ ಕರುಣಾಕರ್- ಸಹಾಯಕ ಆಯುಕ್ತರು, ವಾಣಿಜ್ಯ ತೆರಗೆ ಇಲಾಖೆ ಬೆಂಗಳೂರು, ರಾಜ್ಯ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಾದ ಹೆತ್ತೂರು ಅಣ್ಣಯ್ಯ, ಮುರುಳಿ ಮೋಹನ್
ಕಾಂಗ್ರೆಸ್  ಮುಖಂಡರು
ಸಕಲೇಶಪುರ ಮತ್ತು ಆಲೂರು ವಿಧಾನಸಭಾ ಕ್ಷೇತ್ರ,
ಶಾಂತರಾಜ್ ಶಿಡಿಗಳಲೆ(ಪಿ.ಡಿ.ಓ)-ಅಧ್ಯಕ್ಷರು,ಸಕಲೇಶಪುರ ಸ.ನೌ.ಸಂಘ ಮತ್ತು ಡಿ.ಶಿವಕುಮಾರ್(ರಾಜ್ಯಾಧ್ಯಕ್ಷರು,ಕ.ರಾ.ಸ.ಎಸ್.ಸಿ/ಎಸ್.ಟಿ ನೌ.ಸ.ಸಮಿತಿ), ರಾಜೇಂದ್ರ ದೊಡ್ಡಮಗ್ಗೆ, ಗಂಗಾಧರ್ ಜಿ.ಡಿ(ಕಾರ್ಯನಿರ್ವಾಹಣಾಧಿಕಾರಿಗಳು,ಸಕಲೇಶಪುರ), ಮಹೇಶ್ವರಪ್ಪ ಟಿ.ಸಿ(ಮುಖ್ಯಾಧಿಕಾರಿಗಳು,ಪುರಸಭೆ) ,ಯು.ಎಂ ಪ್ರಕಾಶ್ ಕುಮಾರ್(ಸಹಾಯಕ ನಿರ್ದೇಶಕರು,ಕೃಷಿ ಇಲಾಖೆ) , ಡಾ||ವೆಂಕಟೇಶ್(ಪಶುಸಂಗೋಪನಾ ಇಲಾಖೆ), ಡಾ||ಮಧುಸೂದನ್(ವೈದ್ಯರು), ಪೃಥ್ವಿ(ಪೊಲೀಸ್ ಇಲಾಖೆ), ಆರ್.ಪ್ರಸನ್ನ(ಪಿ.ಎಸ್.ಐ), ಎಸ್.ಕೆ ಕೃಷ್ಣಪ್ಪ(ಪಿ.ಎಸ್.ಐ), ಜಿ.ಪಿ ದೇವರಾಜು(ಪಿ.ಎಸ್.ಐ), ಕೊಮಾರಯ್ಯ ಬಿ.ಹೆಚ್(ನಿವೃತ್ತ ಬಿ.ಇ.ಓ), ಕೆ.ಎನ್ ನಿರ್ವಾಣಯ್ಯ(ನಿವೃತ್ತ ಮುಖ್ಯೋಪಾಧ್ಯಾಯರು), ಹೆಚ್.ಆರ್ ಕೊಮಾರಯ್ಯ(ನಿವೃತ್ತ ಪಂ.ಅ.ಅಧಿಕಾರಿಗಳು), ಕೆ.ಬಿ ಬೈರಪ್ಪ(ನಿವೃತ್ತ ಮುಖ್ಯೋಪಾಧ್ಯಾಯರು) ರವರು ಹಾಗೂ ಅಪಾರ ಸಂಖ್ಯೆಯಲ್ಲಿ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಮತ್ತು ಕುಟುಂಬಸ್ಥರು ಹಾಗೂ ತಾಲ್ಲೂಕಿನ ಹಲವು ಸಂಘಟನೆಯ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು.

Related posts

ಉಪ ವಿಭಾಗ ಮಟ್ಟದ ಸಮಿತಿ ಸಭೆ

Bimba Prakashana

ಸಿಡಿಲು ಬಡಿದು ಹಸುಗಳು ಬಲಿ

Bimba Prakashana

ಹೆತ್ತೂರು ಅಧ್ಯಕ್ಷರಾಗಿ ಸುಶ್ಮಿತಾ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More